ಆಹಾ ಆಹಾ ಎಷ್ಟು ಸುಂದರ?
ಇದುವೇ ಪ್ರಕೃತಿಯ ಮನೋಹರ
ಹಸಿರು ಗಿಡದಲಿ ಬಣ್ಣದಿ ಅರಳು
ಚಂದದಿ ಕಾಣುವ ಹೂ ಬಿಂಬಗಳು
ಮಲ್ಲಿಗೆ ಜಾಜಿ ಸಂಪಿಗೆ
ಹಳದಿ ಬಣ್ಣದ ಸೇವಂತಿಗೆ
ಎಲ್ಲೆಡೆ ಪರಿಮಳ ಹಬ್ಬುತಲಿ
ಬಣ್ಣದಿ ಕಂಡಿದೆ ಹೂದೋಟದಲಿ
ಹೊಂಬಣ್ಣದಿ ಹೊಳೆಯುವ ಕರವೀರ
ಶ್ವೇತ ಬಣ್ಣದಾ ಮಂದಾರ
ಮುಳ್ಳಿನ ತೊಟ್ಟಿನ ಗುಲಾಬಿದಳ
ಕೆಂಪು ಬಣ್ಣದ ದಾಸವಳ
ಚಿಟ್ಟೆ ದುಂಬಿ ಹೂದೋಟದಲಿ
ಹೂವಿನ ಮಕರಂದ ಹೀರುತಲಿ
ಸುಗಂಧ ಸೂಸುವ ಹೂವುಗಳು
ಅಂದದ ಚಂದದ ಹೂವುಗಳು