G. L. P. S. Mulinja/പ്രവർത്തനങ്ങൾ

Schoolwiki സംരംഭത്തിൽ നിന്ന്
14:27, 23 ഫെബ്രുവരി 2022-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ)

ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ ಶಾಲೆಯಲ್ಲಿ ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting


ದಿನಾಂಕ 28-10-2021ರಂದು ಜಿ. ಎಲ್. ಪಿ. ಎಸ್ ಮುಳಿಂಜ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಯಾಗಿ ಚಿತ್ರಾವತಿ ಯಂ ಅಧಿಕಾರ ಸ್ವೀಕರಿಸಿದರು


ಸಂದಿಗ್ದ ಪರಿಸ್ಥಿತಿಯಲ್ಲಿ ಸಹಕರಿಸಿದ ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳಿಗೆ ನನ್ನ ನಮನಗಳು . ಮುಳಿಂಜ ಶಾಲೆಗೆ ನೂತನ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಗೊಂಡ ಎರಡನೇ ದಿನದಲ್ಲಿ ಶಾಲೆ ಆರಂಭ. ಶಾಲಾ ಪರಿಸರ ಶುಚಿಗೊಳಿಸುವುದು ತಲೆನೋವಾಗಿ ಪರಿಣಾಮಿಸಿದಾಗ.. ಧಿಡೀರ್ ಸಂಜೆ ಮೂರು ಗಂಟೆಯ ನಂತರ ಬಂದು ಸಹಕರಿಸಿದ ಇವರು Compulsory Social Service ನ ಭಾಗವಾಗಿ ಸೇವೆಸಲ್ಲಿಸಿದರು. ಹೃದಯಂತರಾಳಾದ ಧನ್ಯವಾದಗಳು.

ಸಂದಿಗ್ದ ಪರಿಸ್ಥಿತಿಯಲ್ಲಿ ಸಹಕರಿಸಿದ ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳಿಗೆ ನನ್ನ ನಮನಗಳು .

ಮಂಗಲ್ಪಾಡಿ ಪಂಚಾಯತ್ ನ white guard ತಂಡವು ಕೊರೊನಾ ಮುಂಜಾಗ್ರತಾ ಕ್ರಮದ ಭಾಗವಾಗಿ ಮುಳಿಂಜ ಶಾಲೆಯನ್ನು ಅಣುಮುಕ್ತಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.


YOUTUBE LINK:: https://youtu.be/m-35ZLODBFg

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಠೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪ್ಪಳ ಟೌನ್ ಸದಸ್ಯರಾದ ಶರೀಫ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಬಿ.ರ್.ಸಿ. ತರಬೇತುದಾರ ಜೋಯ್, ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಮೊದಲಾದವರು ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ ಅಬ್ದುಲ್ ಬಶೀರ್ ವಂದಿಸಿದರು.

YOUTUBE LINK::https://youtu.be/w1sr5r_31OY

ನವೆಂಬರ್ 14 ಶಿಶು ದಿನದ ಅಂಗವಾಗಿ ಮುಳಿಂಜ ಶಾಲೆಯಲ್ಲಿ ರಸ ಪ್ರಶ್ನೆ, ಚಿತ್ರ ರಚನೆ ಸ್ಪರ್ದೆ ಹಾಗೂ ನೆಹರು ಟೊಪ್ಪಿತಯಾರಿ ಕಾರ್ಯ ಗಾರ ನಡೆಲಾಯಿತು. ನಂತರ ಮಕ್ಕಳಿಗೆ ಬಾಲಸಭೆ ನದೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು

ರಹ್ಮತ್  ಟೀಚರ್ ರವರ  ನೇತೃತ್ವದಲ್ಲಿ ಜವಾಹರಲಾಲ್ ನೆಹರೂ ರವರ  ಟೊಪ್ಪಿ  ತಯಾರಿಸುವಿಕೆ

YOUTUBE LINK:: https://youtu.be/EFL7sa8YZkQ

ಮುಳಿಂಜ ಶಾಲೆಯಲ್ಲಿ “ನವಚೇತನಾ" ಕಾರ್ಯಕ್ರಮ::-ಕೊರೊನಾ ಕಾಲಘಟ್ಟದಿಂದಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಮೂಡಿರಬಹುದಾದ ಜಡತ್ವ, ಶಾರೀರಿಕ ಹಾಗೂ ಮಾನಸಿಕ ಬದಲಾವಣೆ, ಆಹಾರಾಭ್ಯಾಸ, ಅಶಿಸ್ತು ತೊಡೆದು ನವೋಲ್ಲಾಸದಿಂದ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ “ನವಚೇತನಾ” ಕಾರ್ಯಕ್ರಮವು ಇತ್ತೀಚೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ಫಲಪ್ರದವಾಗಿ ಸಂಪನ್ನ ಗೊಂಡಿತು. ಶಾಲಾ ಶಿಕ್ಷಕವೃಂದ ತರಗತಿ ನಡೆಸಿಕೊಟ್ಟರು.

