എസ് .ഡി. പി. എച്ച്. എസ്. ധർമ്മത്തടുക്ക/PTA/2024-25
PARENTAL AWARENESS PROGRAMME 2024
ಮೇ 29 ; ಇಂದು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ 2024-25 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಹೆತ್ತವರಿಗಾಗಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲು ಇವರು ಸಭಾಧ್ಯಕ್ಷತೆಯನ್ನು ವಹಿಸಿದರು. ಮುಖ್ಯೋಪಾಧ್ಯಾಯ ಶ್ರೀ ಇ.ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಾಲಾ ಮೇನೇಜರ್ ಶಂಕರನಾರಾಯಣ ಭಟ್ ಶುಭ ಹಾರೈಸಿದರು.ಮೂಡಂಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಜೋರ್ಜ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭವನ್ನು ಕೋರಿದರು. ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ಪಿ.ಟಿ.ಎ ಉಪಾಧ್ಯಕ್ಷ ಶ್ರೀ ವೇಣುಗೋಪಾಲ ಶೆಟ್ಟಿ,ಶಿಕ್ಷಕಿ ಶ್ರೀಮತಿ ಉಮಾದೇವಿ ಶುಭನುಡಿಗಳನ್ನಾಡಿದರು. ಶ್ರೀಮತಿ ಸುನಿತಾ ಸ್ವಾಗತಿಸಿ ,ಶ್ರೀ ಪ್ರದೀಪ್ ವಂದಿಸಿದರು.ಶ್ರೀ ಪ್ರಶಾಂತ್ ಹೊಳ್ಳ ಎನ್ ನಿರೂಪಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ರಕ್ಷಕ ಶಿಕ್ಷಕ ಸಂಘದ ಮಹಾಸಭೆ 2024
ಧರ್ಮತ್ತಡ್ಕ: ಜುಲೈ 27; ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 2024-25 ನೇ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಇಂದು ಶಾಲಾ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲು ವಹಿಸಿದರು. ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್, ಹೈಯರ್ ಸೆಕೆಂಡರಿ ಪ್ರಿನ್ಸಿಪಾಲ್ ಶ್ರೀ ರಾಮಚಂದ್ರ ಭಟ್ ಎನ್, ಗಣಿತ ವಿಭಾಗದ ಮುಖ್ಯಸ್ಥ ಶ್ರೀ ಶಶಿಕುಮಾರ್ ಪಿ ಹಾಗೂ ಶ್ರೀ ರಕ್ಷಿತ್ ಕುಮಾರ್ ಎಂ ಶುಭ ನುಡಿಗಳನ್ನಾಡಿದರು. ಶ್ರೀಮತಿ ಶ್ವೇತಾ ಕುಮಾರಿ ಎಂ ಹಿಂದಿನ ವರ್ಷದ ವಾರ್ಷಿಕ ವರದಿಯನ್ನು ವಾಚಿಸಿದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯನ್ನು ಈ ಸಂದರ್ಭದಲ್ಲಿ ರೂಪಿಸಲಾಯಿತು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಾಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಹೆತ್ತವರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮಕ್ಕೆ ಸೂರ್ಯನಾರಾಯಣ ಭಟ್ ಪ್ರಾರ್ಥನೆ ಹಾಡಿದರು, ಶ್ರೀಮತಿ ಸುನಿತಾ ಸ್ವಾಗತಿಸಿ, ಶ್ರೀಮತಿ ಉಮಾದೇವಿ ವಂದಿಸಿದರು, ಶ್ರೀ ಶಶಿಧರ ಕೆ ಕಾರ್ಯಕ್ರಮವನ್ನು ನಿರೂಪಿಸಿದರು