എസ്. എന്. എച്ച്എസ്. പെർള/അക്ഷരവൃക്ഷം/ Corona

10:53, 22 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= Corona | color= 2 }} <center> <poem> "ಆವರಿಸದಿರು ಮೃ...' താൾ സൃഷ്ടിച്ചിരിക്കുന്നു)
Corona


"ಆವರಿಸದಿರು ಮೃತ್ಯುರೂಪಿಯೇ (ಕೋರೊನ) ಜಗವ....
ಕೇಳು ನನ್ನ ಮಾತ ನಾ ಪುಟ್ಟ ಮಗು,
ಸೆಳೆಯುವುದಂತೆ ಎಲ್ಲರ
ನಿನ್ನ ಸೆಳೆಯದೇ
ನನ್ನ ಮುಗ್ಧ ಸ್ನಿಗ್ಧ ನಗು??".

"ಕೇಳುತಿಹುದು ಎಲ್ಲೆಲ್ಲೂ
ಬರೀ ನಿನ್ನಯ ಅಟ್ಟಹಾಸ,
ಕಮರಿಸುವ ಛಲವೇಕೆ ನಿನಗೆ ಈಗಷ್ಟೇ ಅರಳುತ್ತಿರುವ ಕಂಗಳ ಕನಸ....?".

"ಏಕೆ ನಡೆಸಿರುವೆ ನೀ ಹೀಗೆ
ಎಲ್ಲೆಲ್ಲೂ ರುದ್ರ ನರ್ತನ...?,
ವೃದ್ಧರೂ, ಪುಟ್ಟ ಪೋರರು ತೆರುವುದೇ ಹೆಚ್ಚು
ನಿನ್ನ ಆಟಕ್ಕೆ ತಮ್ಮ ಪ್ರಾಣ".

"ತುಂಬಿಹರಿಲ್ಲಿ ಉಗ್ರರಂತೆ
ಮನುಕುಲದ ನಾಶಕ್ಕೆ
ನಿನ್ನ ಬಳಸುವ ಕ್ರೂರಿಗಳೇ....,
ಆವರಿಸಿಹುದು ಭಯ ಎಲ್ಲರಲ್ಲೂ ಕಾಣಲಾರೆವೇನೋ ನಾಳೆ... ".

"ಕಾಯ್ದು ಸಾಮಾಜಿಕ ಅಂತರ,
ಅನುಸರಿಸಲು ಜನನಾಯಕನರುಹಿದ ಸಪ್ತ ಸೂತ್ರ,
ಖಂಡಿತ ಬರುವ ನಾಳೆಗಳಲ್ಲಿ
ನಮ್ಮ ಬದುಕಾಗುವುದು ಸುಸೂತ್ರ ".

SUNIDHI B
5 A SNHS Perla
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത