Geletana
ಒಂದು ಊರಿನಲ್ಲಿ ಮನು ಎನ್ನುವ ಒಬ್ಬ ಹುಡುಗನಿದ್ದನು. ಅವನು ಮೈಸೂರಿನಲ್ಲಿ ಕಲಿಯುತ್ತಿದ್ದ ಮಾತ್ರವಲ್ಲದೇ ಕಲಿಕೆಯಲ್ಲಿ ಮುಂದಿದ್ದ. ಮೈಸೂರಿನ ಒಂದು ಶಾಲೆಯಲ್ಲಿ ಏಳನೇ ತರಗತಿಯಾದ ನಂತರ ಅವನು ಬೆಂಗಳೂರಿನಲ್ಲಿ ಕಲಿಯಲು ಒಂದು ಒಳ್ಳೆಯ ಶಾಲೆಯನ್ನು ಹುಡುಕಿ ಆ ಶಾಲೆಗೆ ಸೇರಿದನು. ಅವನ ಆ ಶಾಲೆಯಲ್ಲಿ ರೋಹಿತ್ ಎನ್ನುವ ಒಬ್ಬ ಹುಡುಗನಿದ್ದನು. ಅವನು ಆ ಶಾಲೆಯಲ್ಲೇ ಹಿಂದಿನಿಂದ ಕಲಿತುಕೊಂಡು ಬರುತ್ತಿದ್ದ , ಈಗ ಕೂಡ ಕಲಿಯುವುದರಲ್ಲಿ ಮುಂದಿದ್ದ . ಮನು ಬಂದ ಮೇಲೆ ಅವನು ಕಲಿಯುವುದರಲ್ಲಿ ಹಿಂದೆ ಬಿದ್ದ. ಅವನಿಗೆ ಮನುವನ್ನು ಕಂಡರೆ ಆಗುತಿರಲಿಲ್ಲ. ಮನುವಿಗೆ ಹೊಡೆಯುವುತ್ತಿದ್ದ, ಹಾಗೆಯೇ ಮನುವನ್ನು ಯಾವ ಆಟಕ್ಕೂ ಸೇರಿಸುತ್ತಿರಲಿಲ್ಲ ಮತ್ತು ರೋಹಿತ್ ಹೇಳಿದ ಹಾಗೆಯೇ ಮನುವು ಕೇಳಬೇಕಿತ್ತು.

ಒಂದು ದಿನ ರೋಹಿತ್ ಅವನ ಗೆಳೆಯರನ್ನು ಅವನ ಮನೆಯ ಹತ್ತಿರದ ನದಿಗೆ ಕರೆದುಕೊಂಡು ಹೋದ. ಅಲ್ಲಿ ಅವರೆಲ್ಲರೂ ತುಂಬಾ ಆಡುತಿದ್ದರು. ಹೀಗೆ ಆಡುತಿದ್ದಂತೆ ರೋಹಿತ್ ನೀರಿನಲ್ಲಿ ಮುಳುಗಿದ. ಆಗ ಅವನ ಗೆಳೆಯರು ಅವನು ಮುಳುಗುದನ್ನು ನೋಡಿ ಓಡಿಹೋದರು. ಆಗ ಮನು ಅದೇ ದಾರಿಯಲ್ಲಿ ಹೋಗುತಿದ್ದ. ಆಗ ಯಾರೋ ನೀರಿನಲ್ಲಿ ಮುಳುಗುವ ಶಬ್ದ ಕೇಳಿತು. ಅವನು ಓಡಿಹೋಗಿ ನೋಡಿದ. ಯಾರೋ ಮುಳುಗುದನ್ನು ಕಂಡು ಅವನನ್ನು ರಕ್ಷಣೆ ಮಾಡಲು ಏನೂ ನೋಡದೆ ನದಿಗೆ ಹಾರಿದ. ಆಗ ಅವನಿಗೆ ಕಲ್ಲು ತಾಗಿ ರಕ್ತ ಬರುತಿತ್ತು. ಆದರೂ ಮನು ರೋಹಿತನ್ನು ಎತ್ತಿ ಆಸ್ಪತ್ರೆಗೆ ಕೊಂಡು ಹೋದ. ಆಮೇಲೆ ರೋಹಿತಿನ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದ. ರೋಹಿತ್ ಗೆ ರಕ್ತ ಬೇಕೆಂದು ಆಸ್ಪತ್ರೆಯಲ್ಲಿ ಹೇಳಿದರು. ಆದರೆ ರೋಹಿತಿನ ರಕ್ತಕ್ಕೆ ಯಾರ ರಕ್ತವು ಹೊಂದುತ್ತಿರಲಿಲ್ಲ. ಆದರೆ ಮನುವಿನ ರಕ್ತಕ್ಕೆ ರೋಹಿತ್ ನ ರಕ್ತವು ಹೊಂದುತ್ತಿತ್ತು. ಮನು ರೋಹಿತಿಗೆ ರಕ್ತ ಕೊಟ್ಟು ಅವನನ್ನು ಕಾಪಾಡಿದ.ಹೀಗೆ ಕೆಲವು ದಿನಗಳು ಕಳೆದವು. ರೋಹಿತ್ ತನ್ನ ಆರೋಗ್ಯವನ್ನು ಪುನ್ಹ ಪಡೆದು ಶಾಲೆಗೆ ಬರಲು ಆರಂಭಿಸಿದ. ಆದರೆ ಅಂದಿಂದ ಮನು ಮತ್ತು ರೋಹಿತ್ ತುಂಬಾ ಗೆಳೆತನವನ್ನು ಬೆಳೆಸಿದರು.

Trisha
9 B GHSS BEKUR
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കഥ