ജി.എച്ച്.എസ്. എസ്. ബേകൂർ/അക്ഷരവൃക്ഷം/ ಸ್ವಾರ್ಥತೆಯ ದುರಂಹಕಾರ

Schoolwiki സംരംഭത്തിൽ നിന്ന്
ಸ್ವಾರ್ಥತೆಯ ದುರಂಹಕಾರ

ಸ್ವಾರ್ಥತೆಯ ದುರಂಹಕಾರ ಒಂದು ಊರಿನಲ್ಲಿ ರಮೇಶ ,ಸುರೇಶ ಎಂಬ ಇಬ್ಬರು ಅಣ್ಣ ತಮ್ಮಂದಿರು ಇದ್ದರು. ತಾವಿಬ್ಬರು ಒಂದೇ ತಾಯ ಮಕ್ಕಳಾದರೂ ಅವರ ಸ್ವಭಾವದಲ್ಲಿ ವ್ಯತ್ಯಾಸ ಕಾಣುತಿತ್ತು. ಸುರೇಶ ಸ್ವಾರ್ಥಿ ಆದರೆ ರಮೇಶ ಬಹಳ ಸಾಧು ಇನ್ನೊಬ್ಬರ ಕಷ್ಟ ದುಃಖಗಳಲ್ಲಿ ಭಾಗಿಯಾಗುತಿದ್ದ. ಆದ್ದರಿಂದ ಊರವರಿಗೆ ರಮೇಶ ಅಂದರೆ ತುಂಬ ಪ್ರೀತಿ. ಆದರೆ ಸುರೇಶ ಅಂದರೆ ಇಷ್ಟವೇ ಇರಲಿಲ್ಲ. ಸುರೇಶನಿಗೂ ಹಾಗೆ ಊರವರಂದರೆ ಕಣ್ಣು ಎತ್ತಿ ಕೂಡ ನೋಡುತಿರಲಿಲ್ಲ. ಯಾರಿಗೂ ಯಾವುದೇ ತರದ ಸಹಾಯ ಮಾಡುತ್ತಿರಲಿಲ್ಲ. ಆದರೆ ರಮೇಶ ತನ್ನಿಂದ ಆಗುವ ಎಲ್ಲಾಸಹಾಯವನ್ನು ಊರವರಿಗೆ ಮಾಡಿಕೊಡುತ್ತಿದ್ದ. ಆದ್ದರಿಂದ ರಮೇಶ ಅಂದರೆ ಊರವರಿಗೆ ನೂರು ಮಾತು. ಹೀಗೆ ವರ್ಷಗಳು ಕಳೆದವು...ಸುರೇಶ ಬೇರೆ ಮನೆಕಟ್ಟಿ ಕುಳಿತುಕೊಂಡ. ಹೀಗೆ ಇದ್ದಾಗ ಒಂದು ದಿನ ಸುರೇಶ ಅಂಗಡಿಗೆ ಹೋಗಬೇಕಾದರೆ ಅಲ್ಲಿ ಅಂಗಡಿಯಲ್ಲಿ ನೆರೆದಿದ್ದ ಜನರು ರಮೇಶನನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಕೇಳಿದ ಸುರೇಶನಿಗೆ ಕೋಪ ತಡೆಯಲಾಗಲಿಲ್ಲ. ಅದೇ ಕ್ಷಣ ಸುರೇಶನು ರಮೇಶನಿಗೆ ಏನಾದರೂ ಮಾಡಬೇಕು ಎಂಬ ಯೋಚನೆಯೊಂದಿಗೆ ರಮೇಶನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಅವನ ಮನೆಗೆ ಸುರೇಶನು ಬೆಂಕಿ ಹಚ್ಚಿದನು. ರಮೇಶನ ಮನೆ ಹುಲ್ಲಿನಿಂದ ಕವಿದ ಗುಡಿಸಲು ಆದ್ದರಿಂದ ಬೆಂಕಿ ಪಕ್ಕನೆ ಹರಡಿ ಧಗ ಧಗ ಅಂತ ಉರಿಯಲು ಆರಂಭಿಸಿತು. ಈ ವಿಷಯವನ್ನು ತಿಳಿದ ಊರಿನ ಜನರು ಓಡಿಕೊಂಡು ಬಂದು ಗುಡಿಸಲಿಗೆ ನೀರು ಹಾಕಿ ನಂದಿಸಿ ರಮೇಶನನ್ನು ರಕ್ಷಿಸಿದರು. ಆದರೆ ರಮೇಶನನ್ನು ರಕ್ಷಿಸುವ ರಭಸದಲ್ಲಿ ಒಂದು ಬೆಂಕಿ ಕಿಡಿ ಹತ್ತಿರ ಮನೆಯಾದ ಸುರೇಶನ ಮನೆಗೆ ರಟ್ಟಿತು. ಸುರೇಶನ ಮನೆಯು ಧಗ ಧಗ ಅಂತ ಉರಿಯಲು ಆರಂಭಿಸಿತು. ಆದರೆ ಸುರೇಶನನ್ನು ರಕ್ಷಿಸಲು ಯಾರು ತಯಾರಾಗಲಿಲ್ಲ. .ಅಷ್ಟು ಕೂಡ ಜನರ ಮನಸ್ಸಲ್ಲಿ ಸುರೇಶ ಕಲ್ಮಶನಾಗಿದ್ದನು. ಆದರೆ ರಮೇಶ ತನಗೊಬ್ಬನೇ ಏನೂ ಮಾಡಲು ಕೂಡದು ಎಂಬ ಅರಿವಿದ್ದು ಓಡಿ ಹೋಗಿ ನೀರು ಹಾಕಿ ನಂದಿಸುತ್ತಾನೆ. ಈ ಸಂದರ್ಭದಲ್ಲಿ ಸುರೇಶನಿಗೆ ತನ್ನ ತಪ್ಪಿನ ಅರಿವಾಯಿತು. ನೀತಿ :- ಸ್ವಾರ್ಥ ದುರಂಹಕಾರದಿಂದ ಇದ್ದರೆ ಅದು ತನಗೆ ಮಾತ್ರವೇ ಅಣಿಯಾಗ ಬಲ್ಲುದು.


Kavyashri
10 B ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കഥ