ജി.വി.എച്ച്.എസ്. എസ് മുള്ളേരിയ/അക്ഷരവൃക്ഷം/ ಶ್ರಮಕ್ಕೆ ತಕ್ಕ ಫಲ

Schoolwiki സംരംഭത്തിൽ നിന്ന്
ಶ್ರಮಕ್ಕೆ ತಕ್ಕ ಫಲ
ಒಂದು ಊರಿನಲ್ಲಿ ಇಬ್ಬರು ಗೆಳೆಯರಿದ್ದರು.ಇಬ್ಬರು 10ನೇ ತರಗತಿಯಲ್ಲಿಕಲಿಯುವುದು. ಒಬ್ಬನ ಹೆಸರು ರಮೇಶ್ ಮತ್ತೊಬ್ಬನ ಹೆಸರು ಸುರೇಶ್. ರಮೇಶ ಬಹಳ ಶ್ರೀಮಂತ ಹಾಗೂ ಕಲಿಯಲು ತುಂಬಾ ಚುರುಕಾಗಿ ಇದ್ದಾನೆ.ಆದರೆ, ಅವನಿಗೆ ಸ್ವಲ್ಪ ಅಹಂಕಾರವಿದೆ.ಸುರೇಶ ಕಡು ಬಡವ.ಆತನು ಕಲಿಯುವುದರಲ್ಲಿ ಸ್ವಲ್ಪ ಹಿಂದೆ ಇದ್ದರೂ ಗುಣದಲ್ಲಿ ತುಂಬಾ ಒಳ್ಳೆಯವನು.

