ജി.എച്ച്.എസ്. എസ്. ബേകൂർ/അക്ഷരവൃക്ഷം/ Sahayada Avashyakate

16:24, 17 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= Sahayada Avashyakate | color= 5 }} ಸಹಾಯದ ಅವಶ್ಯಕತೆ...' താൾ സൃഷ്ടിച്ചിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Sahayada Avashyakate

ಸಹಾಯದ ಅವಶ್ಯಕತೆ

   ಈ ಪ್ರಕೃತಿಯು  ಬಲು ಸುಂದರವಾಗಿದೆ .ನಾವೆಲ್ಲರೂ ಭೂತಾಯಿಯ ಮಕ್ಕಳು .ಪ್ರತಿಯೊಂದು ಜೀವ ಸಂಕುಲವು  ಈ ಭೂಮಿಯಲ್ಲಿ ಹುಟ್ಟಬೇಕಾದರೆ ತುಂಬಾ ಪುಣ್ಯ ಮಾಡಿರಬೇಕು.  ಅದರಲ್ಲೂ ಮನುಷ್ಯರು ,ಯಾಕೆಂದರೆ ಪ್ರಾಣಿ ಪಕ್ಷಿಗಳಿಗಿಂತ ಹೆಚ್ಚಿನ ಶಕ್ತಿಯನ್ನೇ ದೇವರು ಮನುಷ್ಯನಿಗೆ ಕರುಣಿಸಿದ್ದಾನೆ . ಆದರೆ ಮನುಷ್ಯ ತುಂಬಾ ಸ್ವಾರ್ಥಿ ."ಪರೋಪಕಾರಂ ಇದಂ ಶರೀರಂ "ಎಂಬ  ಮಾತಿನಂತೆ .ಇದರ ಅರ್ಥವೇನೆಂದರೆ ನಾವು ಈ ಭೂಮಿಯಲ್ಲಿ ಹುಟ್ಟಿರುದೇ ಕಷ್ಟದಲ್ಲಿರುವವರಿಗೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಲು ಎಂಬುದೇ ಇದರ ತಿರುಳಾಗಿದೆ .
 ಆದರೆ ಈಗಿನ ಜನಗಳು ಹಾಗಲ್ಲ ಒಂದು ರಸ್ತೆಯಲ್ಲಿ ಯಾರಿಗಾದರೂ ಅಪಘಾತ ಸಂಭವಿಸಿ ಅವರಿಗೆ ಜೋರಾಗಿ ಏಟು ಬಿದ್ದು ಮೈಯಲ್ಲಾ ರಕ್ತ ಹರಿಯುತ್ತಿದರೂ ಹತ್ತಿರವಿದ್ದಂತಹ ಜನ ಅವರನ್ನು ತಕ್ಷಣ ಆಸ್ಪತ್ರೆಗೆ ತಲುಪಿಸುದು ಬಿಟ್ಟು ಮೊಬೈಲ್ ನಲ್ಲಿ ಸೆಲ್ಫಿ ,ಫೋಟೋ ,ವಿಡಿಯೋ ತೆಗೆದು ವಾಟ್ಸಪ್ಪ್ ,ಫೇಸ್ ಬುಕ್ಕ್ ಗಳಲ್ಲಿ ಹಾಕುತ್ತಾರೆ. ಅಷ್ಟರಲ್ಲಿ ಆ ವ್ಯಕ್ತಿಯ ಜೀವವೇ ಹೋಗಿರುತ್ತದೆ .
