സ്വാമീജീസ് എച്ച്. എസ്. എസ്. എട്നീർ/അക്ഷരവൃക്ഷം/ Mathrudevobhava

Schoolwiki സംരംഭത്തിൽ നിന്ന്
13:02, 7 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Kannankollam (സംവാദം | സംഭാവനകൾ) (added Category:അക്ഷരവൃക്ഷം 2020 കന്നഡ രചനകൾ using HotCat)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Mathrudevobhava
 


ಅಮ್ಮ ನಿನ್ನ ಸ್ನೇಹಕೆ ಈ ಕಂದನ ನಮನ
ನಿನ್ನ ಪ್ರೀತಿಗೆ ಸೋತಿದೆ ಈ ಕಂದನ ಮನ
ಪ್ರೀತಿಗೆ ಮಾತೃದೇವೋಭವ,
ಒಲುಮೆಗೆ ಮಾತೃದೇವೋಭವ,
ಮಮತೆಗೆ ಮಾತೃದೇವೋಭವ,
ಅಮ್ಮಾ ನನ್ನ ಪ್ರೀತಿಯಾ, ಒಲುಮೆಯಾ, ಮಮತೆಯಾ ಅಮ್ಮಾ

ನಾ ಕಾಣೋ ಪ್ರತ್ಯಕ್ಷ ಆದವಳು ಅಮ್ಮ
ಕಂದನನ್ನು ಹರಸೋ ಹಸು ಆದವಳು ಅಮ್ಮ
ಪ್ರೀತಿಗೆ ಮಾತೃದೇವೋಭವ,
ಒಲುಮೆಗೆ ಮಾತೃದೇವೋಭವ,
ಮಮತೆಗೆ ಮಾತೃದೇವೋಭವ,
ಅಮ್ಮಾ ನನ್ನ ಪ್ರೀತಿಯಾ, ಒಲುಮೆಯಾ, ಮಮತೆಯಾ ಅಮ್ಮಾ

ತಾಯಿಯೇ ಮೊದಲ ಗುರು ಆಗುವಳು ಕಂದಂಗೆ
ತಾಯಿ ಸ್ನೇಹಕ್ಕಿಂತ ಮಿಗಿಲು ಬೇರೇನಿಲ್ಲ ನನಗೆ
ಪ್ರೀತಿಗೆ ಮಾತೃದೇವೋಭವ,
ಒಲುಮೆಗೆ ಮಾತೃದೇವೋಭವ,
ಮಮತೆಗೆ ಮಾತೃದೇವೋಭವ,
ಅಮ್ಮಾ ನನ್ನ ಪ್ರೀತಿಯಾ, ಒಲುಮೆಯಾ, ಮಮತೆಯಾ ಅಮ್ಮಾ
 
ನವಮಾಸದಿ ಹೆತ್ತು ಹೊತ್ತು ಸಾಕಿ ಸಲಹಿದವಳಮ್ಮಾ
ಜೋಜೋ ಎಂದು ಲಾಲಿ ಹಾಡಿ ಮಲಗಿಸಿದವ್ಳಮ್ಮಾ
ಪ್ರೀತಿಗೆ ಮಾತೃದೇವೋಭವ,
ಒಲುಮೆಗೆ ಮಾತೃದೇವೋಭವ,
ಮಮತೆಗೆ ಮಾತೃದೇವೋಭವ,
ಅಮ್ಮಾ ನನ್ನ ಪ್ರೀತಿಯಾ, ಒಲುಮೆಯಾ, ಮಮತೆಯಾ ಅಮ್ಮಾ

ಕರುಣೆಯಿಂದ ಕಂದನ ಬಾಯಿಗೆ ಕೊಡುತಾ ಕೈತುತ್ತು
ಮಮತೆಯಿಂದ ಕಂದನ ಕೆನ್ನೆಗೆ ಕೊಡುತಾ ಸಿಹಿಮುತ್ತು
ಪ್ರೀತಿಗೆ ಮಾತೃದೇವೋಭವ,
ಒಲುಮೆಗೆ ಮಾತೃದೇವೋಭವ,
ಮಮತೆಗೆ ಮಾತೃದೇವೋಭವ,
ಅಮ್ಮಾ ನನ್ನ ಪ್ರೀತಿಯಾ, ಒಲುಮೆಯಾ, ಮಮತೆಯಾ ಅಮ್ಮಾ

ಬೀಸೋ ಗಾಳಿಯಂತೆ ತಂಪಾದ ಮನದವ್ಳು ನನ್ನಮ್ಮ
ಪುಣ್ಯಕೋಟಿಯಾ ಗುಣವನು ಹೊಂದಿಹಳು ನನ್ನಮ್ಮ
ಪ್ರೀತಿಗೆ ಮಾತೃದೇವೋಭವ,
ಒಲುಮೆಗೆ ಮಾತೃದೇವೋಭವ,
ಮಮತೆಗೆ ಮಾತೃದೇವೋಭವ,
ಅಮ್ಮಾ ನನ್ನ ಪ್ರೀತಿಯಾ, ಒಲುಮೆಯಾ, ಮಮತೆಯಾ ಅಮ್ಮಾ

$
Pooja K
9 B സ്വാമീജീസ് എച്ച്. എസ്. എസ്. എട്നീർ
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത