ജി.എച്ച്.എസ്. എസ്. മൊഗ്രാൽ പുത്തൂർ/അക്ഷരവൃക്ഷം/ಉಳಿಸು ಪ್ರಕೃತಿಯ

ಉಳಿಸು ಪ್ರಕೃತಿಯ

ಜಗದ ಕೊಡುಗೆ ಈ ನಮ್ಮಯ ಪರಿಸರ
ಅರಿತುಕೊ ಮಾನವ ಈ ವಿವರ
ನಿನ್ನದೆಂದು ಕೊಲ್ಲದಿರು ಜಗದಲಿ
ಸಾಗು ನೀ ನಲ್ಮೆಯ ಬೆಳಕಲಿ

ಪೃಕೃತಿಯ ಮಡಿಲಲಿ ಜೀವಿಗಳು ಹಲವು
ತಮ್ಮಯ ಪಾಡಿಗೆ ಬದುಕಿಹವು
ಜೊತೆಯಲಿ ನೀ ಬದುಕುವ ಬಿಟ್ಟು
ಏಕೆ ಬಿಡಿಸುವೆ ಪೃಕೃತಿಯ ಗುಟ್ಟು

ದಿನೇ ದಿನೇ ಮಾಡುವೆ ಪೃಕೃತಿಯ ನಾಶ
ಸಾಧು ಪ್ರಾಣಿಗಳೆಲ್ಲವೂ ವಿನಾಶ
ಬಲಿಯಾಗುವೆ ಪೃಕೃತಿಯ ವಿಕೋಪದಲಿ
ಶಾಪದಲಿ ಮಹಾಮಾರಿಯಲಿ

ತಿಳಿದೂ ತಿಳಿಯದಂತೆ ನಿನ್ನ ವರ್ತನೆ
ಪ್ರಕೃತಿಯ ಮುಂದೆ ನೀ ಸಣ್ಣವನೇ
ಖಗಮೃಗದೊಂದಿಗೆ ಪೃಕೃತಿಯ ಉಳಿಸು
ನಿನ್ನಯ ವಂಶವನುದ್ಧರಿಸು

ಶುಚಿತ್ವ ಪರಿಸರ ಸುಂದರ ಪರಿಸರ
ಮುಂಜಾಗ್ರತೆಯೇ ನಿನಗಾಧಾರ
ಕಳೆದರೆ ನಷ್ಟವು ಸೌಭಾಗ್ಯ
ಮರೆತೆಯಾ ಆರೋಗ್ಯವೇ ಭಾಗ್ಯ.....

ಶ್ರೀಜ. ಯಂ
X ജി.എച്ച്.എസ്. എസ്. മൊഗ്രാൽ പുത്തൂർ,കാസർഗോഡ്,
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത