സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ ನಾರಾಯಣ ಹೊಳ್ಳ ಇವರು ಈ ಪಾವೂರು ಗ್ರಾಮದಲ್ಲಿ ಒಂದು ಶಾಲೆಯನ್ನು ತೆರೆಯಲು ಮುತುವರ್ಜಿ ವಹಿಸಿದರು. 20. 1.1954ರಂದು ಈ ಶಾಲೆಯನ್ನು ತೆರೆಯಲು ಕೇರಳ ಸರಕಾರದಿಂದ ಅನುಮತಿ ದೊರಕಿತು. ಶ್ರೀ ಯಂ ರುಕ್ಮಿಣಿ ಬೈಾ , ಅಧ್ಯಾಪಿಕೆ ಮತ್ತು ೨೯ ಮಂದಿ ಮಕ್ಕಳಿಂದ ಈ ಶಾಲೆಯು ಆರಂಭಿಸಿತು. ೧ ಮತ್ತು ೨ನೇ ತರಗತಿಗಳನ್ನು ಒಂದೇ ದಿನ ಆರಂಭದಿಂದಲೇ ತೆರೆಯಲಾಯಿತು. ಬಳಿಕ ಶ್ರೀ ರಾಮ ಹೊಳ್ಳ ಮುಖ್ಯೋಪಾಧ್ಯಾಯರಾಗಿ ೧. ೬.೧೯೫೪ ರಿಂದ ಕಾರ್ಯಕ್ಕೆ ತೊಡಗಿದರು. ೨೧.೮.೧೯೬೨ ರಂದು ಮಂಗಳೂರು ಧರ್ಮ ಪ್ರಾಂತ್ಯ ನಡೆಸುತ್ತಿರುವ ಕಥೊಲಿಕ್ ವಿದ್ಯಾ ಮಂಡಳಿ ಇವರು ಆಡಳಿತವನ್ನು ವಹಿಸಿಕೊಂಡರು. ಅವರ ಮೇಲ್ವಿಚಾರಣೆಯಲ್ಲಿ ಈ ಶಾಲೆಯ ಕಾರ್ಯವೆಸಗುತ್ತಿದೆ. ಪ್ರಸ್ತುತ ಈ ಶಾಲೆಯಲ್ಲಿ ೫ ಮಂದಿ ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ ಮಾಧ್ಯಮದ ಜೊತೆಗೆ ಅರಬಿಕ್ ಐಚ್ಛಿಕ ಭಾಷೆಯಾಗಿ ಬೋಧಿಸಲಾಗುತ್ತದೆ.