എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2025-26/2025-26/2025-26

20:39, 2 ജൂൺ 2025-നു ഉണ്ടായിരുന്ന രൂപം സൃഷ്ടിച്ചത്:- 11051sdphsd (സംവാദം | സംഭാവനകൾ) ('<nowiki>== <b class="term"><font size="5" color="blue" face="Noto Serif Kannada" font>2024_25 ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ</font></nowiki><nowiki></b></nowiki> <nowiki>==</nowiki> <nowiki><font size="5" color="black" face="Noto Serif Kannada" font>ದುರ್ಗಾಪರಮೇಶ್ವರಿ ಹೈ...' താൾ സൃഷ്ടിച്ചിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)

== <b class="term"><font size="5" color="blue" face="Noto Serif Kannada" font>2024_25 ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ</font></b> ==

<font size="5" color="black" face="Noto Serif Kannada" font>ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಇದರ ಪ್ರೌಢ ಶಾಲಾ ವಿಭಾಗದ 10ನೇ ತರಗತಿಯ ವಿದ್ಯಾರ್ಥಿಗಳ ವಿದಾಯಕೂಟ ಸಮಾರಂಭವು ಶಾಲಾ ಸಭಾಂಗಣದಲ್ಲಿ ಜರಗಿತು. ಪ್ರಸ್ತುತ ಕಾರ್ಯಕ್ರಮದ ಸಭೆಯನ್ನು ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ವಿದ್ಯಾರ್ಥಿಗಳ ಶಿಸ್ತುಬದ್ದ ಜೀವನ ಬದುಕಿನ ನಿರಂತತೆಗೆ ಸಹಕಾರಿಯಾಗುತ್ತದೆ. ಇದು ಮುಂದಿನ ಉತ್ತಮ ಜೀವನಕ್ಕೆ ದಾರಿದೀಪವಾಗಿ, ಕಲಿಕೆಯು ವಿದ್ಯಾರ್ಥಿಯನ್ನು ಪ್ರೌಢ ಗೊಳಿಸುತ್ತದೆ" ಎಂದು ಅಭಿಪ್ರಾಯಪಟ್ಟರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ "ವಿದ್ಯಾರ್ಥಿ ಬದುಕು ಅತ್ಯಂತ ಸುಂದರವೂ ಸಂಭ್ರಮವೂ ಆಗಿದ್ದು ಮುಂದಿನ ಬದುಕಿಗೆ ಉತ್ತಮ ಬುನಾದಿಯಾಗಿರುತ್ತದೆ" ಎಂದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಅವರು ವಿದ್ಯಾರ್ಥಿಗಳ ಕುರಿತಾಗಿ ಪ್ರಾಸ್ತಾವಿಕ ಮಾತುಗಳಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ಅಧ್ಯಾಪಕರಾದ ಶ್ರೀ ಕೆ ರಾಮಕೃಷ್ಣ ಭಟ್, ಶ್ರೀ ಶಶಿಕುಮಾರ್ ಪಿ ಶುಭಹಾರೈಸಿದರು. ವಿದ್ಯಾರ್ಥಿಗಳು ಮೂರು ವರ್ಷದ ತಮ್ಮ ಕಲಿಕೆಯ ಅನುಭವಗಳನ್ನು ಹಂಚಿಕೊಂಡರು.

ತದನಂತರ 2024 - 25 ನೇ ಸಾಲಿನ ವಿವಿಧ ಕ್ರೀಡಾ ಮೇಳ, ಗಣಿತ ಮೇಳ, ಕಲೋತ್ಸವಗಳಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ ಹಾಗೂ ಭಾರತ ಸ್ಕೌಟ್ ಮತ್ತು ಗೈಡ್ ನಲ್ಲಿ ರಾಜ್ಯ ಪುರಸ್ಕಾರ ಅರ್ಹತೆ ಹೊಂದಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು.

ವಿದ್ಯಾರ್ಥಿಗಳಿಂದಲೇ ಸಂಯೋಜನೆಗೊಂಡ ಕಾರ್ಯಕ್ರಮದಲ್ಲಿ ಶ್ರುತಿಕಲಾ, ಅನನ್ಯ ಭಟ್ ಹಾಗೂ ಜಯಶ್ರೀ ಪ್ರಾರ್ಥಿಸಿದರು. ಮಾಣಿಪಾಡಿ ವೈಷ್ಣವಿ ಸ್ವಾಗತಿಸಿ, ಕೌಶಿಕ್ ಸುರೇಶ್ ಧನ್ಯವಾದ ಸಮರ್ಪಿಸಿದರು. ನೂತನ್ ಎಡಕ್ಕಾನ ಹಾಗೂ ಅನನ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.</font>