G. L. P. S. Thalekala

Schoolwiki സംരംഭത്തിൽ നിന്ന്
08:01, 22 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ)
G. L. P. S. Thalekala
സ്കൂൾ ചിത്രം
സ്കൂൾ ചിത്രം
Established 1934
School Code 11219
Place G.L.P.S.TALEKALA
Address G.L.P.S.TALEKALA,KADAMBAR P.O.
PIN Code 671323
School Phone 9496303935
School Email glpstalekala@gmail.com
Web Site
District Kasargod
Educational District Kasargod
Sub District മഞ്ചേശ്വരം

Catogery ഗവണ്‍മെന്റ്
Type General
Sections 1 - 4
ഗവണ്‍മെന്റ്
Medium Kannada
No of Boys 15
No of Girls 19
Total Students 34
No of Teachers 5
Principal
Head Master RAVINDRA.M
P.T.A. President NABISA
പ്രോജക്ടുകൾ
E-Vidhyarangam Help
22/ 01/ 2017 ന് Ajamalne
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

HISTORY

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ತಲೇಕಳ ಗ್ರಾಮವು ಹಿಂದಿನ ಕಾಲದಿಂದಲೂ ಹಿಂದುಳಿದ ಪ್ರದೇಶವಾಗಿದೆ.ಈ ಪ್ರದೇಶದ ವಿದ್ಯಾಭಿಮಾನಿ ಜನರ ಪ್ರಯತ್ನದ ಫಲವಾಗಿ ಬಾಳಪ್ಪ ರೈ ಪಟೇಲರ ನೇತೃತ್ವದಲ್ಲಿ ಒಂದು ಮನೆಯಲ್ಲಿ ಶಾಲೆ ಆರಂಭಗೊಂಡಿತು.ಕೆಲವು ಸಮಯದ ಬಳಿಕ ಶಾಲೆಯನ್ನು ಮನೆಯಿಂದ ತಾತ್ಕಾಲಿಕ ಶೆಡ್ಡ್ ನಿರ್ಮಿಸಿ ಅದಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1934ರಲ್ಲಿ ಅಸ್ಥಿತ್ವಕ್ಕೆ ಬಂತು.ಆ ಸಮಯದಲ್ಲಿ ಸಮೀಪ ಪ್ರದೇಶದಲ್ಲೆಲ್ಲೂ ಶಾಲೆ ಇರಲಿಲ್ಲ.. ಮುಳಿ ಶೆಡ್ಡಿನಲ್ಲಿದ್ದ ಶಾಲೆಯ ಮುಳಿಯೆಲ್ಲ ಹೋಗಿ ಮಳೆಗಾಲದಲ್ಲಿ ಒಂದುದಿನ ಮುರಿದು ಬಿತ್ತು.ಈ ವಿದ್ಯಾಕೇಂದ್ರವು ಸ್ಥಳವಿಲ್ಲದ ಕಾರಣ ನಿಂತು ಹೋಯಿತು.ಬಳಿಕ ಮದಂಗಲ್ಲಿನ ಚೋಮ ಎಂಬವರ ಅಂಗಡಿಯಲ್ಲಿ ಊರಿನವರು ಸಭೆ ಸೇರಿ ಒಂದು ಕಮಿಟಿ ರೂಪೀಕರಿಸಿ ಮೂಸ ತಲೆಕಳ ರವರನ್ನು ಅಧ್ಯಕ್ಷರಾಗಿ ಮಾಡಿ ತಲಾ 5 ರೂ. ವಿನಂತೆ ಸಂಗ್ರಹಿದರು.ಆಗಿನ ಜಿಲ್ಲಾ ಬೋರ್ಡ್ ಪ್ರತಿನಿಧಿಯಾದ ವಿದ್ವಾನ್ ನಾರಾಯಣ ಭಟ್ ರವರಲ್ಲಿ ಶಾಲೆಯ ಬಗ್ಗೆ ಚರ್ಚಿಸಿದಾಗ ಅವರು 100ರೂ. ನೀಡಿ ಸಹಕರಿಸಿದರು.ಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಶಾಲೆ ಕಟ್ಟಲು ಬೇಕಾದ ಮರವನ್ನು ನೀಡಿದರು.ಊರವರ ಸಹಕಾರದಿಂದ ಹೊಸ ಶೆಡ್ಡ್ ನ್ನು 1952ರಲ್ಲಿ ನಿರ್ಮಿಸಿ ತರಗತಿಗಳು ಪುನಾರಂಭಗೊಂಡಿತು. ಊರಿನ ಪ್ರಮುಖರು ಆಗಿನ ಶಾಸಕ ಕಳ್ಳಿಗೆ ಮಹಾಬಲ ಭಂಡಾರಿಯಲ್ಲಿ ಶಾಲೆಯ ಕಟ್ಟಡದ ಸಮಸ್ಯೆಯನ್ನು ಸೂಚಿಸಿದಾಗ ಅವರು ಹೊಸ ಕಟ್ಟಡಕ್ಕೆ ಅನುಮತಿ ನೀಡಿದರು.ಅದರಂತೆ 1969 ಎಪ್ರೀಲ್ 19ರಂದು ಆಗಿನ ಆರೋಗ್ಯ ಮಂತ್ರಿ ಬಿ.ವಿಲ್ಲಿಂಗ್ಟನ್ ಹೊಸ ಕಟ್ಟಡವನ್ನು ಉದ್ಘಾಟಿಸಿದರು.ಆಮೂಲಕ ಈ ಊರವರ ಕನಸ್ಸು ನನಸ್ಸಾಯಿತು.1994 ರ ಬಳಿಕ ಪಂಚಾಯತ್ ಮತ್ತು DPEP ಯೋಜನೆಗಳ ಫಲವಾಗಿ ಶಾಶ್ವತ ಕಟ್ಟಡವಾಗಿ ಪರಿವರ್ತನೆಗೊಂಡಿತು.

