2025-26 ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಜೂನ್ 2ರ ಸೋಮವಾರ ಜಿ. ವಿ. ಹೆಚ್. ಎಸ್. ಎಸ್ ಕುಂಜತ್ತೂರು ಶಾಲೆಯಲ್ಲಿ ಸಂಭ್ರಮದಿಂದ ಜರಗಿತು. ನೂತನವಾಗಿ ಶಾಲೆಗೆ ದಾಖಲಾತಿಗೊಂಡ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಶಾಲಾ ಅಸೆಂಬ್ಲಿಯಲ್ಲಿ SSLC ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕಗಳನ್ನು ವಿತರಿಸುವ ಮೂಲಕ ಅಭಿನಂದಿಸಲಾಯಿತು. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶ್ರಫ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡುವುದರ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅರ್ಥಪೂರ್ಣವಾದ ಚಾಲನೆಯನ್ನು ನೀಡಲಾಯಿತು. ಜಿ.ವಿ. ಎಚ್. ಎಸ್. ಸಿ ಪ್ರಾಚಾರ್ಯರಾದ ಶ್ರೀ ಶಿಶುಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಸ್. ಐ ದಿನೇಶ್, ಎಸ್.ಎಮ್.ಸಿ ಸದಸ್ಯರಾದ ಶ್ರೀ ಈಶ್ವರ ಎಂ, ಹಿರಿಯ ಶಿಕ್ಷಕಿ ಶ್ರೀಮತಿ ರಾಣಿ ವಾಸುದೇವನ್, ಶ್ರೀಮತಿ ಅನಿತಾ ಪಿ.ಜಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಭಾರ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಸಿಂಧು .ಪಿ ಯವರು ಸ್ವಾಗತಿಸಿ, ಶಿಕ್ಷಕಿ ರಾಣಿವಾಸುದೇವನ್ ರವರು ವಂದಿಸಿದರು. ಶ್ರೀ ದಿವಾಕರ ಬಳ್ಳಾಲ್ ಎ.ಬಿ ಹಾಗೂ ಅಶ್ರಫ್. ಸಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.
WORLD ENVIRONMENT DAY-2025-26
ಪರಿಸರ ದಿನಾಚರಣೆ:
ಕುಂಜತ್ತೂರು: ಜಿ. ವಿ. ಎಚ್.ಎಸ್.ಎಸ್. ಕುಂಜತ್ತೂರು ಶಾಲೆಯಲ್ಲಿ ಜೂನ್ 5 ಗುರುವಾರದಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಅಸ್ಸೆಂಬ್ಲಿಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವ ಕುರಿತು ಪ್ರತಿಜ್ಞೆ ಕೈಗೊಂಡರು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಯಿನಿಯಾದ ಶ್ರೀಮತಿ ಸಿಂಧು ಪಿ ಹಾಗೂ ಅನಿತಾ ಪಿ . ಜಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಪರಿಸರ ಸಂರಕ್ಷಣೆಯ ಮಹತ್ವವನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನೀಡಿದರು. ಶಿಕ್ಷಕ ಶ್ರೀ ಅಶ್ರಫ್.ಸಿ ಹಾಗೂ ಶಿಕ್ಷಕಿ ಅನ್ಬಿಡಿ ದಾಸ್ ಕಾರ್ಯಕ್ರಮಗಳನ್ನು ನಿರೂಪಿಸಿದರು. ಪರಿಸರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಸೌಮ್ಯ ಮೋಲ್ ಹಾಗೂ ಶ್ರೀಮತಿ ಮುಮ್ತಾಜ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು. ಮಂಜೇಶ್ವರ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ಉಮೇಶ್ ಹಾಗೂ ಡ್ರಿಲ್ ಇನ್ಸಪೆಕ್ಟರ್ ಶ್ರೀ ನಿತಿಶ್ ಇವರ ನೇತೃತ್ವದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.