NAMMA HEMMEYA BHARATHA ನಮ್ಮ ಹೆಮ್ಮೆಯ ಭಾರತ
ನಮ್ಮ ಹೆಮ್ಮೆಯ ಭಾರತ
ನಮ್ಮಯ ದೇಶವೆ ಭರತ ದೇಶ
ಬರೆಯುತಲಿಹೆನು ದೇಶದ ಕುರಿತು
ಕವನವ ನಾನು ಹೆಮ್ಮೆಯಲಿ
ಸಾವಿರ ಸಾವಿರ ವರುಷಗಳ ಇತಿಹಾಸವನು
ಹೊಂದಿಹ ನಮ್ಮಯ ಭಾರತವು
ಸರ್ವ ಧರ್ಮ ಸಮನ್ವಯವ
ಎತ್ತಿ ಹಿಡಿದಿಹ ದೇಶವಿದು
ದೇಶ ಭಕ್ತಿಯಾ ಭಾವನೆ ಬೆಳೆಸಿ
ದೇಶದ ಏಳಿಗೆ ಮಾಡೋಣ
ಇಂದಿನ ಮಕ್ಕಳೆ ಮುಂದಿನ ಜನತೆ
ಎನ್ನುವ ಮಾತನು ನೆನೆಯೋಣ
ವಿವೇಕ,ಗಾಂಧಿ,ಸುಭಾಸರಂತಹ
ದೇಶಪ್ರೇಮಿಗಳಾದರ್ಶವನು
ಪಾಲಿಸುತ ನಾವು ಬೆಳೆಬೆಳೆದು
ಭವ್ಯ ಭಾರತವ ಬೆಳೆಸೋಣ
ಮೇಘ ಶ್ರೀ,7ಸಿ
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത
|