ജി. എച്ച്. എസ്. എസ്. ബന്തടുക്ക/അക്ഷരവൃക്ഷം/ ಕೊರೋನಾ ಭಯದಲ್ಲಿ...
ಕೊರೋನಾ ಭಯದಲ್ಲಿ...
ನಾನು ಬೆಳಿಗ್ಗೆ ಏಳುವುದಕ್ಕೆ ಮೊದಲೇ ನಮ್ಮ ಮನೆಗೆ ಯಾರೋ ಬಂದಿದ್ದರು. ನಾನು ಬೇಗಬೇಗನೆ ಎದ್ದು 'ಯಾರು ಬಂದೋ ಅಮ್ಮ?’ ಎಂದು ಕೇಳಲು ಹೊರಟಾಗ ಪಕ್ಕದ ಮನೆಯ ಪೂವಮ್ಮ ಆಂಟಿ ನನ್ನ ಎದುರಲ್ಲೇ ಕುಳಿತಿರುವುದು ಕಂಡಿತು. ಪೂವಮ್ಮ ಆಂಟಿ ತುಂಬ ಒಳ್ಳೆಯ ಹೆಂಗಸು. ತುಂಬ ಮುಗ್ಧೆ. ಏನು ಹೇಳಿದರೂ ತಲೆ ಅಲ್ಲಾಡಿಸುತ್ತಾರೆ. ಇವರಿಗೆ ಐವರು ಹೆಣ್ಣು ಮಕ್ಕಳು. ನಾಲ್ವರಿಗೆ ಮದುವೆಯಾಗಿದೆ. ಒಬ್ಬಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವರಿಗೆ ನನ್ನ ಅಮ್ಮನ ಮೇಲೆ ತುಂಬ ನಂಬಿಕೆ. ಅಮ್ಮ ಪ್ರತಿ ಬುಧವಾರ ಧರ್ಮಸ್ಥಳದ ಸಂಘಕ್ಕೆ ಹಣ ಸಂಗ್ರಹಕ್ಕೆ ಹೋಗುವಾಗ ಹಣ ತೆಗೆಯಲು ಎ.ಟಿ.ಎಂ. ಕಾರ್ಡನ್ನೇ ಅಮ್ಮನ ಕೈಯಲ್ಲಿ ಕೊಡುತ್ತಾರೆ. ಇವರು ನಮ್ಮ ಮನೆಗೆ ಬಂದರಂತೂ "ಭಾಗೀ ಇಂದು ಚಾಯ್ಕೆಂತ" ಎಂದು ವಿಚಾರಿಸಿ ತಿಂಡಿ ತಿಂದು ಹೋಗುತ್ತಾರೆ. ಅವರನ್ನು ನೋಡಿದಾಗ ನನಗೆ ಫಕ್ಕನೆ ಒಂದು ವಿಷಯ ನೆನಪಾಯಿತು. ಮೊನ್ನೆ ಒಂದು ದಿನ ಪೂವಮ್ಮ ಆಂಟಿಯ ಮೇಲೆ ಎಲ್ಲರಿಗೂ ಕೋಪ ಬಂದಿತ್ತು. ಯಾಕೆಂದರೆ ನಮಗೆಲ್ಲರಿಗೂ ಗೊತ್ತು ಕೊರೋನಾ ವೈರಸ್ ಇಡೀ ಕಾಸರಗೋಡಿಗೇ ಹರಡಿದೆ. ಆದರೂ ಆಂಟಿಯ ಎರಡನೇ ಮಗಳು ರಜನಿ ಅಕ್ಕ ಬಂದಳು. ರಜನಿ ಅಕ್ಕನ ಗಂಡ ಹತ್ತು ದಿನಗಳ ಹಿಂದೆ ವಿದೇಶದಿಂದ ಬಂದಿದ್ದರಂತೆ. ಅಷ್ಟೇ ಅಲ್ಲ; ರಜನಿ ಅಕ್ಕನ ಗಂಡನ ಅಣ್ಣಂದಿರು ಕೂಡ ಎಂಟು ದಿನಗಳ ಹಿಂದೆ ದುಬಾಯಿಯಿಂದ ಬಂದಿದ್ದರು. ಈ ವಿಷಯ ತಿಳಿದೂ ರಜನಿ ಅಕ್ಕ ಆಂಟಿಯ ಮನೆಗೆ ಬಂದರು. ಇದು ತಪ್ಪು ಅಂತ ಗೊತ್ತಾದಾಗ ನಾವೆಲ್ಲರೂ ಆಂಟಿಗೆ ಬುದ್ಧಿ ಹೇಳಿದೆವು. ನನ್ನ ತಾಯಿ, “ಅಕ್ಕಾ, ಈಗ ನಿಮ್ಮ ಮಗಳು ನಿಮ್ಮ ಮನೆಗೆ ಬಂದದ್ ತಪ್ಪಲ್ವಾ? ಅದಿಕೆ ನೀವು ನಿಮ್ಮ ಮಗಳ ಬೇಗ ಅದರ ಮನೆಗೆ ಕಳ್ಸಿ" ಎಂದು ಕೂಗಿ ಹೇಳಿದರು. ಅಬ್ಬ! ಆಂಟಿಗೆ ನಮ್ಮ ಪರಿಸ್ಥಿತಿ ಅರ್ಥವಾಯಿತು. ಅವರು ಅಂದೇ ಸಂಜೆ ಅವರ ಮಗಳನ್ನು ಅವಳ ಗಂಡನ ಮನೆಗೆ ಕಳುಹಿಸಿದರು. ನಮಗೆ ತುಂಬ ಸಮಾಧಾನವಾಯಿತು.
സാങ്കേതിക പരിശോധന - Latheefkp തീയ്യതി: 01/ 02/ 2022 >> രചനാവിഭാഗം - കഥ |