എ യു പി എസ് കുരുടപ്പദവ്(ಎ.ಯು.ಪಿ.ಎಸ್ ಕುರುಡಪದವು)
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് A U P SCHOOL KURUDAPADAVU . 1923 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ KURUDAPADAVU എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്.
എ യു പി എസ് കുരുടപ്പദവ്(ಎ.ಯು.ಪಿ.ಎಸ್ ಕುರುಡಪದವು) | |
---|---|
വിലാസം | |
KURUDAPADAVU KURUDAPADAVU പി.ഒ. , 671322 , കാസർഗോഡ് ജില്ല | |
സ്ഥാപിതം | 1 - 6 - 1923 |
വിവരങ്ങൾ | |
ഇമെയിൽ | aupsk11258@gmail.com |
കോഡുകൾ | |
സ്കൂൾ കോഡ് | 11258 (സമേതം) |
യുഡൈസ് കോഡ് | 32010100413 |
വിക്കിഡാറ്റ | Q64398884 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | മഞ്ചേശ്വരം |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം Manjeswar |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | പൈവളികെ PAIVALIKE പഞ്ചായത്ത് (Panchayath) |
വാർഡ് | 1 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | എയ്ഡഡ് |
സ്കൂൾ വിഭാഗം | പൊതുവിദ്യാലയം GENERAL SCHOOL |
പഠന വിഭാഗങ്ങൾ | എൽ.പി യു.പി |
സ്കൂൾ തലം | 1 മുതൽ 7 വരെ 1 to 7 |
മാദ്ധ്യമം | കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 71 |
പെൺകുട്ടികൾ | 73 |
ആകെ വിദ്യാർത്ഥികൾ | 144 |
അദ്ധ്യാപകർ | 11 |
സ്കൂൾ നേതൃത്വം | |
പ്രധാന അദ്ധ്യാപിക | VASANTHA KUMARY S |
പി.ടി.എ. പ്രസിഡണ്ട് | GOPANNA M |
എം.പി.ടി.എ. പ്രസിഡണ്ട് | VISHALAKSHI |
അവസാനം തിരുത്തിയത് | |
31-01-2022 | Ajamalne |
ചരിത്രം (ಇತಿಹಾಸ)
ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದ್ದ ಗ್ರಾಮೀಣ ಪ್ರದೇಶವಾದ ಕುರುಡಪದವುಯೆಂಬ ಸ್ಥಳವು ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಲ್ಲಿರುವ ಒಂದು ಪುಟ್ಟ ಸ್ಥಳ. ಯಾವುದೇ ಪ್ರಾಥಮಿಕ ಸೌಲಭ್ಯಗಳು ಇಲ್ಲದೆ ಇರುವ ಈ ಸ್ಥಳದಲ್ಲಿ ಸಾಮಾನ್ಯವಾಗಿ ಅಡಿಕೆ, ತೆಂಗು, ಭತ್ತದ ಕೃಷಿಯೇ ಮೊದಲಾದ ಕೃಷಿ ಚಟುವಟಿಕೆಗಳನ್ನು ನಡೆಸಿ ಜನರು ಜೀವನ ನಡೆಸುತ್ತಿದ್ದರು. ಸರಿಸುಮಾರು 100 ವರ್ಷಗಳ ಕಾಲ ಹಿಂದೆ ಈ ಪ್ರದೇಶದ ಜನರಿಗೆ ಶಾಲಾ ಶಿಕ್ಷಣವೆಂಬುದು ಹಗಲು ಕನಸಾಗಿತ್ತು. ಬೆಟ್ಟ, ಗುಡ್ಡ ,ಹೊಳೆ ,ಹಳ್ಳಗಳನ್ನು ದಾಟಿ ದೂರದ ಮಂಜೇಶ್ವರವೋ, ಬಂಟ್ವಾಳವೋ, ನೀಲೇಶ್ವರವೋ, ಮಂಗಳೂರನ್ನೋ, ಸೇರಿ ಶಿಕ್ಷಣ ಪಡೆಯುವುದು ಅಸಾಧ್ಯದ ಮಾತಾಗಿತ್ತು.ಆದರೆ ಇಲ್ಲಿನವರಲ್ಲಿ ಶಿಕ್ಷಣ ಪಡೆಯುವುದರಲ್ಲಿ ತುಡಿತ ಇತ್ತು.