YOUTUBE LINK  ::

https://www.youtube.com/watch?v=StoLs6Pfxr8&list=PLCrkCUTvTdgVPWcBM_u-cZHFSzNnk1r53&index=2

ಇಂದು ಡಿಸೆಂಬರ್ 3 ವಿಶ್ವ ವಿಕಲಾಂಗ ದಿನ. ಇದರ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ "ಮಗುವಿನೊಂದಿಗೆ ಒಂದು ದಿನ " ಈ ಕಾರ್ಯಕ್ರಮವು ನಮ್ಮ ಮುಳಿಂಜ ಶಾಲೆಯ ವಿಶೇಷ ಸಾಮರ್ಥ್ಯದ ಮಗು ಅಲಿಯಾ ನಾಸ್ ಳ ಮನೆಯಲ್ಲಿ ಜರಗಿತು.ಮಂಗಲ್ಪಾಡಿ ಪಂಚಾಯತು ಅಧ್ಯಕ್ಷೆ ಖದೀಜತ್ ರಿಸಾನ ವಿದ್ಯಾಭ್ಯಾಸ ಹಾಗೂ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಪನಾ ವಾರ್ಡ್ ಸದಸ್ಯ ಶರೀಫ್ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಹಿರಿಯ ಶಿಕ್ಷಕಿ ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಪ್ರೋಜೆಕ್ಟ್ ಕೋರ್ಡಿನೇಟರ್ ವಿಜಯ ಕುಮಾರ್, ವಿಶೇಷ ಮಕ್ಕಳ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಮುಂದುವರಿದ ಕಾರ್ಯಕ್ರಮ -- ಮಗುವಿನೊಂದಿಗೆ ಒಂದು ದಿನ........ನಮ್ಮೀ ಶಾಲೆಯಲ್ಲಿ ಕಲಿಯುತ್ತಿರುವ 'ವಿಕಲ ಚೇತನ ಮಕ್ಕಳ ' ಮನೆ ಸಂದರ್ಶನ ಗೈದು ಅವರನ್ನು ಅವರ ಕುಟುಂಬವನ್ನು ಮಾನಸಿಕವಾಗಿ ದೈಹಿಕವಾಗಿ ಸುಭದ್ರಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿದವು. ಆವರನ್ನು ಸಾಂತ್ವನ ನೀಡಿ ಬಲಿಷ್ಠರನ್ನಾಗಿ ಮಾಡುವಲ್ಲಿ ನಮ್ಮ ಶಾಲೆಯ ಒಂದು ಕಿಂಚಿತ್ತು ಸೇವೆ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ಬೇಟಿ ನೀಡಿ ವಸ್ಸು ರೂಪದಲ್ಲೋ ನಗದು ರೂಪದಲ್ಲೋ ಕೈಲಾದ ಸಹಾಯ ನೀಡುವುದೆಂದು ತೀರ್ಮಾನಿಸಿದೆವು. ಆ ಪ್ರಯುಕ್ತ ನಮ್ಮೀ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಳು ಮಕ್ಕಳಲ್ಲಿ ಐದು ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು.


ನಮ್ಮ ಸರಕಾರಿ ಕಿರಿಯಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಯ ನವೀಕೃತ ಯೂಟ್ಯೂಬ್ ಚಾನಲ್ ಅನ್ನು ಇತ್ತೀಚೆಗೆ ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ವಾರ್ಡ್ ಸದಸ್ಯ....ಶರೀಫ್. ಟಿ. ಯಂ ಉದ್ಘಾಟಿಸಿದರು .ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ನಾರಾಯಣ ದೇಲಂಪಾಡಿ, ಬಿ ರ್ ಸಿ ಯ ಬಿ. ಪಿ. ಸಿ. ವಿಜಯಕುಮಾರ್ ಪಾವಳ, ಶಿಕ್ಷಕ- ರಕ್ಷಕ ಸಂಘ ದ ಅಧ್ಯಕ್ಷರಾದ ಇಬ್ರಾಹಿಂ, ದಿನೇಶ್ ಮುಳಿಂಜ ಉಪಸ್ಥಿತರಿದ್ದರು.ನಮ್ಮದೊಂದು ಸಣ್ಣ ಪ್ರಯತ್ನ,, ನಿಮ್ಮ ಸಲಹೆ ಸಹಕಾರ ಸದಾ ನಮಗಿರಲಿ.

