ಕೋರೋಣ ಎಂಬ ಮಹಾಮಾರಿಯು
ಬಂದಿತು ನಮ್ಮಯ ನಾಡಿಗೆ
ಶಾಲೆಯು ಮುಚ್ಚಿತು ಕಛೇರಿ ಮುಚ್ಚಿತು
ಪರೀಕ್ಷೆಗಳೆಲ್ಲಾ ರದ್ದಾಯಿತು
ಮನೆಯಲ್ಲಿ ಮಾಸ್ಕನು ಹಾಕಿ
ಕೈಗಳ ತೊಳೆದು ಇನ್ನೊಬ್ಬರ ಮುಟ್ಟದೆ
ಮನೆಯಲೇ ವಾಸವಾ ಮಾಡಿದೆವು
ಬೇಸಿಗೆ ರಜೆಯಲಿ ಆಟವು ಇಲ್ಲ
ಜಾತ್ರೆಯು ಇಲ್ಲ ಪ್ರವಾಸವು ಇಲ್ಲ
ಸೆರೆಮನೆ ವಾಸವು ಮಾತ್ರವಿದೆ
ಎಲ್ಲರು ಸೇರಿ ಆದೇಶವ ಪಾಲಿಸಿ
ಈ ಮಹಾಮಾರಿಯ ಎದುರಿಸಿರಿ
ನಾಡಿನ ಒಳಿತಿಗೆ ಪ್ರಾರ್ಥಿಸುವ
ಒಗ್ಗಟ್ಟಾಗಿ ಮುನ್ನಡೆಯುವ