എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ

Home2026-27
float 2022-23 float 2023-24 float 2024-25 float 2025-26 float


International Yoga Day celebrations: ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಯೋಗ ಗುರುವಾಗಿರುವ ಪ್ರವೀಣ್ ಸೊಂಕಲ್ ,ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗದಿಂದ ರೋಗ ದೂರ, ನಮ್ಮ ದೇಹ ಹುಟ್ಟಿನಿಂದ ಸಾವಿನ ವರೆಗೆ ಸಮತೋಲನದಿಂದ ಸಾಗಲು ಯೋಗವು ಪ್ರಧಾನ ಪಾತ್ರವಹಿಸುತ್ತದೆ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ - "ವಿಶ್ವಕ್ಕೆ ಯೋಗವು ಭಾರತದ ಕೊಡುಗೆಯಾಗಿದೆ, ಆಧ್ಯಾತ್ಮದೊಂದಿಗೆ ಸಮ್ಮಿಳಿತವಾದ ವಿಜ್ಞಾನವೇ ಯೋಗ"ಎಂಬ ಸಂದೇಶ ನೀಡಿದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ವಿಚೇತ ಸ್ವಾಗತಿಸಿ, ಸಂತೋಷ್ ಕುಮಾರ್ ಎಂ ವಂದಿಸಿದರು. ಬಳಿಕ ಪ್ರವೀಣ್ ಆಚಾರ್ಯ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.


School level club inaugurations:ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿಯ ಪ್ರೌಢಶಾಲಾ ವಿಭಾಗದ 2022-23 ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್ ಗೋವಿಂದ ಭಟ್" ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ - "ತರಗತಿ ಕೊಠಡಿಯಲ್ಲಿ ಅಭ್ಯಸಿಸುವ ವಿಷಯಗಳ ಪ್ರಾಯೋಗಿಕ ಉಪಯೋಗವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕ್ಲಬ್ ‌ಗಳು ಉಪಯುಕ್ತವಾದುದು , ಇಂತಹ ಚಟುವಟಿಕೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು" ಎಂದು ಹುರಿದುಂಬಿಸಿದರು.ಜೀವಶಾಸ್ತ್ರ ಅಧ್ಯಾಪಕ ರಾಮಕೃಷ್ಣ ಭಟ್,ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಇವರು ಶುಭಾಶಂಸನೆಗೈದರು. ವಿಜ್ಞಾನ,ಗಣಿತ,ಸಮಾಜವಿಜ್ಞಾನ,ವಿದ್ಯಾರಂಗ,ಸಂಸ್ಕೃತ,ಐ.ಟಿ,ಆರೋಗ್ಯ,ಆರ್ಟ್ಸ್ ಕ್ಲಬ್,ಸ್ಪೋರ್ಟ್ಸ್ ಕ್ಲಬ್, ಎಕೋ ಕ್ಲಬ್,ಎಂಬೀ ಕ್ಲಬ್ ಗಳಿಗೆ ವಿದ್ಯಾರ್ಥಿ ಪದಾಧಿಕಾರಿಗಳನ್ನು ಈ‌ ಸಂದರ್ಭದಲ್ಲಿ ಆರಿಸಲಾಯಿತು. ಗಣಿತ ಅಧ್ಯಾಪಕ ಶಶಿಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ,ಕನ್ನಡ ಅಧ್ಯಾಪಿಕೆ ಶ್ವೇತಕುಮಾರಿ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರದಲ್ಲಿ ರಾಮ್ ಸ್ವರೂಪ ಆಳ್ವ ಸ್ವಾಗತಿಸಿ ಕು.ಲಾಸ್ಯ ವಂದಿಸಿದಳು.ಕು.ಪ್ರವೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದಳು.ಎಲ್ಲಾ ಶಿಕ್ಷಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು