ಭಾರತದ ರಕ್ಷಣೆಗೆ ಹೊರಟಿರುವ
ಧೀರ ಶೂರ ಯೋಧರೇ
ನಿಮಗಿದೋ ಸುಸ್ವಾಗತ
ನಿಮಗಿದೋ ಶುಭೋದಯ
ಈ ನೆಲ ಈ ಜಲ ಎಲ್ಲವೊಂದೆ
ಈ ಭೂಮಿಯಲ್ಲಿರುವ ಭಾರತೀಯರು ನಾವೊಂದೆ
ಹೆದರಿಕೆಯನು ಹಿಮ್ಮೆಟ್ಟಿಸಿ ಮುಂದೆ ನಡೆಯೋಣ
ಶಾಂತಿಯ ಸಂಕೇತವನು ಎಲ್ಲೆಡೆ ಸಾರೋಣ
ಶತ್ರುಗಳು ತೋಳದಂತೆ ಹೊಂಚು ಹಾಕುತ್ತಿದ್ದಾರೆ
ಹಿಮಾಲಯ ಪರ್ವತವನು ಬಿಟ್ಟು ಕೊಡಬಾರದು
ಆತ್ಮ ಶಕ್ತಿ ಆತ್ಮ ಧೈರ್ಯ ಮುನ್ನಡೆಸಿ ನಡೆಯಿರಿ
ನಮ್ಮ ಭಾರತ ಪುಣ್ಯ ಭಾರತ