ರೈತ ಈತ ದೇಶದ ಬೆನ್ನೆಲುಬು ಜನರ ಬದುಕಿನ ಜೀವನಾಡಿ ಮಳೆ, ಬಿಸಿಲು, ಚಳಿ, ಗಾಳಿ ಇವನ ಬದುಕಿನ ಒಡನಾಡಿ | ಲಾಭವೋ ನಷ್ಟವೋ ಬಿಡಲಾರ ಬೇಸಾಯ ಬದುಕಲ್ಲಿ ಸೋತರೂ ಇವನಿಗಿಲ್ಲ ಸಹಾಯ | ಅವನ ಶ್ರಮದ ಫಲ ನಮಗೆಲ್ಲ ಆಹಾರ ಅವನಿಲ್ಲದಿದ್ದರೆ ನಮಗಿಲ್ಲ ಆಧಾರ |