എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ ರಾಜನ ಮದುವೆ

Schoolwiki സംരംഭത്തിൽ നിന്ന്
ರಾಜನ ಮದುವೆ

ಅದೊಂದು ದೊಡ್ಡ ಊರು. ಆ ಊರಿನ ಹೆಸರು ಅರಸನ ಕೋಟೆ. ಆ ಊರಿನ ಜನರಿಗೆ ಬ್ರಹ್ಮ ದೇವರ ಮೇಲೆ ಅಪಾರ ಪ್ರೀತಿ. ಆ ಊರಿನಲ್ಲಿ ಒಬ್ಬ ವಯಸ್ಸಾದ ಮುದುಕಿ ಇದ್ದಳು. ಆ ಮುದುಕಿಯನ್ನು ಕಂಡರೆ ಯಾರಿಗೂ ಆಗುತ್ತಿರಲಿಲ್ಲ. ರಾಜನಿಗೂ ಆ ಮುದುಕಿಯನ್ನು ಕಂಡರೆ ಆಗುತ್ತಿರಲಿಲ್ಲ. ಆ ಮುದುಕಿಗೆ ಹಟ ಜಾಸ್ತಿ.ರಾಜನು ಮುದುಕಿಗೆ ಯಾರು ದಿಕ್ಕಿಲ್ಲ ಎಂದು ಅವರ ಊರಿನಲ್ಲಿ ವಾಸಿಸಲು ಬಿಟ್ಟಿದ್ದಾನೆ. ಆ ರಾಜನಿಗೆ ತುಂಬಾ ವಯಸ್ಸಾಗಲಿಲ್ಲ. ಆ ರಾಜನಿಗೆ ಮದುವೆ ಆಗಲಿಲ್ಲ. ರಾಜನ ಮದುವೆಯ ಸುದ್ದಿ ಎಲ್ಲೆಲ್ಲೂ ಹಬ್ಬಿತು. ಅವನನ್ನು ಮದುವೆ ಯಾಗುವ ಹುಡುಗಿ ಅತ್ಯಂತ ಸುಂದರಿಯಾಗಿರಬೇಕು. ಆ ಮುದುಕಿಗೆ ರಾಜನ ಮೇಲೆ ಆಸೆ ಉಂಟಾಯಿತು. ಅವಳು ಬ್ರಹ್ಮ ದೇವರ ಕುರಿತು ತಪಸ್ಸು ಮಾಡಿದಳು.ಆ ಮುದುಕಿಗೆ ಬ್ರಹ್ಮದೇವರು ಒಂದು ವರವನ್ನು ನೀಡಿದರು. ಅದು ಏನೆಂದರೆ ಬೆಳಿಗ್ಗೆ ಯುವತಿಯಾಗಿರುತ್ತಾಳೆ, ರಾತ್ರಿ ಮುದುಕಿಯಾಗುತ್ತಾಳೆ.ರಾಜನು ಅವಳ ಸೌಂದರ್ಯವನ್ನು ಕಂಡು ಅವಳನ್ನೇ ಮದುವೆಯಾಗ ಬೇಕೆಂದು ಯೋಚಿಸುತ್ತಾನೆ. ಬ್ರಹ್ಮ ದೇವರ ಅನುಗ್ರಹದಿಂದ ಮದುವೆಯಾಗುತ್ತದೆ. ಅವರ ಮೊದಲ ರಾತ್ರಿಯಂದು ಅವಳ ನಿಜ ಸ್ವರೂಪ ತಿಳಿಯುತ್ತದೆ. ಅದರಿಂದ ಅವಳಿಗೆ ಗಲ್ಲು ಶಿಕ್ಷೆಯನ್ನು ನೀಡಿ ಮದುವೆಯ ಯೋಚನೆಯನ್ನು ಬಿಟ್ಟು ತನ್ನ ರಾಜ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.


DEEKSHITHA
9 A എസ്. എ.ടി.എച്ച്.എസ്. മഞ്ചേശ്വർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കഥ