എസ് .എ. പി. എച്ച് . എസ് . അഗൽപാടി/അക്ഷരവൃക്ഷം/ ಕೊರೋನ

Schoolwiki സംരംഭത്തിൽ നിന്ന്
ಕೊರೋನ
ಈಗ ಕೆಲವು ದಿನಗಳಿಂದ ಪ್ರಕೃತಿ ಅದೆಷ್ಟು ಶಾಂತ ಸ್ವಭಾವದಿಂದ ಕೂಡಿದೆ.ವಾಹನಗಳ ಓಡಾಟಗಳಿಲ್ಲ, ಕಾರ್ಖಾನೆಗಳಿಂದ ಹೊರಬರುವ ದಟ್ಟ ಹೊಗೆಯಿಲ್ಲ,ಜಗಳಗಳಿಲ್ಲ,ಕೊಲೆ ಸುಲಿಗೆಗಳಿಲ್ಲ.ಆದರೆ ಪ್ರಪಂಚದಾದ್ಯಂತ ಲಕ್ಷಕ್ಕಿಂತಲೂ ಮಿಕ್ಕಿ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.ಅಮೇರಿಕಾದಂತಹ ಸಂಪನ್ನ ರಾಷ್ಟ್ರಗಳೂ ಭೀತಿಯಿಂದ ತತ್ತರಿಸಿವೆ.ಇದಕ್ಕೆಲ್ಲ ಕಾರಣ ಕೊರೋನ ಎಂಬ ಒಂದು ಸಣ್ಣ ವೈರಸ್.2019 ನವೆಂಬರ್ ನಲ್ಲಿ ಚೀನಾದ ಉಹಾನಿನಲ್ಲಿ ಉದ್ಭವಿಸಿದ ಈ ಮಹಾರೋಗದ ಪೂರ್ಣ ಹೆಸರು ಕೊರೋನ ವೈರಸ್ ಡಿಸೀಸ್-2019(ಕೋವಿಡ್-19).ಚೀನಾದಿಂದ ಬಂದ ಈ ರೋಗವು ಇಡೀ ಪ್ರಪಂಚದಲ್ಲಿಯೇ ಮಹಾರೋಗವೆಂದು ಹೆಸರು ಪಡೆದಿದೆ.1720ರಲ್ಲಿ ಪ್ಲೇಗ್,1820ರಲ್ಲಿ ಕೊಲೇರಾ,1920ರಲ್ಲಿ ಸ್ಪಾನಿಷ್ ಫ್ಲೂ, ಇದೀಗ2020ರಲ್ಲಿ ಕೊರೋನ.

ಭಾರತಕ್ಕೂ ಕಾಲಿಟ್ಟ ಈ ರೋಗ ಈಗಾಗಲೇ ಹಲವಾರು ಮಂದಿಯ ಪ್ರಾಣವನ್ನು ಕಬಳಿಸಿದೆ.ರೋಗ ಲಕ್ಷಣ ಕಾಣುವ ಮೊದಲೇ ಒಬ್ಬರಿಂದ ಇನೊಬ್ಬರಿಗೆ ಹರಡುವ ಈ ರೋಗ ಜನರೆಡೆಯಲ್ಲಿ ಭೀತಿಯನ್ನು ಹುಟ್ಟಿಸಿದೆ.ಈ ರೋಗದ ಹರಡುವಿಕೆಯನ್ನು ಕಡಿಮೆಗೊಳಿಸಲು ಶಾಲಾಪರೀಕ್ಷೆಗಳನ್ನು ಮುಂದೂಡಲಾಯಿತು,ಎಲ್ಲಾ ಸಂಸ್ಥೆಗಳಿಗೂ ರಜೆಯನ್ನು ನೀಡಲಾಯಿತು.ಇಡೀ ದೇಶವೇ ಲೋಕ್ ಡೌನ್ ಆಯಿತು. ಈ ರೋಗದಿಂದ ಜನರಿಗೆ ಹಲವು ಸಮಸ್ಯೆಗಳಾಗಿರುವುದು ನಿಜ.ಆದರೆ ಪ್ರಕೃತಿಗೆ ಇದರಿಂದ ಒಳಿತಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ವಾತಾವರಣದ ವಾಯುವಿನಲ್ಲಿ ಮಾಲಿನ್ಯ ಕಡಿಮೆಯಾಗಿದೆ.ಜಲ ಮಾಲಿನ್ಯಗಳಿಲ್ಲ,ಪರಿಸರ ಮಾಲಿನ್ಯಗಳಿಲ್ಲ,ಶಬ್ದ ಮಾಲಿನ್ಯಗಳಿಲ್ಲ.ಈ ಲೋಕ್ ಡೌನ್ ಕಾಲದಲ್ಲಿ ಕೆಲವರಾದರೂ ತಮಗೆ ಬೇಕಾದ ತರಕಾರಿಗಳನ್ನು ತಾವೇ ಬೆಳೆಸಲು ತೊಡಗಿದ್ದಾರೆ.ವಿಷ ರಹಿತ ತರಕಾರಿಗಳನ್ನು ಹಣ್ಣುಹಂಪಲುಗಳನ್ನು ಮನೆಯಲ್ಲಿ ಬೆಳೆಸುವುದರ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇದ್ದು ಕೌಟುಂಬಿಕ ಸಂಬಂಧಗಳು ಹೆಚ್ಚು ಸುದೃಢವಾಗಿವೆ.ಕ್ಷುಲ್ಲಕ ಕಾರಣಗಳಿಗೆ ವೈದ್ಯರಲ್ಲಿಗೆ ಹೋಗುವುದು ನಿಂತು ಹೋಗಿದೆ.ರಸ್ತೆ ಅಪಘಾತಗಳು ಕಡಿಮೆಯಾಗಿವೆ.ಪ್ರಕೃತಿಯ ಸೃಷ್ಠಿ ವೈಚಿತ್ರ್ಯದ ಮುಂದೆ ಮಾನವನ ಸಾಧನೆ ಏನೂ ಅಲ್ಲ ಎನ್ನುವುದನ್ನು ಕೊರೋನಾ ತೋರಿಸಿಕೊಟ್ಟಿದೆ. ಪರಸ್ಪರ ಕೈ ಕುಲುಕುವ,ಅಪ್ಪಿಕೊಳ್ಳವ,ಚುಂಬಿಸುವ ಪಾಶ್ಚಾತ್ಯ ಸಂಸ್ಕೃತಿಯನ್ನು ಕೈಬಿಟ್ಟು ಇಡೀ ಪ್ರಪಂಚವೇ ಭಾರತೀಯ ಸಂಸ್ಕೃತಿಯನ್ನು ಒಪ್ಪಿಕೊಂಡಿದೆ. ವ್ಯಕ್ತಿ ಶುಚಿತ್ವ, ಪರಿಸರ ಶುಚಿತ್ವ ಎಷ್ಟು ಅಗತ್ಯ ಎಂಬುದನ್ನು ಎಲ್ಲರೂ ಮನಗಂಡಿದ್ದಾರೆ. ಇಡೀ ಪ್ರಪಂಚವನ್ನೇ ತನ್ನ ಕಾಲ ಕೆಳಗೆ ತರಬೇಕೆನ್ನುವ ಹಂಬಲ ಅಹಂಕಾರಗಳಿಂದ ಮೆರೆಯುತ್ತಿರುವ ಮಹಾನ್ ರಾಷ್ಟ್ರಗಳು ನೆಲೆಕಚ್ಚಿವೆ. “ಪ್ರಕೃತಿಯೇ ಭೂಮಿಯ ಸಮತೋಲನವನ್ನು ಮಾಡುತ್ತದೆ ” ಎನ್ನುವ ಖ್ಯಾತ ಶಾಸ್ತ್ರಜ್ಞ ಮಾಲ್ತಸ್ ನ ಹೇಳಿಕೆ ಮತ್ತೊಮ್ಮೆ ಸಾಬೀತಾಗಿದೆ.

ಪ್ರಪಂಚದ ಬಹುತೇಕ ರಾಷ್ರ್ಟಗಳು ವೈರಸ್ ದಾಳಿಗೆ ತುತ್ತಾಗಿ ಕಂಗಾಲಾಗಿರುವ ಈ ಸಂದರ್ಭದಲ್ಲಿ 133ಕೋಟಿ 

ಜನಸಂಖ್ಯೆ ಇರುವ ಭಾರತ ಕೊರೋನಕ್ಕೆದುರಾದ ಹೋರಾಟದಲ್ಲಿ ಬಹುತೇಕ ವಿಜಯ ಸಾಧಿಸಿದೆ. ಅದರಲ್ಲೂ ನಮ್ಮ ರಾಜ್ಯವಾದ ಕೇರಳ ಮತ್ತು ನಮ್ಮ ಜಲ್ಲೆಯಾದ ಕಾಸರಗೋಡು ಗಮನಾರ್ಹ ಸಾಧನೆ ಮಾಡಿದೆ.ಕೊರೋನಕ್ಕೆದುರಾದ ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ನಿಸ್ವಾರ್ಥ ಸೇವೆಗೈಯುತ್ತಿರುವ ವೈದ್ಯರು, ದಾದಿಯರು ಮತ್ತಿತರ ಆರೋಗ್ಯ ಕಾರ್ಯಕರ್ತರು ಹಾಗೂ ಉರಿಬಿಸಿಲನ್ನು ಲೆಕ್ಕಿಸದೆ ದುಡಿಯುತ್ತಿರುವ ಪೋಲೀಸ್ ಇಲಾಖೆಯವರು ಮತ್ತು ಇತರ ಸಾಮಾಜಿಕ ಕಾರ್ಯಕರ್ತರುಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.ಕೊರೋನ ಎನ್ನುವ ಈ ಮಹಾ ವ್ಯಾಧಿಯು ಆದಷ್ಟು ಬೇಗ ಇಲ್ಲದಾಗಿ ಇಡೀ ಪ್ರಪಂಚ ಶಾಂತಿ, ಸಮಾಧಾನ, ಸೌಹಾರ್ದಗಳಿಂದ ನೆಲೆನಿಲ್ಲುವಂತಾಗಲಿ.

ಭಾವನಾಕೃಷ್ಣ ಎಂ
10 B എസ് .എ. പി. എച്ച് . എസ് . അഗൽപാടി
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - ലേഖനം