ಕಡಲತೀರ
----------------
ಮರಳಿನ ರಾಶಿಯು ಅಲ್ಲಿಹುದು
ದೋಣಿಗಳ ಸಂಚಾರವು ಅಲ್ಲಿಹುದು
ಬಹು ಅಂದವ ಸೂಸುತ್ತಲಿಹುದು
ಕಡಲತೀರವು.... ಕಡಲತೀರವು....
ಗಾಳಿಯು ರಭಸದಿ ಬೀಸುತಲಿಹುದು
ತೆಂಗಿನ ಸೋಗೆಗಳು ಬೀಸುತ್ತಲಿಹುದು
ತೆರೆಗಳು ತೀರಕ್ಕೆ ಬಡಿಯುತಲಿಹುದು
ಸೂರ್ಯನು ಮೆಲ್ಲಗೆ ಮುಳುಗುತಲಿಹುದು
ಕಣ್ಣಿಗೆ ಹಬ್ಬದ ದೃಶ್ಯವು
ನೋಡಲು ಮನಮೋಹಕವು
ಜನಗಳು ತೀರದಿ ನೆರೆದಿರುವರು
ಪ್ರಕೃತಿಯ ಅಂದಕ್ಕೆ ತಲೆದೂಗಿದರು