എസ്.വി. വി.എച്ച്. കൊഡലമോഗർ/അക്ഷരവൃക്ഷം/ ಕಾಗೆಯ ದುಃಖ
ಕಾಗೆಯ ದುಃಖ
ಚಂದ್ರತಾರಾ ಕಾಡಿನಲ್ಲಿ ನಾಲ್ಕು ಜನ ಗೆಳೆಯರಿದ್ದರು. ಕಾಗೆ, ಜಿಂಕೆ, ಮೊಲ, ಗಿಳಿ. ದಿನಾಲೂ ನಾಲ್ವರೂ ಕೂಡ ಆಲದ ಮರದ ಕೆಳಗಡೆ ಹರಟೆ ಹೊಡೆಯುತ್ತಿದ್ದರು. ಒಂದು ದಿನ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದಿದ್ದಾಗ ಕಾಗೆ ಮಾತ್ರ ಬರಲಿಲ್ಲ. ಇವರು ಸ್ವಲ್ಪ ಹೊತ್ತು ಕಾದು ಕಾಗೆಯ ಮನೆಯ ಕಡೆ ಹೊರಟರು. ಅಲ್ಲಿಯೂ ಕಾಗೆ ಇರಲಿಲ್ಲ. ಅಲ್ಲಿ ಕಾಗೆಯ ಮರಿಗಳು ಹಸಿವಿನಲ್ಲಿ ಒದ್ದಾಡುತ್ತಿದ್ದವು. ಇವರು ಕಾಗೆಯ ಮರಿಗಳಿಗೆ ಆಹಾರವನ್ನು ನೀಡಿ ಚೆನ್ನಾಗಿ ನೋಡಿಕೊಂಡರು. ದಿನಗಳು ಉರುಳಿದವು. ಕಾಗೆ ಬರಲೇ ಇಲ್ಲ. ಒಂದು ದಿನ ಈ ಮೂವರು ಗೆಳೆಯರು ಕಾಗೆಯನ್ನು ಹುಡುಕಲೇಬೇಕೆಂದು ನಿರ್ಧರಿಸಿ ಪರರೂರು ಎಂಬ ಊರಿಗೆ ಬಂದರು. ಅವರು ಹುಡುಕಿ ಸುಸ್ತಾಗಿ ಒಂದು ಆಲದ ಮರದ ಕೆಳಗಡೆ ವಿಶ್ರಾಂತಿ ಪಡೆಯಲು ಕೂತಾಗ ಅವರಿಗೆ ಮೇಲಿಂದ ಯಾರೋ ಅಳುವ ಸ್ವರ ಕೇಳಿಸಿತು. ನೋಡಿದಾಗ ಅವರ ಗೆಳೆಯ ಕಾಗೆ. ಅದರ ಮೈ ತುಂಬಾ ಗಾಯಗಳಾಗಿ ರಕ್ತ ಸೋರುತ್ತಿತ್ತು. ಕಾಗೆ "ನಾನು ಮರಿಗಳಿಗೆ ಆಹಾರ ತರಲು ಈ ಊರಿಗೆ ಬಂದೆ. ಇಲ್ಲಿ ಬಿದ್ದಿರುವ ಕಸದಿಂದ ಆಹಾರವನ್ನು ಹೆಕ್ಕುತ್ತಿದ್ದಾಗ ಇಲ್ಲಿನ ಜನರು ಬಂದು, 'ನಾನು ಕರಿ ಕಾಗೆ 'ಎಂದು ಅಸಹ್ಯ ದಿಂದ ನನಗೆ ಕಲ್ಲು ಬಿಸಾಡಿದರು. ನನಗೆ ಹಾರಲು ಸಾಧ್ಯವಾಗದ ಕಾರಣ ನಾನು ಇಲ್ಲಿಯೆ ಉಳಿದುಕೊಂಡೆ"ಎಂದು ದುಃಖದಿಂದ ಹೇಳಿತು. ಆಗ ಗಿಳಿ, "ನೋಡು ಗೆಳೆಯ, ಇಲ್ಲಿಯ ಜನರಿಗೆ ಬುದ್ಧಿಯಿಲ್ಲ. ಪರಿಸರ ಸ್ವಚ್ಛ ಗೊಳಿಸುವ ಉತ್ತಮವಾದ ಕೆಲಸವನ್ನು ನೀನು ಮಾಡುವೆ. ಒಳ್ಳೆಯ ಕೆಲಸ ಮಾಡಲು ಬೇಕಾಗಿರುವುದು ಒಳ್ಳೆಯ ಮನಸೇ ಹೊರತು ಅಂದಚಂದವಲ್ಲ"ಎಂದು ಸಮಾಧಾನ ಹೇಳಿ ಕಾಗೆಯನ್ನು ಕರೆದುಕೊಂಡು ಹೋ ಯಿತು. ನೀತಿ :ದನ ಕಪ್ಪಾದರೇನು ಹಾಲು ಕಪ್ಪೇ?
സാങ്കേതിക പരിശോധന - Manu Mathew തീയ്യതി: 05/ 05/ 2020 >> രചനാവിഭാഗം - കഥ |