ಇಂತಹ ವಿಷಮ ಪರಿಸ್ಥಿತಿಯ ಊರಿನ ಗೌರವಾನ್ವಿತ ಕಾಡೂರು ಮನೆಯ ಹಿರಿಯರಾದ ಕಾಡೂರು ಶಂಭು ಭಟ್, ಅವರು ತಮ್ಮವರೆನ್ನೆಲ್ಲಾ ಸೇರಿಸಿಕೊಂಡು ಊರಿನಲ್ಲಿ ಶಾಲೆಯನ್ನು ಪ್ರಾರಂಭಿಸುವ ಕುರಿತು ಮಾತುಕತೆಯನ್ನು ನಡೆಸಿದರು. ತಮ್ಮ ಸ್ವಂತ ಹೆಸರಿಗೆ ಸರಕಾರದಿಂದ ಲಭಿಸಿದ 89 ಸೆಂಟ್ಸ್ ಪಟ್ಟಾ ಸ್ಥಳವನ್ನು ಶಾಲೆಗಾಗಿ ಅವರು ಮೀಸಲಿಟ್ಟು 1920ರ ಸುಮಾರಿಗೆ ಶೆಡ್ ಕಟ್ಟಿ ಕೇವಲ 4ಮಕ್ಕಳೊಂದಿಗೆ ಶಾಲೆ ಪ್ರಾರಂಭಿಸಿದರು. ಆದರೆ ಸರಕಾರದ ಅಧಿಸೂಚನೆಯಂತೆ ಶಾಲೆಯು 12-11-1923 ರಂದು ಒಂದು ಮತ್ತು ಎರಡನೇ ತರಗತಿಗಳೊಂದಿಗೆ ಪ್ರಾರಂಭಿಸಲ್ಪಟ್ಟಿತು. ಇದರ ಅಧ್ಯಾಪಕರಾಗಿ ಸ್ವತ: ಕಾಡೂರು ಶಂಭು ಭಟ್ ರವರೆ ಇದ್ದರು. ಅವರು ಊರಿನ ಗುರಿಕಾರರೂ, ಜನಮನ್ನಣೆಯನ್ನು ಪಡೆದ ವ್ಯಕ್ತಿಯಾಗಿದ್ದು, ಊರಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿದ್ದರು. ಹೀಗೆ ಮುಂದುವರಿದ ಶಾಲೆಯು ಕುಂಟುತ್ತಾ ಸಾಗಿ 1935 ರಲ್ಲಿ ಮೂರು ಮತ್ತು ನಾಲ್ಕನೇ ತರಗತಿಯನ್ನು ಹೊಂದಿತು. 1938 ರಲ್ಲಿ ಐದನೇ ತರಗತಿಯೂ ಪ್ರಾರಂಭವಾಗಿ ಪೂರ್ಣಪ್ರಮಾಣದ LP ಶಾಲೆಯಾಗಿ ಅಂಗೀಕೃತ ವಾಯಿತು. ಆಗ ಅಧ್ಯಾಪಕರಾಗಿ ಕಾಡೂರು ಶಂಭು ಭಟ್, ಅವರ ಮಗ ಕಾಡೂರು ಪಿ.ಕೆ. ಸುಬ್ರಾಯ ಭಟ್ , ಪಾರೆಕೋಡಿ ಸುಬ್ಬಣ್ಣ ಭಟ್ ಮೊದಲಾದವರಿದ್ದರು. ಕಾಡೂರು ಶಂಭು ಭಟ್ ರವರ ನಿವೃತ್ತಿಯ ನಂತರ ಪಿ.ಕೆ. ಸುಬ್ರಾಯ ಭಟ್ ಶಾಲಾ ಮುಖ್ಯೋಪಾಧ್ಯಾಯರಾದರು. 1960-61 ನೇ ಇಸವಿಯಿಂದ ಶಾಲೆಯು ಪೂರ್ಣಪ್ರಮಾಣದ ಯು . ಪಿ . ಶಾಲೆAiÀiÁV ಮಾರ್ಪಟ್ಟು 1967 ರಲ್ಲಿ ಇದು ಸರಕಾರದಿಂದ ಅಂಗೀಕೃತವಾಯಿತು. ಈ ನಡುವೆ ಶಾಲಾ ಸ್ಥಾಪಕರಾಗಿದ್ದ ಕಾಡೂರು ಶಂಭು ಭಟ್ ರು 1956 ರಲ್ಲಿ ನಿಧನ ಹೊಂದಿದ್ದರಿಂದ ಶಾಲಾ ಆಡಳಿತವನ್ನು ಅವರ ಮಗ ಕಾಡೂರು ಗಣಪತಿ ಭಟ್ ವಹಿಸಿಕೊಂಡು, ಅವರೇ ಮುಖ್ಯೋಪಾಧ್ಯಾಯರಾಗಿಯೂ, ಅವರ ಪತ್ನಿ ಶ್ರೀಮತಿ ಸರಸ್ವತಿ ಅಮ್ಮನವರು ಶಾಲಾ ಮೆನೇಜರ್ ರಾಗಿಯೂ ಶಾಲೆಯನ್ನು ಮುನ್ನಡೆಸಿದರು.
