ಸಾವಿನ ಭಯ
ಭೂಮಿಗೆ ಬಂದಿತು ವೈರಸ್ ಕೊರೊನಾ
ತಂದಿತು ಜನರಿರದ ಪಟ್ಟಣ
ಜನಜಂಗುಳಿಂದ ದೂರವಿರೋಣ
ತಪ್ಪದೆ ಮಾಸ್ಕ್ ನ್ನು ಧರಿಸೋಣ
ಕನಸಿನ ಕಟ್ಟಡ ಆಯಿತು ನೆಲಸಮ
ರಜೆಯ ಮಾಡದೆ ಪಟ್ಟರು ಪರಿಶ್ರಮ
ವೈದ್ಯ ಸಿಬ್ಬಂದಿಯ ನಿರಂತರ ಶ್ರಮ
ವೈದ್ಯರೇ ಆದರು ದೇವರ ಸಮಸಮ
ಇಟಲಿ ಫ್ರಾನ್ಸ್ ಜರ್ಮನಿ ಚೀನಾ
ಭಾರತ ಅಮೇರಿಕಾ ಇಂಗ್ಲೆಂಡ್ ಇರಾನ್
ವೇಗದ ಜೀವನಕ್ಕೆ ಬ್ರೇಕರ್ ಇದೇನಾ
ಇದುವೇ ಪ್ರಪಂಚಕ್ಕೆ ವಿನಾಶದ ಸೂಚನೆನಾ
ಮನೆಯಲ್ಲೂ ಅಂತರ ಕಾಪಾಡೋಣ
ಶುಚಿಯಾಗಿರಲು ಮರೆಯದಿರೋಣ
ಭಾರತಾಂಬೆಯ ಮಕ್ಕಳಾದ ನಾವು
ಸಂಯಮದಿಂದ ಇರೋಣ ನಾವು ನೀವು
ಶೀತಜ್ವರ ಕೆಮ್ಮು ಬಂದರೆ
ವೈದ್ಯರ ಕಂಡು ತಪ್ಪಿಸುವ ತೊಂದರೆ
ಸರಕಾರಕ್ಕೆ ನಾವು ಸಹಕರಿಸೋಣ
ಹೊಡೆದೊಡಿಸಬೇಕಾಗಿದೆ ಈ ಕೆಟ್ಟ ಕೊರೊನಾ
ರಾಜಾರಾಮ,
೬ ಎ