    ಪ್ರಾಣಿ ಪಕ್ಷಿಗಳಿಗಿದ್ದಷ್ಟು ಕರುಣೆ ಮಾನವನಿಗಿಲ್ಲ. ಉದಾಹರಣೆ ಶ್ವಾನ (ನಾಯಿ )ಅದಕ್ಕೆ ಮೂರು ಹೊತ್ತು ಊಟ ಹಾಕಿದರೆ ಅದು ಬದುಕಿದ್ದಷ್ಟು ದಿನ ನಮ್ಮನ್ನು ಮರೆಯುವುದಿಲ್ಲ ಹಾಗೂ ನಮ್ಮ ಮನೆಯಿರುವಷ್ಟು ದಿನ ನಮ್ಮ ಮನೆಯನ್ನು ಕಾಯುತ್ತದೆ. ಯಾಕೆಂದರೆ ಅದಕ್ಕೆ ತಮ್ಮ ಮನೆಯವರ ಮೇಲೆ ಅಷ್ಟು ಪ್ರೀತಿ ನಂಬಿಕೆ ಇದೆ . ಆದರೆ ಪ್ರಾಣಿ ಪಕ್ಷಿಗಿದ್ದಷ್ಟು ಒಳ್ಳ್ಳೆಯ ಗುಣ ಮನುಷ್ಯನಿಗಿಲ್ಲ.  ಈ ಕಾರಣಕ್ಕಾಗಿಯೇ ಮನುಷ್ಯ ತುಂಬಾ ಸ್ವಾರ್ಥಿ  ಎನ್ನಲಾಗಿದೆ .ಈ ಪ್ರಪಂಚದಲ್ಲಿ ನನಗೆ ಯಾರ ಸಹಾಯವೂ ಬೇಡ ನಾನೊಬ್ಬನೇ ಬದುಕುತ್ತೇನೆ ಎಂದರೆ ಅದು ಖಂಡಿತವಾಗಿಯೂ ಸಾಧ್ಯವಿಲ್ಲ . ಪ್ರತಿಯೊಬ್ಬ ಮನುಷ್ಯನಿಗೂ ಇನ್ನೊಬ್ಬ ಮನುಷ್ಯನ ಸಹಾಯ ಬೇಕೇ ಬೇಕು . ಉದಾಹರಣೆಗೆ ಬಟ್ಟೆ ತಯಾರಿಸುವುದು .ನಮಗೆ ಒಂದು ಬಟ್ಟೆ ಬೇಕಾದರೆ   ಅದರ ಹಿಂದೆ ಹಲವು ಕೈಗಳ ಸಹಾಯವಿರಬೇಕು. ಮೊದಲಿಗೆ ರೈತನು ಹತ್ತಿಯನ್ನು ಬೆಳೆಸಿ ಆ ಹತ್ತಿಯನ್ನು ಬಟ್ಟೆ ತಯಾರಿಸುವ ಫ್ಯಾಕ್ಟ್ರಿಗೆ  ಮಾರಿ ,ಆ ಅಂಗಡಿಯವರು ಅದನ್ನು ನೂಲಿನ ರೀತಿಯಲ್ಲಿ ಮಾರ್ಪಡಿಸಿ ,ಅದನ್ನು ಬಟ್ಟೆಯ ರೀತಿಯಲ್ಲಿ ಮಾಡಿ ,ಹೊಲಿಯುವ ಅಂಗಡಿಗೆ ಕೊಟ್ಟು ಅವರು ಅದನ್ನು ಹೊಲಿದಾಗ ಮಾತ್ರ ಬಟ್ಟೆ ತಯಾರಾಗುತ್ತದೆ . 
 ಈ ರೀತಿಯಲ್ಲಿ ಒಂದು ಕೆಲಸವಾಗಬೇಕಾದರೆ ಅದರ ಹಿಂದೆ ಹಲವು ಕೈಗಳು ಕೆಲಸಮಾಡುತ್ತಿರುತ್ತದೆ. ಆದುದರಿಂದ "ನಾವೆಲ್ಲರೂ ಒಂದೇ "ಎಂಬ ಭಾವನೆ ಇಟ್ಟುಕ್ಕೊಂಡು ಕಷ್ಟದಲ್ಲಿರುವವರಿಗೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿಕ್ಕೊಂಡು ಮುನ್ನಡೆಯೋಣ .

ಅನನ್ಯ ಯು


Ananya U
9 B ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം