എസ് .ഡി. പി. എച്ച്. എസ്. ധർമ്മത്തടുക്ക/School olmpics/2024-25

18:34, 11 ഒക്ടോബർ 2024-നു ഉണ്ടായിരുന്ന രൂപം സൃഷ്ടിച്ചത്:- 11051sdphsd (സംവാദം | സംഭാവനകൾ) ('<nowiki><div style="box-shadow:10px 10px 5px #F90868;margin:0 auto; padding:0.9em 0.9em 0.5em 0.5em; border-radius:20px; border:3px solid blue; background-image:-webkit-radial-gradient(white, #F2F793); font-size:100%; text-align:justify; width:95%; color:black;"></nowiki> <nowiki>== <b class="term"><font size="5" color="blue" face="Century Schoolbook L" font>ಧರ್ಮತ್ತಡ್ಕ ಪ್ರೌಢಶಾಲೆ...' താൾ സൃഷ്ടിച്ചിരിക്കുന്നു)

<div style="box-shadow:10px 10px 5px #F90868;margin:0 auto; padding:0.9em 0.9em 0.5em 0.5em; border-radius:20px; border:3px solid blue; background-image:-webkit-radial-gradient(white, #F2F793); font-size:100%; text-align:justify; width:95%; color:black;">

== <b class="term"><font size="5" color="blue" face="Century Schoolbook L" font>ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ </font></b> ==

<font size="5" color="black" face="Noto Serif Kannada" font>ಧರ್ಮತ್ತಡ್ಕ: ಅಕ್ಟೋಬರ್ 8;  ಇಲ್ಲಿನ‌ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ಕಲೋತ್ಸವವು ಇಂದು ನಡೆಯಿತು. ಲೇಖಕಿ ಶ್ರೀಮತಿ ಪ್ರಸ್ನನ ವಿ ಚೆಕ್ಕೆಮನೆ ಇವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಏಷ್ಯಾದಲ್ಲೇ ಅತೀ ದೊಡ್ಡ ಉತ್ಸವಗಳಲ್ಲೊಂದಾದ ಕೇರಳ ಶಾಲಾ ಕಲೋತ್ಸವವು ಮಕ್ಕಳಲ್ಲಿ ಅಡಕವಾಗಿರುವ  ಸುಪ್ತ ಪ್ರತಿಭೆಯನ್ನು ಹೊರತರುವ ಉತ್ತಮ ವೇದಿಕೆಯಾಗಿದ್ದು, ಎಲ್ಲರೂ ಸ್ಪರ್ಧಾ ಮನೋಭಾವದಿಂದ ಉತ್ಸಾಹದಿಂದ ಪಾಲ್ಗೊಳ್ಳಬೇಕೆಂದು ಕರೆ ಇತ್ತರು.

ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲ್ ಸಭಾಧ್ಯಕ್ಷತೆಯನ್ನು ವಹಿಸಿದರು.ಶಾಲಾ ವ್ಯವಸ್ಥಾಪಕ ಶ್ರೀ ಶಂಕರ ನಾರಾಯಣ ಭಟ್, ಮುಖ್ಯೋಪಾಧ್ಯಾಯ  ಶ್ರೀ ಇ.ಎಚ್ ಗೋವಿಂದ ಭಟ್, ಎಂ.ಪಿ.ಟಿ.ಎ ಅಧ್ಯಕ್ಷೆ  ಶ್ರೀಮತಿ ದಿವ್ಯಭಾರತಿ, ಸ್ಟಾಫ್ ಸೆಕ್ರೆಟರಿ ಶ್ರೀ ರಾಮಕೃಷ್ಣ ಭಟ್,ಕಲೋತ್ಸವ ಕನ್ವೀನರ್ ಶ್ರೀಮತಿ ತುಳಸಿ ಕೆ , ಸಂಸ್ಕೃತೋತ್ಸವ ಕನ್ವೀನರ್ ಶ್ರೀ ಶಿವನಾರಾಯಣ ಭಟ್ ಶುಭ ನುಡಿಗಳನ್ನಾಡಿದರು‌. ಕಾರ್ಯಕ್ರಮವನ್ನು ದೀಪಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.ಶ್ರೀಮತಿ ಉಮಾದೇವಿ ಸ್ವಾಗತಿಸಿ ಶ್ರೀಮತಿ ವಿಚೇತ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಶ್ರೀ ಶಶಿಧರ ಕೆ ಮುಖ್ಯ ಅತಿಥಿಯ ಪರಿಚಯವನ್ನು ಮಾಡಿದರು. ಶ್ರೀ ಪ್ರಶಾಂತ ಹೊಳ್ಳ ಎನ್ ಕಾರ್ಯಕ್ರಮವನ್ನು ‌ನಿರೂಪಿಸಿದರು‌.

</font>

<gallery mode="packed" widths="250" heights="250">

</gallery></font>