YOUTUBE LINK:: https://youtu.be/LS5ZCTKpNJk



ಇತ್ತೀಚೆಗೆ ನಡೆದ ಶಾಲಾ ತರಗತಿ ಪಿ,ಟಿ. ಎ. ಸಬೆಯಲ್ಲಿ " ಹೆಣ್ಣು ಮಕ್ಕಳ ಲೈಂಗಿಕ ಶೋಷಣೆ " ಬಗೆಗಿನ ಕೋಮಲ್ ವಿಡಿಯೋ ಪ್ರದರ್ಶಿಸಲಾಯಿತು.


ತರಗತಿ ಗ್ರಂಥಾಲಯವನ್ನು ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉದ್ಘಾಟಿಸಿದ ಸಂದರ್ಭ.....


ನಮ್ಮ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ನ ಗ್ರಾಮ ಸದಸ್ಯರಾದ ಶರೀಪ್ ಟಿ.ಮ್ ಧ್ವಜಾರೋಹಣ ಗೈದರು. ಶಾಲಾ ಶಿಕ್ಷಕಿ ರೆಹಮತ್ ಗಣರಾಜ್ಯ ದಿನದ ಮಹತ್ವ ತಿಳಿಸಿದರು.ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ ಹಿರಿಯ ಶಿಕ್ಷಕಿ ಪುಷ್ಪ ಲತ ಸೋಂಕಲ್ಲು ವಂದಿಸಿದರು.


ಬಾಲಸಭೆ  :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ  ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ  ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ   ೨.ಒಗಟು ಸ್ಪರ್ಧೆ  ೩. ವಿನೋದ ಗಣಿತ  ೪. ಹಲೋ ಇಂಗ್ಲೀಷ್  ೫. ಅರೆಬಿಕ್ ಕಲಿಯೋಣ ವಾರದ ಮೊದಲ  ದಿನವಾದ  ಸೋಮವಾರ  ಚಟುವಟಿಕೆ ನಡೆಸಿ  ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .

  • MONDAY  ರಸಪ್ರಶ್ನೆ  ,
  • TUESDAY  ಒಗಟು ಸ್ಪರ್ಧೆ
  • WEDNESDAY   ವಿನೋದ ಗಣಿತ
  • THURSDAY  ಹಲೋ ಇಂಗ್ಲೀಷ್
  • FRIDAY    ಅರೆಬಿಕ್ ಕಲಿಯೋಣ

ಹೊಸ  ದಾಖಲಾತಿಗೆ  ಬೇಕಾಗಿ  ಮುಳಿಂಜ  ಶಾಲೆಯ  ಅಧ್ಯಾಪಕರು  ಮನೆ  ಮನೆಗೆ  ಭೇಟಿ

ICT ತರಗತಿ

ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಕಂಪ್ಯೂಟರ್ ಕಲಿಕೆ ಅಗತ್ಯವು ಅನಿವಾರ್ಯವೂ ಹೌದು,ಈ ಕಂಪ್ಯೂಟರ್ ನಲ್ಲಿ ಸಾಕ್ಷರರನ್ನಾಗಿ ಮಾಡಿಸಲು ಪಾಠ ಪುಸ್ತಕದ ಹೊರತಾಗಿ ಬಿಡುವಿನ ವೇಳೆಯಲ್ಲಿ ವಿಶೇಷ ತರಗತಿನಡೆಸುವುದು, ಅದಕ್ಕೆ ಸಮಯ ನಿಗದಿಪಡಿಸಲಾಗಿದೆ. ಸಣ್ಣ ಪುಟ್ಟ ಆಕರ್ಷಕ ಚಟುವಟಿಕೆಗಳನ್ನು ನೀಡುವುದು. ಸ್ಪರ್ಧೆ ನಡೆಸಿ ಬಹುಮಾನ ನೀಡುವುದು.

ಕಂಪ್ಯೂಟರ್ ತರಗತಿ

Monday 2 std

Tuesday 3 std

Wednesday 4 std

Thursday 3 std

Friday 1 std

ಅತಿಜೀವನ ಕಾರ್ಯಕ್ರಮ

ಈಗಾಗಲೇ ನಮ್ಮೀ ಶಾಲೆಯ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಮಾನಸಿಕಮಾಗಿ ಹಾಗೂ ದೈಹಿಕವಾಗಿ ಸುಭದ್ರಗೊಳಿಸುವ ಈ ಅತಿಜೀವನ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅವುಗಳು

1 ಮನೆ ಸಂದರ್ಶನ ನಡೆಸುವುದು

2 ಕೈಲಾದ ಸಹಾಯ ನೀಡುವುದು

3 ಸಾಂತ್ವನ ನೀಡುವುದು.

4 ನಗದು ರೂಪದಲ್ಲೋ ವಸ್ತು ರೂಪದಲ್ಲೋ ಸಹಾಯ ನೀಡುವುದು

5 ಅಗತ್ಯ ಬಿದ್ದಲ್ಲಿ ಸಂಘ ಸಂಸ್ಶೆಗಳ ಸಹಾಯ ಕೋರುವುದು

6 ಅಧಿಕಾರಿಗಳ ಗಮನಕ್ಕೆ ತರುವುದು

7 ಊರಿನವರ ಸಾಮೀಪ್ಯವನ್ನು ಭದ್ರಗೊಳಿಸುವುದು

ಹೀಗೆ ಬಡ ಮಕ್ಕಳ ಮತ್ತು ಮಾನಸಿಕವಾಗಿ ನೊಂದವರಿಗೆ ಮರಳಿ ಜೀವನಕ್ಕೆ ನವೋಲ್ಲಾಸದಿಂದ ಧುಮುಕವಂತೆ ಪ್ರೇರೇಪಿಸುವುದು,ಅನಿರೀಕ್ಷಿತವಾಗಿ ಅಪಘಾತಕ್ಕೊಳಗಾದವರಿಗೆ ಹಾಗೂ ಆಘಾತಕ್ಕೊಳಗಾದವರಿಗೆ ಎಲ್ಲ ವಿಧದ ಸಹಕಾರ ನೀಡುವುದು

ಇದರ ಅಂಗವಾಗಿ ನಮ್ಮೀ ಶಾಲೆಯ ಭೌಶಿಕ್ ಮನೆಯವರಿಗೆ ನಗದು ಹಣ ನೀಡಲಾಯಿತು

ಅಲಿಯಾಸ್ ನಾಝ್ ಅವಳಿಗೂ ಹಣ ನೀಡಲಾಯಿತು

ನಾಲ್ಕು ವಿಕಲಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು.

ಪುಟಾಣಿಗೊಂದು  ಪುಟ್ಟ  ಕಥೆ

ಪುಟಾಣಿಗೊಂದು  ಪುಟ್ಟ  ಕಥೆ ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ  ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ  ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು  ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ  ಸಮಾಜದ  ಹಲವಾರು ವಿಷಯಗಳು ತಿಳಿಯುತ್ತವೆ.  ಆದುದರಿಂದ ನಮ್ಮ  ಶಾಲೆಯ  ಎಲ್ಲಾ  ಅಧ್ಯಾಪಕ ರು  ಕಥೆ  ಹೇಳಿ  ಸಹಕರಿಸಿದ್ದಾರ

ಕಥೆ :ಬಸ್ಮಾಸುರ ವಧೆ

ಕಥೆ  ಹೇಳುವವರು : ಪುಷ್ಪಲತಾ ಸೋಂಕಾಲ್ YOUTUBE LINK : https://youtu.be/cjBPnIXK60U


ಕಥೆ :ನೀ  ನನಗಿದ್ದರೆ  ನಾ  ನಿನಗೆ

ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ

YOUTUBE LINK :https://youtu.be/Kz5tT6pSeEg


ಕಥೆ :കോഴിയുടെ കഥ

ಕಥೆ  ಹೇಳುವವರು :റഹ്മത്

YOUTUBE LINK:https://youtu.be/EshSSdgf4K0


കുട്ടി കവിത

കവിതാലാപനം   :  സുഹേഷ്

YOUTUBE LINK : https://youtu.be/2rHEqZB_CXg

ಕಥೆ : ಬಕಾಸುರ  ವಧೆ

ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ

YOUTUBE LINK :: https://youtu.be/FnL9cO0NjQA

ಮಕ್ಕಳ ವಿಡಿಯೋ

ಒಂದನೇ ತರಗತಿಯ ಮಾಲಾ ಹಾಡಿದ ಮನೆಯ ಹಾಡು"

https://www.youtube.com/watch?v=wNL3o6ipsnk&list=PLCrkCUTvTdgWmeYzFNMal27EamIcoNSEp

Number counting by 2 std student

https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2


Malayalam Action Song

https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 ----

ಮುಳಿಂಜ ಶಾಲೆಯಲ್ಲಿ  ವಿಶ್ವ  ಮಾತೃ  ಭಾಷಾ  ದಿನದ ಅಂಗವಾಗಿ  ಮಕ್ಕಳಿಗೆ  ವಿಶ್ವ  ಮಾತೃ  ಭಾಷಾ ಪ್ರತಿಜ್ಞೆ  ಹೇಳಿಕೊಡಲಾಯಿತು

ಶಾಲಾ ಪ್ರಾರಂಭದ ಮೊದಲ ಅಸೆಂಬ್ಲಿಯ ನ್ನು  ಮುಖ್ಯ ಶಿಕ್ಷಕಿ  ಚಿತ್ರಾವತಿ ರವರ  ನೇತೃತ್ವದಲ್ಲಿ  ನಡೆಸಲಾಯಿತು .


"https://schoolwiki.in/index.php?title=G._L._P._S._Mulinja/പ്രവർത്തനങ്ങൾ&oldid=1691153" എന്ന താളിൽനിന്ന് ശേഖരിച്ചത്