ಇವರ ಕಾಲದಲ್ಲಿ ಶಾಲೆಗೆ ಶಾಶ್ವತವಾದ ಕಟ್ಟಡಗಳು ನಿರ್ಮಿಸಲ್ಪಟ್ಟವು. ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಹೊಸ ಹೊಸ ಅಧ್ಯಾಪಕರು ನೇಮಿಸಲ್ಪಟ್ಟರು. 1974 ರಲ್ಲಿ ಅವರ ನಿವೃತ್ತಿಯ ನಂತರ 1980 ರ ವರೆಗೆ ಎನ್ . ಕೃಷ್ಣ ಭಟ್ ರವರು , ಮುಖ್ಯ ಅಧ್ಯಾಪಕರಾಗಿದ್ದರು. ತದನಂತರ ಕೆ. ಲೂಯಿಸ್ ಡಿ 'ಸೋಜ , ಕೆ . ಪರಮೇಶ್ವರ ಭಚ್ , ಚೆಲ್ಲಪ್ಪನ್ ಚೆಟ್ಟಿಯಾರ್ ,,ಶ್ರೀಮತಿ ಜಯಲಕ್ಷ್ಮಿ .ಕೆ , ಶಂಕರನಾರಾಯಣ ಭಟ್.ಕೆ ರವರುಗಳು ಶಾಲಾ ಪ್ರಧಾನ ಅಧ್ಯಾಪಕರಾಗಿ ಶಾಲೆಯನ್ನು ಮುನ್ನಡಿಸಿದ್ದಾರೆ. ಪ್ರಸ್ತುತ ಶ್ರೀ ವಸಂತಕುಮಾರಿ ಎಸ್ ರವರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .
1990 ರಲ್ಲಿ ಶಾಲಾ ಮೆನೇಜರ್ ರಾಗಿದ್ದ ಶ್ರೀಮತಿ ಸರಸ್ವತಿ ಅಮ್ಮನವರ ಅಕಾಲ ನಿಧನದ ನಂತರ ಶಾಲಾ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಕಾಡೂರು ಗಣಪತಿ ಭಟ್ ಮತ್ತು ಅವರ ಐವರು ಗಂಡು ಮಕ್ಕಳನ್ನೊಳಗೊಂಡ ಕುಟುಂಬ ಟ್ರಸ್ಟ ಆದ ಶ್ರೀ ದುರ್ಗಾ ಎಜುಕೇಶನ್ ಟ್ರಸ್ಟ್ (ರಿ) ಕಾಡೂರು ಎಂಬ ಟ್ರಸ್ಟ್ ಸ್ಥಾಪನೆಯಾಯಿತು. ಪ್ರಸ್ತುತ ಕಾಡೂರು ಶಂಕರನಾರಾಯಣ ಭಟ್ ರವರ ಪತ್ನಿ ಹಾಗೂ ಟ್ರಸ್ಟಿನ ಸದಸ್ಯೆಯಾದ ಶ್ರೀಮತಿ ಪರಮೇಶ್ವರಿ ಪಿ . ಎಚ್ . ಶಾಲಾ ಮನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಪ್ರಸ್ತುತ ಟ್ರಸ್ಟಿನ ಅಧ್ಯಕ್ಷರಾಗಿ ಕಾಡೂರು ಪುರುಷೋತ್ತಮ ಭಟ್ , ಸದಸ್ಯರಾಗಿ ಕೆ . ಸೀತಾರಾಮ ಭಟ್ , ಕೆ . ಶಂಕರನಾರಾಯಣ ಭಟ್ , ಕೆ.ಬಾಲಕೃಷ್ಣ ಹಾಗೂ ಜಿ.ಕೆ.ಪ್ರಸಾದ್ ಕಾಡೂರು ಇವರುಗಳಿದ್ದಾರೆ .
