ತುತ್ತು ಅನ್ನಕ್ಕಾಗಿ ಅಲೆದು ರಾತ್ರಿ ಹಗಲು ಕಷ್ಟಗೈದು ಪ್ರೀತಿಯಿಂದ ಸಾಕಿ ಸಲಹಿ ಎದೆಯೆತ್ತರ ಬೆಳೆದ ಮಗನು ಕಾಣದಾದನೋ...ನಮ್ಮ ಕಾಪಾಡುವನೋ..... ಬಡಕಲಾದ ಜೀವ ಎರಡು ಸೂರುಗಂಜಿಯಿಲ್ಲದಾಗಿ ದುಡುಮೆ ಮಾಡಲಾಗದೆಯೇ ದಾರಿಕಾದೆವೋ , ಮೋನು ಬರುವನೆಂಬ ಕನಸು ಕಂಡು ಕಾಣದಾದನೋ...ನಮ್ಮ ಕಾಪಾಡುವನೋ..... ಸುಕ್ಕುಗಟ್ಟಿ ನಿಂತ ಮುಖದಿ ಚಿಂತೆ ಕ್ರಾಂತರಾದ ಮನಸು ಎಡವಿ ತಡವಿ ದಿಟ್ಟಿಸುತ್ತ ಕಾಯುತ್ತಿರುವ ಜೀವವೆರಡು ಮನದೆ ದು:ಖಿಸುತ್ತ ಕಳೆದು ಕಾಣದಾದನೋ...ನಮ್ಮ ಕಾಪಾಡುವನೋ.....