ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಮೇ 29 ; ಇಂದು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ  ಮಾಹಿತಿ ಕಾರ್ಯಾಗಾರವನ್ನು  ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭ 2023-24ನೇ  ಶೈಕ್ಷಣಿಕ ವರ್ಷದ SSLC ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಒಟ್ಟು 32 ವಿದ್ಯಾರ್ಥಿಗಳಿಗೆ ಹಾಗೂ 9 ವಿಷಯಗಳಲ್ಲಿ A+ ಪಡೆದ 11 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಆರ್ಥಿಕವಾಗಿ ಹಿಂದುಳಿದ,ಕನ್ನಡ ಮಾಧ್ಯಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ  "ಮೇಪೋಡು ಶ್ರೀ ಸುಬ್ರಾಯ ಮಯ್ಯ" ದತ್ತಿನಿಧಿಯನ್ನು  ಆಯ್ದ  2 ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ಶ್ರೀಮತಿ ಈಶ್ವರಿ.ಡಿ ವಿತರಿಸಿದರು.ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿಯನ್ನು ತಂದ ಪ್ರತಿಭಾನ್ವಿತ ವಿದ್ಯಾರ್ಥಿ ಸುಶ್ರೀತ್ ಎಸ್ ಐಲ್ ನ್ನು ಈ ಸುಸಂದರ್ಭದಲ್ಲಿ  ವಿಶೇಷವಾಗಿ ಗೌರವಿಸಲಾಯಿತು.2022-23 ನೇ ಸಾಲಿನ USS ಪರೀಕ್ಷೆಯನ್ನು ತೇರ್ಗಡೆ ಹೊಂದಿದ ಎಲ್ಲಾ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2023-24 ನೇ ಸಾಲಿನ ರಾಷ್ಟ್ರೀಯ ಮಟ್ಟದ NMMS ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು Scholarship ಗೆ ಅರ್ಹತೆಯನ್ನು ಪಡೆದ ಈಶಾನ್ ಶರ್ಮ ಈತನನ್ನು ಅಭಿನಂದಿಸಲಾಯಿತು.ಇದರೊಂದಿಗೆ ಸುಮಾರು 15  ವರ್ಷಗಳ ಕಾಲ ನಮ್ಮ ಶಾಲೆಯಲ್ಲಿ ಅಡುಗೆ ಸಹಾಯಕರಾಗಿ ಕರ್ತವ್ಯವನ್ನು ನಿರ್ವಹಿಸಿ ಇದೀಗ ನಿವೃತ್ತಿಹೊಂದುತ್ತಿರುವ ಶ್ರೀ ಸುಬ್ರಹ್ಮಣ್ಯ ಭಟ್ ಇವರನ್ನು ಗೌರವಿಸಲಾಯಿತು.ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲು ಇವರು ಸಭಾಧ್ಯಕ್ಷತೆಯನ್ನು ವಹಿಸಿದರು. ಮುಖ್ಯೋಪಾಧ್ಯಾಯ ಶ್ರೀ ಇ.ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಾಲಾ‌‌ ಮೇನೇಜರ್ ಶಂಕರನಾರಾಯಣ ಭಟ್ ಶುಭ ಹಾರೈಸಿದರು.ಮೂಡಂಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಜೋರ್ಜ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭವನ್ನು ಕೋರಿದರು. ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ಪಿ.ಟಿ.ಎ ಉಪಾಧ್ಯಕ್ಷ ಶ್ರೀ ವೇಣುಗೋಪಾಲ ಶೆಟ್ಟಿ‌,ಶಿಕ್ಷಕಿ ಶ್ರೀಮತಿ ಉಮಾದೇವಿ ಶುಭನುಡಿಗಳನ್ನಾಡಿದರು. ಶ್ರೀಮತಿ ಸುನಿತಾ ಸ್ವಾಗತಿಸಿ ,ಶ್ರೀ ಪ್ರದೀಪ್ ವಂದಿಸಿದರು.ಶ್ರೀ ಪ್ರಶಾಂತ್ ಹೊಳ್ಳ ಎನ್ ನಿರೂಪಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.


ವಿವಿಧ ಕ್ಲಬ್ ಗಳ ಉದ್ಘಾಟನೆ

ಶ್ರೀ ದುರ್ಗಾಪರಮೇಶ್ವರಿ ಪ್ರೌಢ  ಶಾಲೆ ಧರ್ಮತ್ತಡ್ಕದಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆಯು ಜರಗಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ  ಗೋವಿಂಧ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮ್ಯಾನೇಜರ್ ಶಂಕರ ನಾರಾಯಣ ಭಟ್  ಮಾತನಾಡಿ  "ಕ್ಲಬ್ ಗಳು ಮಕ್ಕಳ ಸೃಜನಶೀಲತೆಯ ಅನಾವರಣಕ್ಕೆ ಪೂರಕ ವೇದಿಕೆಯಾಗಿದೆ,ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು" ಎಂದು ಶುಭವನ್ನು ಹಾರೈಸಿದರು. ಶಿಕ್ಷಕಿ ಸುನೀತಾ ಟೀಚರ್ ಶುಭನುಡಿಗಳನ್ನಾಡಿದರು. ವಿಜ್ಞಾನ ಅಧ್ಯಾಪಕರಾದ ಸೂರ್ಯನಾರಾಯಣ ಭಟ್  ವಿಜ್ಞಾನ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಕುಮಾರಿ ವೃಷ್ಠಿ ಯಸ್ ರೈ ಸ್ವಾಗತಿಸಿ,  ಕುಮಾರಿ ಮನ್ನಿಪಾಡಿ ವೈಷ್ಣವಿ ವಂದಿಸಿದರು. ಕುಮಾರಿ ಅನನ್ಯ ಭಟ್ ಎಸ್  ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024 - 25

