ಜೀವನವೇ ಒಂದು ಗಣಿತ
ಸಂಬಂಧಗಳನ್ನು ಕೂಡಿಸಿ
ಬಿರುಕನ್ನು ಕಳೆದು
ಸಿಗುವ ಒಗಟನ್ನು ಗುಣಿಸಿ
ಲಾಭ ನಷ್ಟಗಳನ್ನು ಒಟ್ಟಾಗಿಸಿ ಭಾಗಿಸಿ
ಬಾಳಿದರೆ ನಮ್ಮ ಜೀವನವೇ ಒಂದು ಗಣಿತ
ನಾವು ಜೀವಿಸುವ ಪ್ರಪಂಚವೇ ಒಂದು ವೃತ್ತ
ನಾವು ವಾಸಿಸುವ ಮನೆಯೇ ಆಯತ
ನಾವಿಬ್ಬರೆ ಎಂದು ಆಲೋಚಿಸಿದರೆ ಅದು ಒಂದು ಸಮಾನಾಂತರ ರೇಖೆ
ನಾವಿಬ್ಬರು ನಮಗೊಂದೆ ಎಂದು ಭಾವಿಸಿದರೆ ಅದು ತ್ರಿಕೋನ
ಒಟ್ಟಾಗಿ ಜೀವಿಸಿದಾಗ ನಮಗೆ ಸಿಗುವ ಬಲವೇ ಚೌಕ
ಈ ರೀತಿಯಾಗಿ ಜೀವನದಲ್ಲಿ
ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿ
ಸಂಬಂಧಗಳನ್ನು ಒಟ್ಟಾಗಿ ಪೋಣಿಸಿದರೆ
ಸಿಗುವ ಮೊತ್ತವೆ ಬದುಕಿನ ಸುಂದರ ಕ್ಷಣಗಳು