(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
mothers Achievement
ಅಮ್ಮನ ನೋಡಿದ ಆಕ್ಷಣ
ಕಣ್ಣ ತುಂಬಿತು
ಅಮ್ಮನ ಪಾಠವ ಕೇಳಿದಾಕ್ಷಣ
ಉಲ್ಲಾಸವಾಯಿತು
ಅಮ್ಮನಿಗಿಂತ ಮಿಗಿಲಾದ
ಗುರುಯಾರು?
ಅಮ್ಮನ ಪಾಠವಕೇಳದ
ಜನರಾರು?
ಅಮ್ಮನ ನೋಡಿದ ಸಮಯವು
ದುಃಖವು ಮರೆಯುವುದು
ಅಮ್ಮ ನನ್ನ ಜೀವವು
ಅವಳೇ ನನಗೆ ದೀಪವು
ನನ್ನ ಆಸೆಯ ನೆರವೇರಿಸಿದಳು
ತನ್ನ ಆಸೆಯ ಬದಗಿರಿಸಿದಳು
ಎಲ್ಲದಕ್ಕೂ ಅವಳ ಪ್ರೀತಿ
ಏನಿದ್ದರು ಅವಳ ಆಸರೆ
ಅಮ್ಮನಿಗಾದ ನೋವುಗಳೆಷ್ಟು
ಅವಳಿಗಾದ ಸಂಕಟವೆಷ್ಟು
ಎಣಿಸಲಾಗದು ಆದರೂ
ಎಲ್ಲವ ಸಹಿಸಿದಳು
ತಿಳಿಯದೆ ಮಾಡಿದ ತಪ್ಪುಗಳನ್ನು
ತಿದ್ದಿ ಬೆಳಸಿದಳು
ಅವಳು ಶಿಸ್ತು ಕಲಿಸಿದಳು
ಜೀವನಕ್ಕೆ ಮಾದರಿಯಾಗಿಹಳು