ಎರಡು ದಿವಸ ಕಳೆದ ಮೇಲೆ 10ನೇ ತರಗತಿಯವರಿಗೆ ಪರೀಕ್ಷೆ ಆರಂಭ.10ನೇ ತರಗತಿಯ ಪರೀಕ್ಷೆ ಎಂದರೆ ಬಹಳ ಕಷ್ಟವಾದ ಪರೀಕ್ಷೆ.ರಮೇಶ ಮೊದಲು ಎಲ್ಲಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.ಆಗ ಅವನ ತಂದೆ ಅವನಿಗೆ ಹಲವಾರು ಉಡುಗೊರೆಗಳನ್ನು ನೀಡುತ್ತಿದ್ದರು. ಹಾಗಾಗಿ ಅವನು ಈ ಸಲ ಕೂಡಾ ನಾನು ಹೆಚ್ಚು ಅಂಕಗಳಿಸಿ ಪಾಸ್ ಆಗುತ್ತೇನೆ ಎಂದು ಯೋಚಿಸಿದನು. ರಮೇಶನ ಗೆಳೆಯ ಸುರೇಶ ಮೊದಲಿನ ಎಲ್ಲಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದು ಕೆಲವು ವಿಷಯಗಳಲ್ಲಿ ಫೈಲ್ ಆಗಿದ್ದಾನೆ.ಅವನ ತಂದೆ ಚೆನ್ನಾಗಿ ಓದಲು ಬುದ್ಧಿ ಹೇಳಿದರು ಇವನಿಗೆ ಅರ್ಥವಾಗುತ್ತಿರಲಿಲ್ಲ. ಇಬ್ಬರು ಗೆಳೆಯರು ಪರೀಕ್ಷೆಯ ಬಗ್ಗೆ ಚಿಂತಿಸಿ ಮನೆಗೆ ತೆರಳಿದರು.ರಮೇಶ "ಈ ಸಲ ನಾನು ಪಾಸ್ ಆಗುವೆನು" ಎಂದು ಹೇಳಿ ತನ್ನ ಮನೆಗೆ ಹೋದ. ಇದನ್ನು ಕೇಳಿದ ಸುರೇಶನಿಗೆ ಸ್ವಲ್ಪ ದುಃಖವಾಯಿತು."ನಾನು ಹೇಗೆ ಪಾಸ್ ಆಗುವುದು." ಎಂದು ಯೋಚಿಸಿದನು. ಮರು ದಿವಸ ಸಂಜೆ ರಮೇಶ ಟಿ.ವಿ, ಮೊಬೈಲ್ ನೋಡುತ್ತಿದ್ದನು. ಅವನ ತಂದೆ" ಪರೀಕ್ಷೆಗೆ ತಯಾರಾಗಿದ್ದೀಯಾ?" ಎಂದು ಕೇಳಿದಾಗ ಅವನು ನೆಗಾಡುತ್ತಾ ಯಾಕೆ ಯೋಚಿಸುತ್ತೀರಾ? ಎಷ್ಟು ಸುಲಭ ಪರೀಕ್ಷೆ" ಎಂದು ಹೇಳಿದನು. ಅಮಿತವಾದ ವಿಶ್ವಾಸದಿಂದ ಓದಿನಲ್ಲಿ ಉದಾಸೀನತೆ ತೋರಿದನು. ಆದರೆ ಸುರೇಶ ಏನು ಮಾಡುವುದು ಎಂದು ಯೋಚಿಸಿದ. ಅವನ ತಾಯಿ ಕರೆದು ಹೇಳಿದಳು." ನೀನು ಈ ಪರೀಕ್ಷೆಯಲ್ಲಿ ಪಾಸ್ ಆಗಬೇಕು. ಚೆನ್ನಾಗಿ ಓದು ಬಳ್ಳೆಯ ಅಂಕ ಪಡೆದರೆ ನಿನಗೆ ಒಳ್ಳೆಯ ಕೆಲಸ ನಡೆಸಲು ಸಾಧ್ಯ, ನಿನ್ನ ಭವಿಷ್ಯ ನಡೆಸಲು ಸಾಧ್ಯ. ಯಾಕೆ ತಂದೆ ಕೈಯಿಂದ ಪೆಟ್ಟು ತಿನ್ನುತ್ತೀಯಾ?"ಎಂದು ದುಃಖದಿಂದ ಹೇಳಿದಳು. ಇದನ್ನು ಕಂಡ ಸುರೇಶ ಯೋಚಿಸಿದ ಮತ್ತು ಒಂದು ತೀರ್ಮಾನಕ್ಕೆ ಬಂದ " ನಾನು ಚೆನ್ನಾಗಿ ಓದಿ ಪಾಸ್ ಆಗಿಯೇ ಆಗುತ್ತೇನೆ" ಎಂದು ಹೇಳಿ ಕಲಿಯಲು ಪ್ರಾರಂಭ ಮಾಡಿದನು. ಪರೀಕ್ಷೆಗಳು ಕಳೆದವು.ಫಲಿತಾಂಶ ಬರುವ ದಿನವೂ ಸುರೇಶ ಮತ್ತು ರಮೇಶ ಶಾಲೆಗೆ ಬಂದರು. ನೋಡಿದಾಗ ರಮೇಶ ಎಲ್ಲಾ ವಿಷಯಗಳಲ್ಲಿಯೂ ಕಡಿಮೆ ಅಂಕ ಪಡೆದಿದ್ದನು. ಆದರೆ, ಸುರೇಶ ನೋಡಿ ಆಶ್ಚರ್ಯನಾದ ಅವನು ಎಲ್ಲಾ ವಿಷಯಗಳಲ್ಲಿ ಫುಲ್ ಮಾರ್ಕ್ ಪಡೆದು ಪಾಸ್ ಆಗಿದ್ದಾನೆ. ಇದನ್ನು ಕಂಡ ಅವನು ತನ್ನ ಮನೆಗೆ ಓಡಿಕೊಂಡು ಬಂದು ತಾಯಿಯನ್ನು ಕಂಡು " ಅಮ್ಮ ನಾನು ಪಾಸ್.ಫುಲ್ ಮಾರ್ಕ್" ಎಂದು ಹೇಳಿದನು. ಇಬ್ಬರು ಖುಷಿಯಿಂದ ನಲಿದಾಡಿದರು. ಅವನ ತಂದೆಗೆ ಈ ವಿಷಯ ತಿಳಿದು ಅವರೂ ಖುಷಿಪಟ್ಟರು. ರಮೇಶ ದು:ಖದಿಂದ ಮನೆಗೆ ಹೋದಾಗ ಅವನ ತಂದೆ ಫಲಿತಾಂಶ ಕೇಳಿದರು.ಅವನು ವಿಷಯ ತಿಳಿಸಿದಾಗ ಅವನ ತಂದೆಯೂ" ಹೀಗೆ ಮಾಡುತ್ತಿ ಎಂದು ತಿಳಿದಿರಲಿಲ್ಲ."ಎಂದು ಬೇಸರದಿಂದ ಹೇಳಿದರು. ಯಾವತ್ತು ನಾವು ಯೋಚಿಸಿದಂತೆ ಆಗುವುದಿಲ್ಲ. ಆತ್ಮವಿಶ್ವಾಸ, ಶ್ರಮ ಮತ್ತು ತಂದೆ ತಾಯಿಯವರ ಪ್ರೀತಿ, ಮಾರ್ಗದರ್ಶನ ಇದ್ದರೆ ಯಶಸ್ಸು ಖಂಡಿತ ನಮ್ಮದೇ.ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಶ್ರಮಪಟ್ಟು ಕೆಲಸ ಮಾಡಿದರೆ ಒಳ್ಳೆಯ ಫಲಿತಾಂಶ ಇದ್ದೇ ಇರುತ್ತದೆ.

ಪೂರ್ಣೇಶ್ ವೈ ರೈ
8 A ജി.വി.എച്ച്.എസ്. എസ് മുള്ളേരിയ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