ಈ ಶೈಕ್ಷಣಿಕ ವರ್ಷದಲ್ಲಿ LKG & UKG ತರಗತಿಗಳಲ್ಲಿ 09 ವಿದ್ಯಾರ್ಥಿಗಳೂ,1ರಿಅಂದ 7ರವರೆಗೆ 144ವಿದ್ಯಾರ್ಥಿಗಳೂ ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ . ಸರಕಾರದಿಂದ ಅಂಗೀಕೃತಗೊಂಡ 11 ಜನ ಅಧ್ಯಾಪಕರೂ ಒರ್ವ ಕಛೇರಿ ಸಿಬ್ಬಂದಿ ಅಲ್ಲದೆ ತಾತ್ಕಾಲಿಕ ನೆಲೆಯಲ್ಲಿ Pre-Primary Teacher , ಅಲ್ಲದೆ NMP Cook ಕೆಲಸ ಮಾಡುತ್ತಿದ್ದಾರೆ .
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
2007ರಲ್ಲಿ ಶಾಲೆಯ ಹಳೆ ಕಟ್ಟಡಗಳನ್ನು ಕೆಡಹಿ ಹೊಸಕಟ್ಟಡಗಳನ್ನು ಕಟ್ಟಲಾಗಿದೆ . ಶಾಲೆಯಲ್ಲಿ ಲೈಬ್ರರಿ ,ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಲ್ಯಾಬ್ , HEAD MASTER ROOM , STAFF ROOM ವ್ಯವಸ್ಥೆಗಳಿವೆ . ಶಾಲೆಯ ಎಲ್ಲಾ ತರಗತಿಗಳಿಗೆ ವಿದ್ಯುಧ್ಧೀಕರಣವಾಗಿದೆ . 2007ರಲ್ಲಿ ಶಾಲಾ ಮಕ್ಕಳ ಉಪಯೋಗಕ್ಕಾಗಿ MLA FUND ನಿಂದ ಆಗಿನ MLA ಆಗಿದ್ದ ಶ್ರೀ. ಸಿ . ಎಚ್ . ಕುಂಞಂಬುರವರು 3 COMPUTER , 1 PRINTER ಹಾಗೂ ಮುಂದಿನ ವರ್ಷ ಕುಡಿನೀರು ಪದ್ಧತಿಗಾಗಿ ಕೊಳವೆ ಬಾವಿ ಹಾಗೂ ಪೈಪ್ ವ್ಯವಸ್ಥೆಗೆ ಅನುದಾನವನ್ನು ಒದಗಿಸಿರುತ್ತಾರೆ . ಶಾಲಾ ಮುಖ್ಯೋಪಾಧ್ಯಾಯಿನಿಯರಾಗಿರುವ ಶ್ರೀಮತಿ ಜಯಲಕ್ಷ್ಮಿ .ಕೆ .ಯವರು 1 COMPUTER ಕೊಟ್ಟಿರುತ್ತಾರೆ . ಹಾಗೇ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ದಿ . ಶ್ಯಾಮ್ ಭಟ್ , ಕೆ . ಸೀತಾರಾಮ ಭಟ್ , ಪುರುಷೋತ್ತಮ ಭಟ್ ರವರು ಶಾಲೆಯ ಅಗತ್ಯಕ್ಕನುಗುಣವಾಗಿ ಧನ ಸಹಾಯವನ್ನಿತ್ತಿದ್ದಾರೆ . ಶಾಲೆಯನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಶಾಲಾ ಆಡಳಿತ ಮಂಡಳಿ, ಮೆನೇಜರ್ , ಮುಖ್ಯೋಪಾಧ್ಯಾಯರು , ಅಧ್ಯಾಪಕ ವೃಂದ , ಸಿಬ್ಬಂದಿ ವರ್ಗ ಹಾಗೂ ಊರವರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ.
