എസ് .ഡി. പി. എച്ച്. എസ്. ധർമ്മത്തടുക്ക/വിദ്യാരംഗം‌/2023-24

2022-23 വരെ2023-242024-25


ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆ:

023-24ನೇ ಶೈಕ್ಷಣಿಕ ವರ್ಷದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆಯು ಜೂನ್23ನೇ ತಾರೀಕಿನಂದು  ಶಾಲಾ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮವನ್ನು ಶಾಲಾ ಪ್ರಬಂಧಕರಾದ ಶ್ರೀ ಶಂಕರ ನಾರಾಯಣ ಭಟ್ ಸರ್ ದೀಪ ಬೆಳಗಿಸಿ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಸರ್ ಅಧ್ಯಕ್ಷತೆವಹಿಸಿದ್ದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಕುಮಾರಿ ಪಲ್ಲವಿ 10ಎ ಮತ್ತು ಜತೆ ಕಾರ್ಯದರ್ಶಿಯಾಗಿ ಲಹರಿ10ಎ ಆಯ್ಕೆಯಾದರು.

ಕವನ ಸ್ಪರ್ಧೆ

28/7/23ರಂದು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಕವನ ಸ್ಪರ್ಧೆ ಯೊಂದನ್ನು ನಡೆಸಲಾಯಿತು. 10ಎ ತರಗತಿಯ ಪಲ್ಲವಿ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಳು.

ಜನಪದ ಗೀತೆ ಸ್ಪರ್ಧೆ

ನಪದ ಹಾಡು ಎಂದರೆ ಹಳ್ಳಿಯ ಜನರ ಸಂಗೀತ .ನಿತ್ಯ ಕೆಲಸಗಳನ್ನು ಮಾಡುವಾಗ, ಬಿಡುವಿನ ಸಂದರ್ಭಗಳಲ್ಲಿ ತಮ್ಮದೇ ಪjದಗಳಲ್ಲಿ ಹಾಡುಗಳನ್ನು ಕಟ್ಟಿ ನಮ್ಮ ಹಿರಿಯರು ಹಾಡುತಿದ್ದರು.ನಮ್ಮ ಸಂಸ್ಕೃತಿಯ ಒಂದು ಭಾಗವಾದ ಜನಪದಗೀತೆಗಳು ಜೀವನ ಮೌಲ್ಯಗಳನ್ನು ಕೂಡಾ ತಿಳಿಸುತ್ತದೆ.ಜನಪದ ಹಾಡುಗಳ ಪರಿಚಯ ಮೂಡಿಸುವ ಉದ್ದೇಶದಿಂದ 28/7/23 ರಂದು ಜನಪದ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಮರಿಯಮ್ಮತ್ ಜುಮಾನ ಪ್ರಥಮ ಸ್ಥಾನವನ್ನು, ಜೆನಿಫರ್ ದ್ವಿತೀಯ ಸ್ಥಾನವನ್ನು ಗಳಿಸಿದರು.


ಪ್ರಬಂಧ ರಚನೆಸ್ಪರ್ಧೆ

ಪ್ರಬಂಧ ರಚನೆ ಪ್ರಬಂಧ ರಚನೆಯು ಲೇಖಕನೊಳಗಿರುವ ವಿಷಯ ಸಂಗ್ರಹವನ್ನು ಪ್ರಸ್ತುತ ಪಡಿಸುವ ಬರವಣಿಗೆಯ ಒಂದು ತುಣುಕು. ಮಕ್ಕಳಲ್ಲಿ ವಿಷಯ ಜ್ಞಾನವನ್ನು, ಭಾಷಾ ಪ್ರೌಢಿಮೆಯನ್ನು, ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.ಈ ಸದುದ್ದೇಶದಿಂದ12/7/23ರಂದು ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಯಿತು.43ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು .10ಸಿ ತರಗತಿಯ ಲಿಖಿತ್ ಕೃಷ್ಣ ಪ್ರಥಮ ಸ್ಥಾನವನ್ನು 10ಡಿ ತರಗತಿಯ ರುಚಿತ್  ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಚಿತ್ರ ರಚನೆ ಸ್ಪರ್ಧೆ

ಚಿತ್ರ ರಚನೆಯು ಒಬ್ಬ ಕಲಾವಿದನ ಸೃಜನಶೀಲತೆಯನ್ನು ವ್ಯಕ್ತಪಡಿಸಲು, ಕಲಾ ನೈಪುಣ್ಯವನ್ನು ಬೆಳೆಸಲು ಸಹಕಾರಿಯಾಗಿದೆ, ವಿದ್ಯಾರ್ಥಿಯ ಕಲ್ಪನೆಯು ಕ್ರಿಯಾತ್ಮಕವಾಗಿ ಪ್ರಕಟವಾಗಿ ಸುಂದರ ಚಿತ್ರದ ಮೂಲಕ ಮೂಡಿಬರುತ್ತದೆ.

ವಿಶ್ವ ಆನೆದಿನ

ವಿಶ್ವ ಆನೆದಿನ 12/8/23ವಿಶ್ವ ಆನೆದಿನ ಇದರ ಪ್ರಯುಕ್ತ ಚಿತ್ರ ರಚನೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.10ಇ ತರತಿಯ ಸಿಂಚನಾ ಪ್ರಥಮ ಸ್ಥಾನವನ್ನು ಮತ್ತುಪ್ರಣಯ್ ಪದ್ಮನಾಭ  ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.