ಹೋಗಣ್ಣ ಹೋಗಣ್ಣ ಓ ಕೊರೊನಾ
ಬದುಕಲು ಬಿಡುವೆಯ ಈ ಮನುಜ ಕುಲವನ್ನ
ಓ ಮಹಾಮಾರಿ ಕೊರೊನಾ
ನೀ ನಡುಗಿಸಿದೆ ನಿನ್ನ ತವರು ಚೀನವನ್ನ
ಕೆಂಗಡಿಸಿದೆ ರಾಷ್ಟ್ರ ರಾಷ್ಟ್ರಗಳನ್ನು.
ನಿನ್ನ ಅಟ್ಟಹಾಸಕ್ಕೆ ಕನಸೆಂದು ಭಾವಿಸು ಭಾರತವನ್ನ
ನಮ್ಮದಿದು ಮುಕ್ಕೋಟಿ ದೇವತೆಗಳ ತವರಣ್ಣ
ಹೋಗಣ್ಣ ಹೋಗಣ್ಣ ಓ ಕೊರೊನಾ
ಬದುಕಲು ಬಿಡುವೆಯ ಈ ಮನುಜಕುಲವನ್ನ
ನಡುಗಿದನು ನಿನ್ನೆದುರು
ಜಗತ್ತಿನ ಹಿರಿಯಣ್ಣ
ನಾನು ನನ್ನಿಂದ ಎಂಬುವವರಿಗೆ
ತಿಳಿಸಿದೆ ತಕ್ಕ ಪಾಠವನ್ನ
ಆದರೂ ಅಸಾಧ್ಯ
ನಿನ್ನಿಂದ ನಡುಗಿಸಲು ಭಾರತವನ್ನ
ಅದಕ್ಕೊಂದು ಕಾರಣ
ಧೈರ್ಯ ಶೌರ್ಯ ಏಕತೆಯಿಂದ
ಸಾಕಿದ ತಾಯಿಭಾರತೀಯ
ಮಕ್ಕಳು ನಾವಣ್ಣ
ಹೋಗಣ್ಣ ಹೋಗಣ್ಣ ಓ ಕೊರೊನಾ
ಬದುಕಲು ಬಿಡುವೆಯ ಈ ಮನುಜ ಕುಲವನ್ನ