ಕರುಳ ಕೂಗು
 
ಬೆವರು ಬಸಿದು ರಕ್ತ ಹಿಂಡಿ

ತುತ್ತು ಅನ್ನಕ್ಕಾಗಿ ಅಲೆದು
ರಾತ್ರಿ ಹಗಲು ಕಷ್ಟಗೈದು
ಪ್ರೀತಿಯಿಂದ ಸಾಕಿ ಸಲಹಿ
ಎದೆಯೆತ್ತರ ಬೆಳೆದ ಮಗನು
ಕಾಣದಾದನೋ...ನಮ್ಮ ಕಾಪಾಡುವನೋ.....

ಬಡಕಲಾದ ಜೀವ ಎರಡು
ಸೂರುಗಂಜಿಯಿಲ್ಲದಾಗಿ
ದುಡುಮೆ ಮಾಡಲಾಗದೆಯೇ
ದಾರಿಕಾದೆವೋ , ಮೋನು
ಬರುವನೆಂಬ ಕನಸು ಕಂಡು
ಕಾಣದಾದನೋ...ನಮ್ಮ ಕಾಪಾಡುವನೋ.....

ಸುಕ್ಕುಗಟ್ಟಿ ನಿಂತ ಮುಖದಿ
ಚಿಂತೆ ಕ್ರಾಂತರಾದ ಮನಸು
ಎಡವಿ ತಡವಿ ದಿಟ್ಟಿಸುತ್ತ
ಕಾಯುತ್ತಿರುವ ಜೀವವೆರಡು
ಮನದೆ ದು:ಖಿಸುತ್ತ ಕಳೆದು
ಕಾಣದಾದನೋ...ನಮ್ಮ ಕಾಪಾಡುವನೋ.....

Tripthi
10 A ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത