Avala A. L. P. S. Bayar/ചരിത്രം

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് Avala ALP School Bayar. 1896 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ BAYAR എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.


1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ಟರ್ ಅವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮ್ಯಾನೇಜರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ಅವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ಅವರು ಶಾಲೆಯ ಮ್ಯಾನೇಜರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಒಬ್ಬ ಅಧ್ಯಾಪಕ ಮತ್ತು ಆರು ಅಧ್ಯಾಪಿಕೆಯರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ.

"https://schoolwiki.in/index.php?title=Avala_A._L._P._S._Bayar/ചരിത്രം&oldid=1517139" എന്ന താളിൽനിന്ന് ശേഖരിച്ചത്