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀಮತಿ ಶಾರದಾ ಎಸ್ ಭಟ್ ಕಾಡಮನೆ ,ಯೋಗದ ಮಹತ್ವವನ್ನು ತಿಳಿಸಿದರು. "ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ, ಯೋಗದಿಂದ ರೋಗ ದೂರ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ಜಗತ್ತಿಗೆ ಯೋಗವು ಭಾರತದ ಕೊಡುಗೆಯಾಗಿದೆ" ಎಂದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್, ಶ್ರೀಮತಿ ಎನ್ ಗಂಗಮ್ಮ ಶುಭಾಶಂಸನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವಪ್ರಸಾದ್ ಸಿ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ನಿರೂಪಿಸಿದರು, ಶಶಿಧರ ಕೆ ವಂದಿಸಿದರು. ನಂತರ ಯೋಗ ಶಿಕ್ಷಕಿ ಶ್ರೀಮತಿ ಶಾರದಾ ಕಾಡಮನೆ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.
LK PRELIMINARY CAMP
.ಧರ್ಮತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ದಿನಾಂಕ 26/07/2024 ಶುಕ್ರವಾರದಂದು ಲಿಟ್ಲ್ ಕೈಟ್ಸ್ ನ 8ನೇ ತರಗತಿ ವಿಭಾಗದ ಮಕ್ಕಳಿಗೆ ಒಂದು ದಿನದ ಪ್ರಿಲಿಮಿನರಿ ತರಗತಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಂಜೇಶ್ವರ ಉಪ ಜಿಲ್ಲಾ ಕೈಟ್  ಕೋ ಆರ್ಡಿನೇಟರ್ ಮತ್ತು ಮಾಸ್ಟರ್ ಟ್ರೈನರ್ ಆಗಿರುವ ಶ್ರೀಮತಿ ಪ್ರಿಯ ಸಿ ಯಚ್ ಅವರು ತರಗತಿಯನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀ ಶಶಿಕುಮಾರ್ ಶುಭಾಶಂಸನೆಗೈದರು. ಲಿಟ್ಲ್ ಕೈಟ್ ಮಾಸ್ಟರ್ ಪ್ರದೀಪ್ ಸ್ವಾಗತಿಸಿದರು. ಲಿಟ್ಲ್ ಕೈಟ್ ಮಿಸ್ಟ್ರೆಸ್ ಸೌಮ್ಯ ವಂದಿಸಿದರು. ತರಗತಿಯಲ್ಲಿ ಲಿಟ್ಲ್ ಕೈಟ್ಸ್ ಉದ್ದೇಶ ಮತ್ತು ಅದರ ಪ್ರಯೋಜನವನ್ನು ಸವಿವರವಾಗಿ ಪ್ರಿಯ ಟೀಚರ್ ತಿಳಿಸಿಕೊಟ್ಟರು. ಮಕ್ಕಳನ್ನು ಗುಂಪುಗಳಾಗಿ ಮಾಡಿಸಿ ವಿವಿಧ ರೀತಿಯ ನೂತನ ಆಟ, ಆನಿಮೇಷನ್ , ಸ್ಕ್ರಾಚ್ , ರೋಬೋಟಿಕ್ಸ್ ಇತ್ಯಾದಿಗಳನ್ನು ತಿಳಿಸಿಕೊಡಲಾಯಿತು.ರಕ್ಷಕರು ತರಗತಿಯಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.


ಕಾರ್ಗಿಲ್ ವಿಜಯೋತ್ಸವ

KARGIL VIJAY DIVAS
ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.   ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.  "ನಾವಿಂದು  ನಮ್ಮ ಮನೆ ಮನಗಳಲ್ಲಿ ದೇಶ ಪ್ರೇಮ ಬೆಳೆಸಬೇಕು. ಕೇವಲ  ಯೋಧರಾಗಿ ಮಾತ್ರ ದೇಶ ಸೇವೆ ಮಾಡುವುದಲ್ಲ ದೇಶದ ಪ್ರತಿಯೊಂದು ಸಂಪತ್ತನ್ನು ಉಳಿಸಿಕೊಂಡು, ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಧನಾಗಿ ಸೇವೆ ಮಾಡುವುದು ಕೂಡಾ ನಮ್ಮ ಹೆಮ್ಮೆ" ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು.
KARGIL VIJAYA DIVAS
ಸಮಾಜ ವಿಜ್ಞಾನ ಅಧ್ಯಾಪಿಕೆ ಶ್ರೀ ಮತಿ ವಿಚೇತ ಬಿ ಕಾರ್ಗಿಲ್ ಹೋರಾಟದ ಅನಿವಾರ್ಯತೆ, ಹೋರಾಟದಲ್ಲಿ ಮಡಿದ ವೀರ ಸೈನಿಕರ ಬಲಿದಾನ, ಕೆಚ್ಚೆದೆಯ ಶೌರ್ಯದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆ ಮೂಡಿಸಿದರು. ಶ್ರೀ ಶಶಿಕುಮಾರ್ ಪಿ, ಶ್ರೀಮತಿ ಸುನಿತಾ ಕೆ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲಾಯಿತು.ರಾಜ್ ಕುಮಾರ್, ಪ್ರದೀಪ್, ದಿನೇಶ್ ಕೆ, ಕೇಶವಪ್ರಸಾದ ಎಡಕ್ಕಾನ ಸಹಕರಿಸಿದರು.  ಶಿವಪ್ರಸಾದ್ ಸಿ ಕಾರ್ಯಕ್ರಮವನ್ನು ನೇತೃತ್ವ ವಹಿಸಿದರು. ಶಶಿಧರ್ ಕೆ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ವಂದಿಸಿದರು.