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
- ವಿಜ್ಞಾನ ಸಂಘ
- ಸಮಾಜ ವಿಜ್ಞಾನ ಸಂಘ
- ಗಣಿತ ಸಂಘ
- ಆರೋಗ್ಯ ಸಂಘ
- ಇಕೋ ಕ್ಲಬ್
- ಇಂಗ್ಲೀಷ್ ಕ್ಲಬ್
- ಬಾಲ ಸಭೆ
- ಕಲೋತ್ಸವದಲ್ಲಿ ಸಕ್ರಿಯ ಭಾಗವಹಿಸುವಿಕೆ
- ಶುಚಿತ್ವ ಸಂಘ
- ವಿಜ್ಞಾನ ಮತ್ತು ವೃತ್ತಿ ಪರಿಚಯ ಮೇಳ
മാനേജ്മെന്റ് ( ಆಡಳಿತ ವರ್ಗ)
ಶಾಲೆಯ ಸ್ಥಾಪಕರು : ಕಾಡೂರು ಶಂಭು ಭಟ್ (1923 -1956)
ಶ್ರೀಮತಿ ಸರಸ್ವತಿ .ಕೆ (1956 -1990)
ಶ್ರೀಮತಿ ಪರಮೇಶ್ವರಿ ಪಿ .ಎಚ್. (1990 -
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
ಕ್ರಮ ಸಂಖ್ಯೆ | ಮುಖ್ಯ ಶಿಕ್ಷಕರು | ವರ್ಷ |
---|---|---|
1 | ಶ್ರೀ ಕಾಡೂರು ಶಂಭು ಭಟ್ | 1923 -1956 |
2 | ಶ್ರೀ ಪಿ ಕೆ ಸುಬ್ರಾಯ ಭಟ್ | 1956 -1961 |
3 | ಶ್ರೀ ಕಾಡೂರು ಗಣಪತಿ ಭಟ್ | 1961 -1974 |
4 | ಶ್ರೀ ಎನ್ ಕೃಷ್ಣ ಭಟ್ | 1974 -1980 |
5 | ಶ್ರೀ ಕೆ ಕೃಷ್ಣ ಭಟ್ (ಮುಖ್ಯ ಶಿಕ್ಷಕ ಉಸ್ತುವಾರಿ) | 1980 -1982 |
6 | ಶ್ರೀ ಕೆ ಲೂಯಿಸ್ ಡಿ ಸೋಜ (ಮುಖ್ಯ ಶಿಕ್ಷಕ ಉಸ್ತುವಾರಿ) | 1982 -1989 |
7 | ಶ್ರೀ ಕೊಚ್ಚಣ್ಣ ಶೆಟ್ಟಿ | 1989 -1994 |
8 | ಶ್ರೀ ಕೆ ಲೂಯಿಸ್ ಡಿ ಸೋಜ | 1994 -1995 |
9 | ಶ್ರೀ ಕಾಡೂರು ಪರಮೇಶ್ವರ ಭಟ್ | 1995 -2007 |
10 | ಶ್ರೀ ಚೆಲ್ಲಪ್ಪನ್ ಚೆಟ್ಟಿಯಾರ್ | 2007 -2010 |
11 | ಶ್ರೀಮತಿ ಜಯಲಕ್ಷ್ಮಿ ಕೆ | 2010 -2015 |
12 | ಶ್ರೀ ಶಂಕರನಾರಾಯಣ ಭಟ್ | 2015 -2020 |
13 | ಶ್ರೀಮತಿ ವಸಂತ ಕುಮಾರಿ ಎಸ್ | 2020 - |
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
- Shankara Bhat K(Indian postal service Rtd)
- Late.Dr K Ramachandra Bhat(Scientist.USA)
- Dr.K Seetharama Bhat [Additional Director(Rtd),DRDO-Bangalore]
- Dr Vaijayanthi (MD Gynocologist Bangalore)
- Balakrishna K (MBA Chief Accountant Bangalore)
- Dr.Ramaprakash B (M S Phd Bangalore)
