ಕೊರೋನಾ ಬಂತು ಕೊರೋನಾ
ಲೋಕಕ್ಕೇ ಬಂತು ಕೊರೋನಾ
ಭಾರತಕ್ಕೂ ಬಂತು ಕೊರೋನಾ
ಒಟ್ಟಿಗೆ ಎಲ್ಲರೂ ಹೋರಾಡೋಣ
ಚೀನಾದ ವುಹಾನ್ ಎಂಬಲ್ಲಿ ಜನನ
ಬೇಟೆಯಾಡಿತು ಜನರ ಪ್ರಾಣ
ಶೀತ ಕೆಮ್ಮು ಜ್ವರ... ಉಸಿರುಗಟ್ಟಿ
ಸತ್ತು ಬಿದ್ದರಲ್ಲಿ ಎಲ್ಲೆಂದರಲ್ಲಿ
ಸೋಂಕಿತರು ಹೆಚ್ಚಿದರು ದಿನದಿಂದ ದಿನಕೆ
ಕೊರೋನ ಹಬ್ಬಿತು ದೇಶದೇಶಕೆ
ಕೊಲ್ಲುತ್ತಿದೆ ಹೆಮ್ಮಾರಿ ಕೊರೋನ
ಪಾಲಿಸೋಣ ಸುರಕ್ಷೆಯ ನಿಯಮ
ಕೊರೋನ ಯಾತ್ರೆಯ ತಡೆಯೋಣ
ಅಮೂಲ್ಯ ಜೀವವ ಉಳಿಸೋಣ.