എസ് .ഡി. പി. എച്ച്. എസ്. ധർമ്മത്തടുക്ക/others/ ರಜೆಯ ದಿನದಿ
ಪ್ರಕೃತಿ ಮುನಿದರೆ.....
ಮಳೆಯ ರಭಸಕೆ ಮುಳುಗಿ ಹೋಯಿತು ದೇವನಾಡು ಕೇರಳ|| ಮುಗ್ಧ ಜನರದು ಪ್ರಾಣ ತಿಂದಿತು ಕ್ರೂರನಾಗಿಹ ವರುಣನು|| ಏನು ತಿಳಿಯದ ಜನರ ಜೀವವ ಕಸಿದುಕೊಂಡು ಹೋದೆಯಾ|| ಗೂಡು ಗುಡಿಸಲು ಏನು ಇಲ್ಲದೆ ಬದುಕುತಿಹರು ಈ ದಿನ || ತೋಡಿನಂತ ನೀರ ಝರಿಯಲಿ ಪ್ರಳಯವನ್ನೇ ಸೃಷ್ಟಿಸಿ|| ಸ್ವರ್ಗದಂತಹ ನಾಡನಿಂದು ನಾಶ ಮಾಡಿ ಬಿಟ್ಟೆಯ|| ಗಾಢ ನಿದ್ದೆಯಲಿ ಇರುವ ಜನರನು ದೋಚಿಕೊಂಡು ಹೋದೆಯಾ|| ಯಾವ ದ್ವೇಷವ ಇಲ್ಲಿ ತೋರಿದೆ ಕುರುಣಿ ಇಲ್ಲವೆ ನಿನಗಿದು|| ಕಳೆದು ಹೋದವರ ಹುಡುಕುತಲಿಹರು ನಮ್ಮ ಹೆಮ್ಮೆಯ ಸೈನ್ಯವು|| ಕೇಸರ ಅಡಿಯಲಿ ಜನರ ರಾಶಿಯ ತೆಗೆದರೆಲ್ಲವೂ ಹೆಣಗಳು || ಇಂದಿನ ಮಕ್ಕಳೇ ಕೇಳಿ ತಿಳಿಯಿರಿ ಪ್ರಕೃತಿ ನಮ್ಮ" ಗೆಳೆಯರು"|| ಸ್ನೇಹ ಪ್ರೀತಿ ತೋರದಿದ್ದರೆ ಮುಂದೆ ಒಂದು ದಿನ ಇದೇ ಗತಿ||
|