ബി.ഇ.എം. എച്ച്. എസ്. കാസർഗോഡ്/അക്ഷരവൃക്ഷം/ ನದಿಯನ್ನು ಉಳಿಸಿ
SchoolCode: 11005
ನದಿಯನ್ನು ಉಳಿಸಿ
ನದಿಗಳು, ಹಳ್ಳಗಳು, ತೋಡುಗಳು ಮುಂತಾದವುಗಳು ನೀರಿನ ಮೂಲಗಳಾಗಿವೆ. ಇವುಗಳಲ್ಲಿ ನದಿಯು ಪ್ರಾಮುಖ್ಯತೆ ಹೊಂದಿದೆ. ನದಿಯಿಂದ ನಮಗೆ ತುಂಬಾ ಪ್ರಯೋಜನಗಳಿವೆ. ನದಿಯ ನೀರು ಭತ್ತ, ಇತರ ಕೃಷಿಗಳಿಗೆ ಉಪಯೋಗಿಸಲ್ಪಡುತ್ತದೆ. ಪ್ರಾಣಿಗಳು, ಪಕ್ಷಿಗಳು, ಇತರ ಜೀವಿಗಳಿಗೆ ಉಪಯೋಗವಿದೆ. ನಮಗೆ ಮರಳು ಸಿಗುತ್ತದೆ. ನದಿಯು ಮಳೆಯ ಅಭಾವದಿಂದ ಬತ್ತಿ ಹೋಗಿರುತ್ತದೆ. ಮರಳು ದಂಧೆಯಿಂದ ಜಾಸ್ತಿ ಆಳವಾಗಿ ಸಮುದ್ರದ ನೀರು ನದಿಗೆ ಸೇರುತ್ತದೆ. ಆದ್ದರಿಂದ ನದಿ ನೀರು ಕೂಡ ಉಪ್ಪುಆಗುತ್ತದೆ. ಇದರಿಂದ ನೆರೆ ಕೂಡ ಬರುತ್ತದೆ. ಅಧಿಕವಾದ ಕಾರ್ಖಾನೆಗಳ ನಿರ್ಮಾಣ ಮತ್ತು ಅವುಗಳಿಂದ ಹೊರಹೊಮ್ಮುವ ವಿಷಯುಕ್ತ ಅನಿಲಗಳು ನದಿನೀರನ್ನು ಮಲಿನಗೊಳ್ಳುತ್ತದೆ. ಕೆಲವು ಪ್ರಾಣಿಗಳ, ಮನುಷ್ಯರ ಹೆಣಗಳ ನೀರಲ್ಲಿ ಬಿಸಾಡುವುದರಿಂದ ನೀರು ಮಲಿನವಾಗುತ್ತದೆ. ಮೀನಿಗೆ ಬೇಕಾಗಿ ಕೆಲವು ರಾಸಾಯನಿಕ ವಸ್ತುಗಳನ್ನು ನದಿಗೆ ಸಿಂಪಡಿಸುವುದರಿಂದ ನೀರು ಮಲಿನಗೊಳ್ಳುತ್ತದೆ. ಕಾರ್ಖಾನೆಯ ವಿಷಯುಕ್ತ ಅನಿಲವನ್ನು ನದಿಗೆ ಬಿಡಬಾರದು. ತ್ಯಾಜ್ಯವಸ್ತುಗಳನ್ನು ನದಿಗೆ ಬಿಸಾಡಬಾರದು. ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು. ಇದರಿಂದ ಮಳೆಯ ಪ್ರಮಾಣ ಹೆಚ್ಚಾಗುತ್ತದೆ. ಹಳ್ಳ ಕೆರೆಗಳು ತುಂಬಿ ನದಿಯನ್ನು ಸೇರುತ್ತದೆ. ನದಿಯನ್ನು ಸಂರಕ್ಷಿಸಬೇಕು.
സാങ്കേതിക പരിശോധന - Vijayanrajapuram തീയ്യതി: 05/ 05/ 2020 >> രചനാവിഭാഗം - ലേഖനം |
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കാസർഗോഡ് ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ ലേഖനംകൾ
- കാസർഗോഡ് ജില്ലയിലെ അക്ഷരവൃക്ഷം ലേഖനംകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കാസർഗോഡ് ഉപജില്ലയിലെ അക്ഷരവൃക്ഷം-2020 ലേഖനംകൾ
- കാസർഗോഡ് ജില്ലയിൽ 05/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാം ഘട്ടത്തിൽ പരിശോധിച്ച സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാംഘട്ടത്തിൽ പരിശോധിച്ച ലേഖനം
- അക്ഷരവൃക്ഷം 2020 കന്നഡ രചനകൾ