ನೀರವ ರಾತ್ರಿಯ ಕಾರ್ಮುಗಿಲಿನಲೆಗಳನು ಗುಡುಗು,ಮಿಂಚುಗಳು ಸಿಡಿದೆಬ್ಬಿಸುತ್ತಿತ್ತು ಒಡೆದು ಚೂರಾದ ಮಾಡುಗಳೆಡೆಯಿಂದ ಮಳೆ ನೀರ ಜಲಧಾರೆ ಮನೆಯೊಳಗಿತ್ತು ಒಳಕೋಣೆಯ ಚಿಂದಿ ಹಾಸಿನಲ್ಲಿ ಲೋಖ ತಿಳಿಯದ ಮಗು ನಿದ್ರಿಸಿತ್ತು ನೀರ ಧಾರೆಯನ್ನು ಕೋಣೆಯೊಳು ಹರಿಯದೆ ; ತಾಯಿ ಕರುಳು ಪ್ರತಿಭಟಿಸುತ್ತಿತ್ತು ತನ್ನೆಲ್ಲಾ ತುಣುಕು ಬಟ್ಟೆಗಳ ಚೂರನ್ನು ಒಂದಾಗಿಸಿ ಒಂದೊಂದಾಗಿಸಿ... ಕೂಸಿನ ಮೈಮೇಲೆ ಹಾಕುವ ತಾಯಿ ; ತನ್ನೆಲ್ಲಾ ಚಳಿಯನ್ನು ಮಡುವು ಗಟ್ಟಿದ ನೀರಲಿ ಬಿಸಿಯಾಗಿಸಿ....ಬಿಸಿಯನ್ನಾರಿಸಿ.... ಪ್ರೌಢತೆಯ ಪ್ರಬುದ್ಧತೆ ತಲುಪಿದ ಮಗು ಅವನಾದನು..ನವ ಯುವಕನಾದನು ತಾರುಣ್ಯ, ಯವ್ವನ ಕಳೆದ ತಾಯಿ ಹಿರಿಯಳಾದಳು...ತುಚ್ಛ ಮುದುಕಿಯಾದಳು ಗೆಲ್ಲುಗಳಿಗಾಸರೆ ನೀಡಿದ ಬೇರು ಬಿರುಗಾಳಿಗೆ ಅಲುಗಾಡಿದಾಗ...; ಗೆಲ್ಲುಗಳು ಕೆಳಗೆ ಮುರಿದು ಬಿಲ್ದುವ ತರಃ ಸಂತಾನ ಗೆಲ್ಲು ಮುರಿಯುತ್ತಿತ್ತು ಮನೆಯಲ್ಲಿ ತಾಯಿಗೆ ಯಾಕೆ ಕಿರಿಕಿರಿ ? ಕೆಮ್ಮುವ ಮುದಿಜೇವ ಮಗನಿಗೂ ತುರಿತುರಿ ವಾಚಾಳ ತಾಯಿ ಹೆಂಡತಿಗೆ ಅಡಕತ್ತರಿ ವೃದ್ಧಾಶ್ರಮವೇ ತಾಯಿಗೆ ಸೂಕ್ತ ರೀತಿ.... ಕರುಣೆಯ ಪ್ರತಿರೂಪ ತಾಯಿ ವಾತ್ಸಲ್ಯದ ಕರುಣಾಮಯಿ ತಾಯಿ ಮಮತೆಯ ಮಧುವರ್ಣ ತಾಯಿ ಪ್ರೀತಿಯ ವೈಶಾಲ್ಯವೇ ಈ ತಾಯಿ ನವ ಮಾಸ ತಾಯಿ ಗಭ೯ದಾಳದಿ ನೆತ್ತರು ,ಲವಣಗಳ ಆಹಾರದಿ ಜನನೀ ದಾತೆಯ ಆರೈಕೆಯಲಿ ನವ ಕೂಸು ಕಂಡಿತೀ ಪೃಥ್ವಿಯಲಿ ನವ ಮಾಸ ಹೊತ್ತ ಈ ಜೀವದ ಒಡಲಾಳದ ಬಿಸಿ ತಾಗದೆ ಹೋಯ್ತೇ ಬಹು ಮಹಡಿ ಆಡಂಬರ ಮಳಿಗೆಯಲಿ ಈ ಮುದಿ ಜೀವಕಾಸರೆ ಇಲ್ಲವಾಯ್ತೇ