ಕೊರೊನಾ ಹೆಮ್ಮಾರಿ ಬಂತಲ್ಲ
ನಮಗೆ ಕಷ್ಟ ಆಯ್ತಲ್ಲ
ಎಲ್ಲಿ ನೋಡಿದರು ನಿನ್ನದೇ ಸುದ್ದಿ
ಆದರೂ ನಮ್ಮಯ ಜನರಿಗೆ ಇಲ್ಲ ಬುದ್ಧಿ
ಚೀನಾ ದೇಶದಿ ಹುಟ್ಟಿಕೊಂಡಿತು
ಕೊರೊನಾ ಎಂಬ ವೈರಸ್
ಜಗದಗಲಕೂ ಕಂಡುಬರುವುದು
ಪ್ರಾಣಾಪಾಯದ ಅನೇಕ ಕೇಸ್
ಇಡೀ ವಿಶ್ವಕ್ಕೆ ನೀನು ಕಟ್ಟಿದೇ
ಕೊರೊನಾ ಎಂಬ ಕೋಟೆ
ದೇಶ ಕಾಯುವ ರಕ್ಷಕರಿಗೆ
ಸಮಾಜವನ್ನು ಸರಿಪಡಿಸುವುದೇ ಬೇಟೆ
ಎಲ್ಲಿ ನೋಡಿದರು ಲಾಕ್ ಡೌನ್
ಹೆಚ್ಚಾದರೆ ಸೀಲ್ ಡೌನ್
ಧರಿಸಿರಿ ಎಲ್ಲರೂ ಮಾಸ್ಕ್, ಗ್ಲೌಸ್
ಬಳಸಿರಿ ಸುರಕ್ಷತೆಗೆ ಸಾನಿ ಟೈಸರ್
ಸಾಮಾಜಿಕ ಅಂತರ ಕಾಯ್ದುಕೊಳ್ಳುತ
ರೋಗದ ಬಗ್ಗೆ ಜಾಗೃತರಾಗುತ
ನಿಯಮವ ಪಾಲಿಸಿ ದೇಶವ ರಕ್ಷಿಸಿ
ದೇಶವ ನಾವು ಉಳಿಸೋಣ
-- ಪೂರ್ಣೇಶ್ ವೈ ರೈ