ದುಷ್ಟ ಸಂಹಾರ ಒಂಟಿಯಾಗಿ ನಡೆದಾಡಲು ಮನದೊಳಗೇ ಅಂಜಿಕೆ ಕಾಯುತಿರುವ ನಾಯಿಯೇ ಕಡಿಯುವೆಯಾ ಜೀವಕೆ ನಿನ್ನ ವಕ್ರ ದೃಷ್ಟಿಯಿಂದ ಕಬಳಿಸುವೆಯಾ ನನ್ನನೇ ಮೋಸದಿಂದ ಹೆಣೆದ ಬಲೆಗೆ ಬೇಳೆ ನಾನು ಸುಮ್ಮನೆ ನಾ ಚಿಕ್ಕ ಬೆಕ್ಕು ಮರಿಯೆಂದು ಸೊಕ್ಕು ಇದೆಯೇ ನಿನ್ನಲ್ಲಿ ನಿನ್ನ ಜಾಲ ತಪ್ಪಿಸುವ ತಂತ್ರ ಬಲವು ನನ್ನಲಿ ನಿನ್ನ ದಾಹ ತೀರಿಸಲು ನಾನೇ ಏಕೆ ನಿನಗೆ ಗುರಿ ಕಾಯುವುದೇ ನಿನ್ನ ಕೆಲಸ ಮರೆಯದಿರು ಖಚಿತ ಗುರಿ ಶಿಷ್ಟ ನಾಯಿ ಬುದ್ದಿ ನಿನ್ನದಲ್ಲ ದುಷ್ಟನೆಂದರೂ ತಪ್ಪೇನಿಲ್ಲ ನಿನ್ನಂತಹ ಕ್ರೂರಿಯಿಂದಾ ಭಯ ತುಂಬಿದೆ ಜಗವೆಲ್ಲ ಸಜ್ಜನರಿರುವ ಈ ನಾಡಲಿ ಯಾಕೆ ನಿನ್ನ ಕಾಕ ದೃಷ್ಠಿ ಮರುಕವಿಲ್ಲಾದ ನಿನ್ನಿಂದ ಕೊಳಕಾಗಿದೆ ಈ ಸೃಷ್ಟಿ ಸದೆ ಬಡಿಯಲು ನಿನ್ನ ಸೊಕ್ಕು ತೊಟ್ಟಿರುವೆ ನಾ ಪಣ ದುಷ್ಟ ಜನರ ಸಂಹಾರಕೆ ಪ್ರಾರ್ಥಿಸುವೆ ಪ್ರತಿ ಕ್ಷಣ ಪ್ರಿಯಾ ಸಾಯ
സാങ്കേതിക പരിശോധന - Vijayanrajapuram തീയ്യതി: 01/ 05/ 2020 >> രചനാവിഭാഗം - കവിത