- Smt .Vidyasaraswathi B (13th Rank in SSLC selected in USA)
- Dr.Ganesh Prasad S(MD Andaman)
- Dr.Ramaprakash .S (MD Physicial Mangalore)
- Dr.Muralidhara Shetty (Govt.Dr PHC Bayar)
- Dr.Venkataramana Bhat S (Industrialist at Bangalore)
- Dr.Narayana Bhat S(Industrialist at Bangalore)
- Dr.Udaya Kumar .S(BMS Madikeri)
- Jayalaxmi K(Rtd HM Kurudapadavu)
- Shree Kumari K(Rtd HM AUPS Anekallu)
- Shankaranarayana Bhat (Rtd AUPS Kurudapadavu)
- Aboobakkar (HSA Kadambar)
- Gayatri (HM.KVSMHS Kurudapadavu)
- Devanda .K (GLPS Majibailu)
IMAGE GALLERY
MAP
- ಕಾಸರಗೋಡಿನಿಂದ NH 69 ರಲ್ಲಿ 29km ಸಂಚರಿಸಿದರೆ ಹೊಸಂಗಡಿ ತಲುಪುತ್ತದೆ. ಹೊಸಂಗಡಿಯಿಂದ ಕಡಂಬಾರು ದಾರಿಯ ಮೂಲಕ 15km ಸಂಚರಿಸಿದರೆ ಆನೆಕಲ್ಲಿಗೆ ತಲುಪುತ್ತದೆ.ಅಲ್ಲಿಂದ ಬೇಡಗುಡ್ಡೆ ತಿರುವಿನ ಮೂಲಕ 3.7km ಸಂಚರಿಸಿದರೆ, ಸುಂಕದಕಟ್ಟೆ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು.
- ಕಾಸರಗೋಡಿನಿಂದ NH69 ರಲ್ಲಿ 21 km ಸಂಚರಿಸಿದರೆ ಕೈಕಂಬಕ್ಕೆ ತಲುಪಬಹುದು. ಅಲ್ಲಿಂದ ಬಾಯಾರು -ಕನ್ಯಾನ ರಸ್ತೆಯ ಮೂಲಕ 9.6km ಸಂಪರ್ಕಿಸಿದರೆ ಲಾಲ್ ಭಾಗ್ ಗೆ ತಲುಪಬಹುದು. ಅಲ್ಲಿಂದ ಚಿಪ್ಪಾರು ರಸ್ತೆಯ ಮೂಲಕ 7.1km ಸಂಪರ್ಕಿಸಿದರೆ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು.
- ಕಾಸರಗೋಡಿನಿಂದ NH69 ರಲ್ಲಿ 21 km ಸಂಚರಿಸಿದರೆ ಕೈಕಂಬಕ್ಕೆ ತಲುಪಬಹುದು. ಅಲ್ಲಿಂದ ಬಾಯಾರು -ಕನ್ಯಾನ ರಸ್ತೆಯ ಮೂಲಕ 9.6km ಸಂಪರ್ಕಿಸಿದರೆ ಲಾಲ್ ಭಾಗ್ ಗೆ ತಲುಪಬಹುದು.ಅಲ್ಲಿಂದ ಸುಮಾರು 650m ಸಂಚರಿಸಿ,ಎಡಕ್ಕೆ ತಿರುಗಿ ಬೋಳಂಗಲ ರಸ್ತೆಯ ಮೂಲಕ 7.2km ಸಂಚರಿಸಿದರೆ ಕೊಮ್ಮಂಗಳ ದಾರಿಯಾಗಿ ಕುರುಡಪದವು ತಲುಪಬಹುದು. ಕುರುಡಪದವು ಬಸ್ ಸ್ಟಾಂಡ್ ನ ಹತ್ತಿರ 200 ಮೀಟರ್ ದೂರದಲ್ಲಿ ಶಾಲೆ ಇರುವುದು.
{{#multimaps:12.7287879,74.9918306|zoom=16}}