"എസ് എസ് ബി എ യു പി എസ് അയ്ല" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
(' ಸುಮಾರು ಅರ್ಧ ಶತಮಾನದ ಹಿಂದಿನ ಕಾಲ.ಆಗ ನಮ್ಮೂರಿನ ಮಕ...' താൾ സൃഷ്ടിച്ചിരിക്കുന്നു)
 
(താൾ ശൂന്യമാക്കി)
വരി 1: വരി 1:
    ಸುಮಾರು ಅರ್ಧ ಶತಮಾನದ ಹಿಂದಿನ ಕಾಲ.ಆಗ ನಮ್ಮೂರಿನ ಮಕ್ಕಳಿಗೆ ಹತ್ತಿರ ಎಲ್ಲೂ ಶಾಲೆಗಳಿರಲಿಲ್ಲ. ದೂರದ ಮಂಗಲಪಾಡಿ ಶಾಲೆಗೋ  ಮುಳಿಂಜಶಾಲೆಗೋ ಹೋಗಬೇಕಿತ್ತು . ಆ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಯೋಗ್ಯ ಪ್ರೋತ್ಸಾಹ ದೊರಕುತ್ತಿರಲಿಲ್ಲ .
   
          ಹೀಗಾಗಿ ಆ ಕಾಲದಲ್ಲಿ ನಮ್ಮ ಸಮಾಜದ ಯಾವುದೇ ವಿದ್ಯಾರ್ಥಿಗಳು ಅಷ್ಟು ದೂರ ಹೋಗಿ ವಿದ್ಯೆ ಕಲಿಯುತ್ತಿರಲಿಲ್ಲ . ಆ ವೇಳೆಯಲ್ಲಿ ಊರಿನ ಅನೇಕ ವಿದ್ಯಭಿಮಾನಿಗಳು ಈ ಕೊರತೆಯನ್ನು ನಿವಾರಿಸಲು ಯತ್ನಿಸಿದರು .ನಮಗೆ ನಮ್ಮ ಊರಿನಲ್ಲಿ ,ನಮ್ಮದೇ ಆದ ಶಾಲೆಯಿದ್ದರೆ ನಮ್ಮ ಸಮಾಜದ ಬಡ ಮಕ್ಕಳಲ್ಲಿ ಹೆಚ್ಚಿನ ವಿದ್ಯಪ್ರಸಾರವಾಗಬಹುದೆಂದು ಐಲ ಬೋವಿ ಭಗವತಿ  ಭಂಡಾರದ  ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ  ಅಂದಿನ ನಮ್ಮ ಹಿರಿಯರು ಮನಗಂಡು ಅದಕ್ಕಾಗಿ ಕಾರ್ಯೋನ್ಮುಖರಾದರು.  . ಆ ವೇಳೆ ನಮ್ಮ ಸಮಾಜದ ಜ್ಞಾನವೃಧ್ಧರೂ ವಯೋವೃದ್ಧರೂ ಆಗಿದ್ದ ಕಡಪ್ಪುರ ಸುಬ್ಬನವರು ತಮ್ಮ ಮನೆಯ ಮುಂಭಾಗದಲ್ಲಿರುವ ಒಂದು ಸಣ್ಣ ಕಟ್ಟಡದಲ್ಲಿ ಸಮಾಜದ ಮಕ್ಕಳಿಗೆ ಓದು ಬರಹವನ್ನು ಕಲಿಸುವ ಏರ್ಪಾಡು ಮಾಡಿ ತನ್ನ ಪುತ್ರರಾದ ಜೋಗಪ್ಪ ಮತ್ತು ಈಶ್ವರ ಯಾನೆ ಕೊಟ್ಯಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಿದರು. ಆದರೆ ಆ ಕಟ್ಟಡವು ಶಾಲೆಗೆ ಯೋಗ್ಯವಲ್ಲವೆಂದು ಮನಗಂಡು ನಮ್ಮ ಐಲ  ಬೋವಿ ಭಗವತಿ  ಭಂಡಾರದ ಸಭೆಯವರು ರೈಲ್ವೆ ಗೇಟ್ ಬಳಿ ಇರುವ ದಿ \ವಾಸುದೇವ ಮಯ್ಯರ ಸಣ್ಣ ಕಟ್ಟಡವನ್ನು ಶಾಲೆಗಾಗಿ ಬಾಡಿಗೆಗೆ ಪಡೆದುಕೊಂಡರು . ಶಾಲಾ ಪ್ರಾಯದ ಸಮಾಜದ ಮಕ್ಕಳನ್ನು ಹೊಸದಾಗಿ ಪ್ರಾರಂಭಿಸುವ ಶಾಲೆಗೆ ಕಳುಹಿಸಬೇಕೆಂದು ತೀರ್ಮಾನಿಸಿದರು .


      ಹೀಗೆ ೦೬-೧೦-೧೯೨೭ ರಂದು ಐಲ ಶ್ರೀ ಶಾರದ ಬೋವಿ ಪ್ರಾಥಮಿಕ ಶಾಲೆ ಎಂಬ ನಾಮಕರಣ ಪಡೆದು ೨೭ ಮಕ್ಕಳ ದಾಖಲಾತಿಯೊಂದಿಗೆ ಕಾರ್ಯೋನ್ಮುಖವಾಯಿತು . ಜೋಗಪ್ಪ ಮತ್ತು ಕೋಟ್ಯಪ್ಪ ನವರು ಕಾರಣಾ೦ತರದಿಂದ ಅಧ್ಯಾಪಕರಾಗಿ ಮುಂದುವರಿಯದ ಕಾರಣ ಕರ್ತಪ್ಪ ಎಂಬವರನ್ನು ಅಧ್ಯಾಪಕರನ್ನಾಗಿ ನೇಮಿಸಲಾಯಿತು . ನಮ್ಮ ಸಮಾಜದ ಏಕೈಕ ಸರಕಾರಿ ಅಧಿಕಾರಿಯಾಗಿದ್ದ ಅಮೀನ್ ವೀರಪ್ಪ ಮತ್ತು ಕರ್ತಪ್ಪ ಮಾಸ್ತರರ ಅವಿಶ್ರಾಂತ ಪ್ರಯತ್ನದ ಫಲವಾಗಿ ೧೯೩೦ ರ ಹೊತ್ತಿಗೆ ಶಾಲೆಗೆ ತಾತ್ಕಾಲಿಕ ಮಂಜೂರಾತಿ ದೊರೆಯಿತು

14:18, 19 ജനുവരി 2017-നു നിലവിലുണ്ടായിരുന്ന രൂപം

"https://schoolwiki.in/index.php?title=എസ്_എസ്_ബി_എ_യു_പി_എസ്_അയ്ല&oldid=243678" എന്ന താളിൽനിന്ന് ശേഖരിച്ചത്