സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಶ್ರ್ರೀ ಶಾಸ್ತಾರ ಎ ಎಲ್ ಪಿ ಶಾಲೆಯು ಬೆಳ್ಳೂರು ಪಂಚಾಯತ್ ನ ೧೨ನೇ ವಾರ್ಡ್ ನಲ್ಲಿದ್ದು ಹಚ್ಚಹಸುರಿನ ಪ್ರಾಕೃತಿಕ ಸುಂದರ ಶಾಂತ ಪರಿಸರದಲ್ಲಿ ನೆಲೆಗೊಂಡಿದೆ. ಹತ್ತಿರ ವನಶಾಸ್ತಾರ ಎಂಬ ದೇವಸ್ಥಾನ ಸ್ಥಿತಿಗೊಂಡ ಕಾರಣ ಆ ಹೆಸರಿನಿಂದಲೇ 1955ರಲ್ಲಿ ಆರ್ಂಭಗೊಂಡ ಸಂಸ್ಥೆಯಾಗಿದೆ. ಶಾಲೆ ಆರಂಭಗೊಂಡ ಸಮಯದಲ್ಲಿ ಶ್ರೀ ಪನೆಯಾಲ ಕೇಶವ ಭಟ್ಟರು ವ್ಯವಸ್ಥಾಪಕರಾಗಿದ್ದರು. ಬಳಿಕ ಅವರ ಮಗನಾದ ಶ್ರೀ ಪರಮೇಶ್ವರ ಭಟ್ಟರು ಆ ಜವಬ್ದಾರಿಯನ್ನು ವಹಿಸಿಕೊಂಡರು. ಪ್ರಸ್ತುತ ಶ್ರೀ ಕೇಶವ ಮೂರ್ತಿಯವರು ವ್ಯವಸ್ಥಾಪಕರಾಗಿದ್ದಾರೆ. ಗ್ರ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಹತ್ತು ಹಲವು ಬಡ, ಮಧ್ಯಮ ವರ್ಗದ ಜನರ ಅಕ್ಷರದ ಹಸಿವನ್ನು ನೀಗಿಸಿದೆ.