സെന്റ് ജോസഫ് എ യു പി എസ് കളിയൂർ(ಸೈಂಟ್ ಜೋಸೆಫ್ಸ್ ಎ.ಯು.ಪಿ.ಎಸ್ ಕಳಿಯೂರು)/ചരിത്രം

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಜ್ಞಾನ ಸಂಪಾದನೆಯ ಗುರಿಯಿಂದ ಶಿಕ್ಷಣವು ಬದುಕಿನ ಊರುಗೋಲಾಗಿದೆ. ಇಂತಹ ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸುತ್ತದೆ.ಶಿಕ್ಷಣದ ಬಳಿಕ ಉದ್ಯೋಗ ,ಹಣ ಸಂಪಾದನೆ ,ಸಂಸಾರ ಇವುಗಳ ಜೊತೆಗೆ ಸಮಾಜ ,ನೆರೆಹೊರೆಯವರಲ್ಲಿ ಉತ್ತಮ ಭಾಂದವ್ಯ , ಮಾನವೀಯ ಮೌಲ್ಯಗಳನ್ನು ಬೇರೂರುವ ಶಿಕ್ಷಣ ಗಳಿಸುವ ಹಗಲು ಕನಸುಗಳನ್ನು ಕಾಣುವುದು ಪ್ರತಿ ಮಾನವನ ಹೋರಾಟವಾಗಿದೆ.

ಸಂತ ಜೋಸೆಫರ ಹೆಸರಿನಿಂದ ಕರೆಯಲ್ಪಡುವ ಈ ಶಾಲೆಯು ಯೇಸುವಿನ ಪವಿತ್ರ ಹೃದಯದ ದೇವಾಲಯ ವರ್ಕಾಡಿ ಇದರ ಅಧೀನದಲ್ಲಿದೆ . ಇದು 1885 ರಲ್ಲಿ ಅತೀ ವಂದನೀಯ ಸ್ವಾಮೀ ಸಿಪ್ರಿಯನ್ ಕುವೆಲ್ಲೋರವರ ನಾಯಕತ್ವದಲ್ಲಿ ಮಿಂಜ ಪಂಚಾಯತಿನ ಕಳಿಯೂರು ಎಂಬಲ್ಲಿ ಹುಲ್ಲು ಛಾವಣಿಯ ಸಣ್ಣ ಕಟ್ಟಡವೊಂದರಲ್ಲಿ ಸ್ಥಾಪಿಸಲ್ಪಟ್ಟಿತು .ಸರಿ ಸುಮಾರು 68ವರ್ಷಗಳ ಕಾಲ ಅನೇಕ ಮಕ್ಕಳಿಗೆ ವಿದ್ಯಾರ್ಜನೆ ನೀಡಿ ನಂತರ 1953 ರಲ್ಲಿ ವರ್ಕಾಡಿ ಧರ್ಮ ಕೇಂದ್ರದ ವ್ಯಾಪ್ತಿಯಲ್ಲಿ ನೂತನ ಕಟ್ಟಡದೊಂದಿಗೆ ತನ್ನ ಅಭಿಯಾನ ಮುಂದುವರಿಸಿತು.

1937ರಲ್ಲಿ ಈ ಶಾಲೆಗೆ ಸರಕಾರದಿಂದ ಅಂಗೀಕಾರ ಲಭಿಸಿತು 1956 ರಲ್ಲಿ ವಂದನೀಯ ಸ್ವಾಮೀ ಜೋಕಿಮ್ ಪಿರೇರಾ ಹಾಗೂ ಊರವರ ಕಠಿಣ ಶ್ರಮದ ಫಲವಾಗಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಮನ್ನಣೆ ಪಡೆಯಿತು. ಹೀಗೆ ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಶಿಕ್ಷಣ ಮಂಡಳಿಗೆ ಒಳಪಟ್ಟ ಕಾಸರಗೋಡು ವಲಯದಲ್ಲಿ ಹಿರಿಯ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು ಇದೀಗ ಈ ಶಾಲೆ 137 ವರ್ಷಗಳ ಇತಿಹಾಸದ ಪುಟಗಳನ್ನು ಬರೆದಿದೆ.ಆರಂಭದಲ್ಲಿ 5ನೇ ತರಗತಿಯವರೆಗೆ ಶಿಕ್ಷಣ ದೊರೆಯುತ್ತಿತ್ತು .ಕಳೆದ ಹಲವಾರು ವರ್ಷಗಳಿಂದ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಎ,ಬಿ,ಸಿ,ಡಿವಿಷನ್ ಗಳಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಾರೆ.ಕನ್ನಡ ಮಾಧ್ಯಮದ ಎರಡು ಡಿವಿಷನ್ ಗಳು ,ಇಂಗ್ಲೀಷ್ ಮಾಧ್ಯಮದ ಒಂದು ಡಿವಿಷನ್ ಇದೆ.2017-18 ನೇ ಶೈಕ್ಷಣಿಕ ವರ್ಷದಿಂದ ಈ ಸಂಸ್ಥೆಯು ಪ್ರಿ ಪ್ರೈಮರಿ ತರಗತಿಗಳನ್ನು ಆರಂಭಿಸಿದೆ. ಇದೀಗ ಈ ಸಂಸ್ಥೆಯಲ್ಲಿ ೮೦೦ ರಷ್ಟು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ .