എസ് എസ് എ എൽ പി എസ് മുഡൂർ തോക്കെ(ಎಸ್.ಎಸ್ಎ.ಎಲ್.ಪಿ.ಎಸ್ ಮೂಡೂರುತೋಕೆ)/ചരിത്രം

Schoolwiki സംരംഭത്തിൽ നിന്ന്
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಚರಿತ್ರೆ

ನಮ್ಮ ಈ ಶಾಲೆಗೆ ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವರ್ಕಾಡಿ ಗ್ರಾಮದಲ್ಲಿ ಮುಡೂರು ತೋಕೆ ಎಂಬಲ್ಲಿ ತೌಡುಗೋಳಿಗೆ ಹತ್ತಿರವಾಗಿ ಕರ್ನಾಟಕ ರಾಜ್ಯದಗಡಿಪ್ರದೇಶದಲ್ಲಿದೆ. ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಇದು ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವೊರ್ಕಾಡಿ ಗ್ರಾಮದ ಮೂರನೇ ವಾರ್ಡ್ ನ ಮುಡೂರ್ ತೋಕೆ ಎಂಬಲ್ಲಿ ತೌಡು ಗೋಳಿ ಗೆ ಹತ್ತಿರವಾಗಿ ಕರ್ನಾಟಕ ರಾಜ್ಯದ ಗಡಿಪ್ರದೇಶದಲ್ಲಿದೆ. ತೀರಾ ಗ್ರಾಮೀಣ ಪ್ರದೇಶವೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೂ, ಅನಕ್ಷರಸ್ಥ ರೂ ಕೂಡಿದ್ದ ಈ ಪ್ರದೇಶದಲ್ಲಿ ಊರವರ ಶ್ರಮದ ಫಲವಾಗಿ ಒಂದು ಹುಲ್ಲಿನ ಮಾಡಿನ ಶಾಲೆ ಆರಂಭವಾಯಿತು. ಆ ಸಮಯದಲ್ಲಿ ಒಬ್ಬರು ಅಧ್ಯಾಪಕರು ಮಾತ್ರ ಅಧ್ಯಾಪನ ಮಾಡುತಿದ್ದರು. ಅವರ ನಿಧನದ ಬಳಿಕ ಶಾಲೆಯನ್ನು ಒಂದು ಸುವ್ಯವಸ್ಥೆ ಯಿರುವ ಸಂಸ್ಥೆಯನ್ನಾಗಿಸಬೇಕೆಂದು ಮನಗಂಡ ಶ್ರೀಯುತ ಚಾವಡಿಬೈಲು ಜಯರಾಮ ಶೆಟ್ಟಿಯವರು 1954ರಲ್ಲಿ ತೌಡುಗೋಳಿಯ ಈ ಸ್ಥಳದಲ್ಲಿ ಶಾಲೆಯನ್ನು ಕಟ್ಟಿಸಿದರು.

ಸಮೀಪದ ವೊರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ಕ್ಷೇತ್ರದ ಆರಾಧ್ಯದೇವರ ಹೆಸರನ್ನೇ ಅಂದರೆ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಿದರು.

ತೀರಾ ಹಿಂದುಳಿದ ಪ್ರದೇಶವಾದ್ದರಿಂದ ಆ ಕಾಲದಲ್ಲಿ ಒಂದರಿಂದ ನಾಲ್ಕನೇ ತರಗತಿ ಯವರೆಗೆ ಕೆಲವು ಮಕ್ಕಳು ಮಾತ್ರ ಕಲಿಯುತ್ತಿದ್ದರು. ಕ್ರಮೇಣ ಸಾಧಾರಣ 170 ಮಕ್ಕಳು ಏಕಕಾಲಕ್ಕೆ ಇಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು.

ಸಾಧಾರಣ 8 ಕಿ.ಮೀ. ವ್ಯಾಪ್ತಿಯಲ್ಲಿ ಈ ಪ್ರದೇಶದಲ್ಲಿ ಕೇರಳದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೈಸ್ಕೂಲ್ ಗಳಗಾಲಿ ಇಲ್ಲ. ಸಮೀಪದ ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ತರಗತಿಗಳಿದ್ದು ಈ ಪ್ರದೇಶದ ಹೆಚ್ಚಿನ ಮಕ್ಕಳು ಕರ್ನಾಟಕ ದ ಶಾಲೆಗಳಿಗೆ ಹೋಗುತಿದ್ದರೆ.

ನಮ್ಮ ಶಾಲೆಯಿಂದ ಉತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಕ್ಕೆ ಕರ್ನಾಟಕ ರಾಜ್ಯದ ಶಾಲೆಗಳನ್ನೇ ಆಶ್ರಯಿಸುತ್ತಾರೆ.

ಆದುದರಿಂದ ಗಡಿಪ್ರದೇಶದಲ್ಲಿರುವ ನಮ್ಮಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಬೇಕೆಂಬುದೇ ನಮ್ಮೆಲ್ಲರ ಆಶಯ.

1954 ರಿಂದ ಈ ಶಾಲೆಯಲ್ಲಿ ತಮ್ಮ ಅಮೂಲ್ಯ ಸೇವೆ ಗೈದವರು.

Sl no Name Year
1 ಶ್ರೀ ಸುಬ್ರಾಯ ವಿ 1954-1968
2 ಶ್ರೀ ಜಯರಾಮ ಶೆಟ್ಟಿ 1958-1964
3 ಶ್ರೀ ಸುಳ್ಯಮ್ಮೆ ಸೋಮಪ್ಪ ಶೆಟ್ಟಿ 1968-1995
4 ಶ್ರೀ ಕೃಷ್ಣ ನಾಯ್ಕ್ ಟಿ 1960-1964
5 ಶ್ರೀ ಸರೋಜಿನಿ ಯಂ 1964-1965
6 ಶ್ರೀಮತಿ ಕಮಲ ವಿಠಲ್ 1966-1992
7 ಶ್ರೀ ವೆಂಕಟ ಕೃಷ್ಣ ತಂತ್ರಿ 1968-1985
8 ಶ್ರೀಮತಿ ರೇವತಿ ಕೆ 1969-1974
9 ಶ್ರೀ ಕುಟ್ಟಿ ರಯಾನ್  ಕೆ ಯಂ 1973-1974
10 ಶ್ರೀ ಕುಟ್ಟಿ ಅಲಿ 1974-2009
11 ಶ್ರೀ ವಿ ಕೇಶವ ಭಟ್ 1974-2000
12 ಶ್ರೀಮತಿ ಹರಿಣಾಕ್ಷಿ 2000-2005
13 ಶ್ರೀನಿವಾಸ್ ಕೆ 1995-2016
14 ಶ್ರೀಮತಿ ಕಸ್ತುರಿ ದೇವಿ 1985-2016
15 ಶ್ರೀಮತಿ ಚಂದ್ರಾವತಿ 1985-2019
16 ಶ್ರೀಮತಿ ಶಶಿಕಲಾ ಡಿ 1992-2022