ഹിന്ദു എ യു പി എസ് ചിപ്പാർ(ಹಿಂದೂ ಎ.ಯು.ಪಿ.ಎಸ್ ಚಿಪ್ಪಾರು)/അക്ഷരവൃക്ഷം/ ರೆಕ್ಕೆ ಬಲಿತ ಮೇಲೆ

Schoolwiki സംരംഭത്തിൽ നിന്ന്
ರೆಕ್ಕೆ ಬಲಿತ ಮೇಲೆ
 


ಮನೆಯಂಗಳದ ಮರದಿ ಕಾಗೆ
ಗೂಡು ಕಟ್ಟಿತು
ಮರುದಿನವೇ ಅದರಲೊಂದು
ಮೊಟ್ಟೆ ಇಟ್ಟಿತು॥
ಕಾವು ಕೊಟ್ಟು ಮೊಟ್ಟೆ ಬಿರಿದು
ಮರಿಯು ಹುಟ್ಟಿತು
ದಿನವು ಕಳೆದು ಮರಿಗೆ ಸಣ್ಣ
ಗರಿಯು ಮೂಡಿತು ॥
ರೆಕ್ಕೆ ಹುಟ್ಟಿದಾಗ ಮನದಿ
ಆಸೆ ಮೊಳೆಯಿತು
ಗೂಡಿನಿಂದ ಹೊರಗೆ ಬಂದು
ಇಣುಕಿ ನೋಡಿತು॥
ಎಲೆಯ ಅಡಿ ಯಲ್ಲೊಂದು ಹಳದಿ
ಹಣ್ಣು ಕಂಡಿತು
ಹಣ್ಣು ನೋಡಿ ಆಸೆಯಿಂದ
ಮೇಲೆ ಹಾರಿತು ॥
ರೆಕ್ಕೆ ಬಲಿಯ ದಂತ ಹಕ್ಕಿ
ಕೆಳಗೆ ಬಿದ್ದಿತು
ಮೇಲೆ ಇದ್ದ ತಾಯಿ ಹಕ್ಕಿ
ಮರಿಯ ಕಂಡಿತು ॥
ಹಾರಿ ಬಂದು ತನ್ನ ಮರಿಯ
ಎತ್ತಿಕೊಂಡಿತು
ಗೂಡಿನೊಳಗೆ ಮರಿಯ ನಿಟ್ಟು
ಸಾರಿ ಹೇಳಿತು ॥
ರೆಕ್ಕೆ ಬಲಿವ ಮೊದಲು ತಾಯ
ಜೊತೆಯೊಳಿರುವುದು
ಪುಕ್ಕ ಬಲಿತ ಮೇಲೆ ತಾಯ
ಮರೆಯದಿರುವುದು ॥


kadeeja safa
4 A Hindu A.U.P.School chippar
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത