(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
CORONA KAALA(. ಕೊರೋನ ಕಾಲ)
ಕೊರೋನ ಕಾಲ
ಕುಳಿತಿರುವೆ ನಾ ಮನೆಯ ಒಳಗೆ
ದಿನ ಬೆಳಗಾಗಿ ಕತ್ತಲಾಗುತಿದೆ
ವಾರ ಯಾವುದೆಂದು ಮೊಬೈಲ್ ನೋಡಿ
ತಿಳಿಯುತಿರುವೆ
ಪ್ರತಿದಿನ ಭಾನುವಾರವೆಂದೇ
ಭಾಸವಾಗುತಿದೆ
ಏನೋ ಒಂಟಿ ಜೀವನದಂತೆ
ಯಾರು ಯಾರಿಗೆ ತಿಳಿಯದಾದೆ
ಮನುಜನ ಮೋಜಿಗೆ ಮೃಗಗಳು ಗೂಡು
ಸೇರಿದವು
ಮನುಷ್ಯನ ತಪ್ಪಿಗೆ ಮನೆಯೇ
ಗೂಡಾಯಿತು
ಈಗ ತಿಳಿಯಿತು ' ಸ್ವಾತಂತ್ರ್ಯ 'ಎಂದರೇನೆಂದು
ಈಗ ತಿಳಿಯಿತು 'ಬಂಧನ 'ಎಂದರೇನೆಂದು