🌹🌹ಹೂವೇ ಹೂವೇ
ಗುಲಾಬಿ ಹೂವೇ
ಕೆಂಪು ಬಣ್ಣದ
ಗುಲಾಬಿ ಹೂವೇ
ಎಲ್ಲರ ಮನಸ ನೀ
ಸೆಳೆದಿರುವೇ
ಬಗೆ ಬಗೆ ಬಣ್ಣದಿ ನೀ
ಅರಳಿರುವೇ
ಹೂದೋಟಕೊಂದು
ಶೋಭೆಯ ತರುವೆ
ರಕ್ಷಣೆಗೆ ಮುಳ್ಳನು
ನೀ ಪಡೆದಿರುವೆ
ನಿನ್ನ ನು ಬೆಳೆಸುವ
ಕೃಷಿಕರ ಮನಕೆ
ಖುಷಿಯನು ನೀನು ತಂದಿರುವೇ
ಎಷ್ಟು ಚಂದ ನೀನು
ತರತರದ ಗಾತ್ರದಿ ನೀನಿರುವೆ
ದೇವರ ಪೂಜೆಗು,ಸ್ತ್ರೀಯರ ಮುಡಿಗೂ
ನೀ ಶೋಭೆಯ ತರುವೆ
ಗುಲಾಬಿಹೂವೇ ನೀನೆಂದೂ
ನನ್ನಯ ತೋಟದಿ ಅರಳುತಿರು
ನಮ್ಮಯ ಮನಕೆ ಮುದವ ಕೊಡು