സ്വാമീജീസ് എച്ച്. എസ്. എസ്. എട്നീർ/അക്ഷരവൃക്ഷം/ ದುಷ್ಟ ಸಂಹಾರ

Schoolwiki സംരംഭത്തിൽ നിന്ന്
ದುಷ್ಟ ಸಂಹಾರ

 
ದುಷ್ಟ ಸಂಹಾರ


ಒಂಟಿಯಾಗಿ ನಡೆದಾಡಲು
ಮನದೊಳಗೇ ಅಂಜಿಕೆ
ಕಾಯುತಿರುವ ನಾಯಿಯೇ
ಕಡಿಯುವೆಯಾ ಜೀವಕೆ

ನಿನ್ನ ವಕ್ರ ದೃಷ್ಟಿಯಿಂದ
ಕಬಳಿಸುವೆಯಾ ನನ್ನನೇ
ಮೋಸದಿಂದ ಹೆಣೆದ ಬಲೆಗೆ
ಬೇಳೆ ನಾನು ಸುಮ್ಮನೆ

ನಾ ಚಿಕ್ಕ ಬೆಕ್ಕು ಮರಿಯೆಂದು
ಸೊಕ್ಕು ಇದೆಯೇ ನಿನ್ನಲ್ಲಿ
ನಿನ್ನ ಜಾಲ ತಪ್ಪಿಸುವ
ತಂತ್ರ ಬಲವು ನನ್ನಲಿ

ನಿನ್ನ ದಾಹ ತೀರಿಸಲು
ನಾನೇ ಏಕೆ ನಿನಗೆ ಗುರಿ
ಕಾಯುವುದೇ ನಿನ್ನ ಕೆಲಸ
ಮರೆಯದಿರು ಖಚಿತ ಗುರಿ

ಶಿಷ್ಟ ನಾಯಿ ಬುದ್ದಿ ನಿನ್ನದಲ್ಲ
ದುಷ್ಟನೆಂದರೂ ತಪ್ಪೇನಿಲ್ಲ
ನಿನ್ನಂತಹ ಕ್ರೂರಿಯಿಂದಾ
ಭಯ ತುಂಬಿದೆ ಜಗವೆಲ್ಲ

ಸಜ್ಜನರಿರುವ ಈ ನಾಡಲಿ
ಯಾಕೆ ನಿನ್ನ ಕಾಕ ದೃಷ್ಠಿ
ಮರುಕವಿಲ್ಲಾದ ನಿನ್ನಿಂದ
ಕೊಳಕಾಗಿದೆ ಈ ಸೃಷ್ಟಿ

ಸದೆ ಬಡಿಯಲು ನಿನ್ನ ಸೊಕ್ಕು
ತೊಟ್ಟಿರುವೆ ನಾ ಪಣ
ದುಷ್ಟ ಜನರ ಸಂಹಾರಕೆ
ಪ್ರಾರ್ಥಿಸುವೆ ಪ್ರತಿ ಕ್ಷಣ

       ಪ್ರಿಯಾ ಸಾಯ

PRIYA SAYA(ADYANADKA)
11 B സ്വാമീജീസ് എച്ച്. എസ്. എസ്. എട്നീർ
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത



 സാങ്കേതിക പരിശോധന - Vijayanrajapuram തീയ്യതി: 01/ 05/ 2020 >> രചനാവിഭാഗം - കവിത