INFRASTRUCTURE

ಶಾಲೆಯ ಭೌತಿಕ ಸೌಕರ್ಯವು ಉತ್ತಮವಾಗಿದೆ.ಸುಸಜ್ಜಿತವಾದ ತರಗತಿಕೋಣೆಗಳು,ಶುಧ್ಧವಾದ ಕುಡಿನೀರು,ಸೌಲಭ್ಯಗಳಿರುವ ಶೌಚಾಲಯಗಳು,ಕಂಪ್ಯೂಟರ್ ಕಲಿಕೆಗೆ ಬೇಕಾದ ಕಂಪ್ಯೂಟರ್ ,Projecter,laptop,ಉತ್ತಮವಾದ ಆಟದ ಮೈದಾನ,ಇನ್ನಿತರ ಸೌಕರ್ಯಗಳನ್ನು ಒಳಗೊಂಡಿದ

CO-CURRICULAR ACTIVITIES

ಆಟೋಟ ಸ್ಪರ್ಧೆಗಳು,ಶಾಲಾ ವಾರ್ಷಿಕೋತ್ಸವ,ಶೈಕ್ಷಣಿಕ ಪ್ರವಾಸ ಮೊದಲಾದ ಪಠ್ಯೇತರ ಚಟುವಟಿಗಳು ನಡೆಯ

MANAGEMENT

FORMER HEADMASTERS

ಈ ಮೊದಲು ತಲೆಕಳ ಶಾಲೆಯಲ್ಲಿ ಹಲವಾರು ಮುಖ್ಯೋಪಾಧ್ಯಾಯರು ಸೇವೆಸಲ್ಲಿಸಿದ್ದಾರೆ.ಮಹಾಬಲ ಹೊಳ್ಳ ಬೇರಿಕೆ,ಜಯಕೃಷ್ಣ ಕೊಣಾಜೆ,ಸನತ್ ಕುಮಾರ್,ಮೊಯಿದೀನ್ ಕುಟ್ಟಿ ಕುಂಡೇರಿ,ಚಂದ್ರಶೇಖರ್ ಕಾಯರ್ ಕಟ್ಟೆ ಇತ್ತೀಚೆಗೆ ಸೇವೆ ಸಲ್ಲಿಸಿ ನಿವೃತ್ತಿಗೊಂಡವರು.

FAMOUS OLD STUDENTS

ಮಂಗಳೂರಿನಲ್ಲಿ ಡಿವೈಎಸ್ಪಿ ಯಾಗಿ ಸೇವೆ ಮಾಡುತ್ತಿರುವ ಬಶೀರ್ ಅಹಮ್ಮದ್ ಈ ಶಾಲಾ ಹಳೆ ವಿದ್ಯಾರ್ಥಿ.ಕೃಷಿಕ ಸುಬ್ಬಣ್ಣ,ಉದ್ಯಮಿ ಮಹಮ್ಮದ್ ಹಾಜಿಗಳಂತಹ ಹಲವಾರು ಈ ಶಾಲಾ ಹಳೆ ವಿದ್ಯಾರ್ಥಗಳಾಗಿದ್ದಾರೆ.

WAY TO REACH SCHOOL

ಈ ಶಾಲೆಗೆ ಮಂಜೇಶ್ವರದಿಂದ ಕಡಂಬಾರ್ ಮಸೀದಿ ಸಮೀಪದಿಂದ ಇರುವ ಕಡಂಬಾರ್ ದೇವಸ್ಥಾನ ರಸ್ತೆಯಲ್ಲಿ 3 ಕಿಲೋ ಮೀಟರ್ ನಷ್ಟು ಸಂಚಾರಿಸಬೇಕಾಗಿದೆ.ಮೊರತ್ತಣೆಯಿಂದ ಹಾಗೂ ಮೀಯಪದವುನಿಂದ ಬರುವವರು ಬಟ್ಟಿಪದವು ಮೂಲಕ ಸಂಚಾರಿಸಬೇಕು.ತೀರಾ ಒಳ ಪ್ರದೇಶದಲ್ಲಿರುವ ಈ ಶಾಲೆಯ ರಸ್ತೆ ಡಾಮರೀಕರಣಕ್ಕೆ ಹಲವಾರು ಸಲ ಮನವಿ ಸಲ್ಲಿಸಿದರೂ ಇದುವರೆಗೆ ಡಾಮರೀಕರಣವಾಗದಿರುವುದು ಖೇದಕರ.

"https://schoolwiki.in/index.php?title=G._L._P._S._Thalekala&oldid=258659" എന്ന താളിൽനിന്ന് ശേഖരിച്ചത്