ಕಲೆಯಲ್ಲಿ ಕಲೆ
ಜನಪದ ಕಲೆ
ಯಕ್ಷಗಾನವೆಂಬುವುದು
ತೆಂಕು ಬಡಗು ತಿಟ್ಟುಗಳ ಕರುನಾಡ ಕಲೆ
ಕುಂಬಳೆಯ ಪಾರ್ತಿಸುಬ್ಬನ ಈ ನೆಲೆ
ಚೆಂಡೆ ಮೃದಂಗದೊಂದಿಗೆ
ಚಕ್ರತಾಳಗಳ ಹಿಮ್ಮೇಳ
ಮಹಿಷಾಸುರನಂತಹ ಬಣ್ಣದ ವೇಷಗಳ ಪ್ರವೇಶ
ಅಭಿಮನ್ಯುವಿನ ಕುಣಿತಗಳೊಂದಿಗಿನ ಮುಮ್ಮೇಳ
ನೋಡಲು ಬಲು ಅಂದ
ಅಲ್ಲಲ್ಲಿ ನಡೆಯುವುದು
ಗಾನ ವೈಭವೋಪೇತವಾದ ಈ ನಡೆ
ಉಳಿಸಿ ಬೆಳೆಸುವ ಈ ಕಲೆಯ ಬಲೆ